ದರ್ಶನ್‌ ಪರ ಬ್ಯಾಟ್‌ ಬೀಸಿದ್ದವರು ಬಿಗ್‌ ಬಾಸ್‌ ಮನೆಗೆ, ವೋಟ್ ಗಿಟ್ಟಿಸಿಕೊಳ್ಳೋ ಗಿಮಿಕ್ ಎಂದ ಫ್ಯಾನ್ಸ್

Published : Sep 30, 2024, 04:52 PM IST
ದರ್ಶನ್‌ ಪರ ಬ್ಯಾಟ್‌ ಬೀಸಿದ್ದವರು ಬಿಗ್‌ ಬಾಸ್‌ ಮನೆಗೆ, ವೋಟ್ ಗಿಟ್ಟಿಸಿಕೊಳ್ಳೋ ಗಿಮಿಕ್ ಎಂದ ಫ್ಯಾನ್ಸ್

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಆಗಿದೆ. ಇನ್ನೇನಿದ್ರು ಆಟ ಶುರುವಾಗೋದೊಂದೇ ಬಾಕಿ. ಈ ಮಧ್ಯೆ ಬಿಗ್ ಬಾಸ್ ಮನೆಗೆ ನಟ ದರ್ಶನ್ ಆಪ್ತರು ಎಂಟ್ರಿಕೊಟ್ಟಿದ್ದಾರೆ.   

ಬಿಗ್ ಬಾಸ್ ಕನ್ನಡ 11 (Bigg Boss Kannada 11 ) ಶುಭಾರಂಭಗೊಂಡಿದೆ. 17 ಸ್ಪರ್ಧಿಗಳು ಈಗಾಗಲೇ ಮನೆ ಸೇರಿದ್ದಾರೆ. ನರಕ ಹಾಗೂ ಸ್ವರ್ಗ ಥೀಮ್ ನಲ್ಲಿ ಈ ರಿಯಾಲಿಟಿ ಶೋ (reality show) ನಡೆಯುತ್ತಿದ್ದು, ಇನ್ಮುಂದೆ ಮನೆ ರಣಾಂಗಣವಾಗೋದು ನಿಶ್ಚಿತ. ಮೊದಲೇ ದಿನವೇ ಕಿತ್ತಾಟ, ಕೆಣಕಾಟ ನಿಧಾನವಾಗಿ ಶುರುವಾಗಿದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳಲ್ಲಿ ಕಾಮನ್ ವಿಶೇಷತೆಯೊಂದು ಗಮನ ಸೆಳೆದಿದೆ.

ನಟ ದರ್ಶನ್ ಜೈಲು ಸೇರಿದ ಮೇಲೆ ಅವರ ಪರ ಅನೇಕರು ಧ್ವನಿ ಎತ್ತಿದ್ದಾರೆ. ನಟ ದರ್ಶನ್ ಪರ ಮಾತನಾಡಿದ ಸೆಲೆಬ್ರಿಟಿಗಳಲ್ಲಿ ಐದು ಮಂದಿ ಈಗ ಬಿಗ್ ಬಾಸ್ ಮನೆ ಸೇರಿದ್ದಾರೆ. ಈ ಪಟ್ಟಿಯಲ್ಲಿ ಮೊದಲು ಬರೋದು ಧರ್ಮ ಕೀರ್ತಿರಾಜ್ (Dharma Keerthiraj). ಸ್ಯಾಂಡಲ್ವುಡ್ ವಿಲನ್ ಕೀರ್ತಿರಾಜ್ ಮಗ ಹಾಗೂ ನವಗ್ರಹದ ನಟ ಧರ್ಮ ಕೀರ್ತಿರಾಜ್, ದರ್ಶನ್ ಆಪ್ತರ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ. ದರ್ಶನ್ ಜೊತೆ ಸದಾ ನಿಲ್ಲುವ ಸ್ನೇಹಿತರ ಗುಂಪಿನಲ್ಲಿ ಧರ್ಮ ಕೂಡ ಸೇರಿದ್ದು, ದರ್ಶನ್ ಅಭಿಮಾನಿಗಳು ಈಗ್ಲೇ ಧರ್ಮ ಪರ ವೋಟ್ ಹಾಕಲು ಮುಂದಾಗಿದ್ದಾರೆ. 

ಹೆರಿಗೆ ನಂತ್ರ ದೀಪಿಗೆ ಕಾಡ್ತಿದ್ಯಾ ಒಂಟಿತನ..? ರಣವೀರ್ ಬಗ್ಗೆ ಇಂಥ ಸ್ಟೋರಿ ಹಾಕಿದ ಬೆಡಗಿ

ಇನ್ನು ಎರಡನೇ ಹೆಸರು ಲಾಯರ್ ಜಗದೀಶ್ (Lawyer Jagadish). ಇವರು ಬಿಗ್ ಬಾಸ್ ಗೆ ಬರ್ತಿದ್ದಾರೆ ಎಂದ ತಕ್ಷಣ, ದರ್ಶನ್ ಗೆ ನ್ಯಾಯಕೊಡಿಸೋರು ಯಾರು ಎನ್ನುವ ಪ್ರಶ್ನೆ ಫ್ಯಾನ್ಸ್ ತಲೆಯಲ್ಲಿ ಬಂದಿದೆ. ದರ್ಶನ್ ವಿಷ್ಯಕ್ಕೆ ಅಷ್ಟೊಂದು ಫೇಮಸ್ ಆದವರು ಲಾಯರ್ ಜಗದೀಶ್. ದರ್ಶನ್ ಪರ ಮಾತನಾಡಿದ ಅನೇಕ ವಿಡಿಯೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಮೊದಲ ಸ್ಪರ್ಧಿಯಾಗಿ, ಗೀತಾ ಫೇಮ್ ನ ಭವ್ಯಾ ಗೌಡ (Bhavya Gowda) ಜೊತೆ ಬಿಗ್ ಬಾಸ್ ಮನೆಯೊಳಗೆ ಹೋದ ನಟಿ ಯಮುನಾ ಶ್ರೀನಿಧಿ (Yamuna Srinidhi) ಕೂಡ ಈ ಲೀಸ್ಟ್ ನಲ್ಲಿದ್ದಾರೆ. ಇವರೂ ದರ್ಶನ್ ಪರ ಮಾತನಾಡಿದ್ದರು. ನಿಮ್ಮ ಮೇಲಿನ ಭಾವನೆ ಎಂದೂ ಬದಲಾಗುವುದಿಲ್ಲ ದರ್ಶನ್ ಸರ್ ಎಂದು ಯಮುನಾ ಶ್ರೀನಿಧಿ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಕಾನೂನಿನ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ, ಆದ್ರೆ ಮಕ್ಕಳು ತಪ್ಪು ಮಾಡಿದಾಗ ಪಾಲಕರಿಗೆ ಮಕ್ಕಳ ಮೇಲಿನ ಪ್ರೀತಿ ಕಡಿಮೆ ಆಗುವುದಿಲ್ಲ. ಅದರಂತೆ ನಿಮ್ಮ ಮೇಲಿನ ಭಾವನೆ ಬದಲಾಗುವುದಿಲ್ಲ. ದರ್ಶನ್ ಅಭಿಮಾನಿಗಳು ತಾಳ್ಮೆ ಕಳೆದುಕೊಳ್ಳಬಾರದು ಎಂದಿದ್ದರು.

ಇನ್ನು ಬಿಗ್ ಬಾಸ್ ಮನೆಗೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ನಟ ರಂಜಿತ್ (Actor Ranjith) ಕೂಡ ದರ್ಶನ್ ಪರ ಮಾತನಾಡಿದ್ದರು. ಶನಿ ಧಾರಾವಾಹಿಯಲ್ಲಿ ಸೂರ್ಯನ ಪಾತ್ರ ಮಾಡಿದ್ದ ರಂಜಿತ್, ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದರು. ದರ್ಶನ್ ಮತ್ತೆ ಅವರ ಸಹಚರರು ಮಾಡಿದ್ದು ತಪ್ಪು, ರೇಣುಕಾಸ್ವಾಮಿಯೆಂಬ ವಿಕೃತಕಾಮಿಯ ವರ್ತನೆ ಸರಿ ಇದೇಯಾ ತಿಳಿಸಿ ಎಂದು ಬರೆದಿದ್ದರು. ಇದಕ್ಕೆ ಸಾಕಷ್ಟು ಪರ – ವಿರೋಧಗಳು ಕೇಳಿ ಬಂದಿದ್ದವು.

ಸ್ಯಾಂಡಲ್ವುಡ್ ನಟಿ, ದರ್ಶನ್ ಆಪ್ತರ ಟೀಂನಲ್ಲಿ ಗುರುತಿಸಿಕೊಂಡಿರುವ ಅನುಷಾ ರೈ (Anusha Rai) ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಸ್ವಭಾವದ ಬಗ್ಗೆ ಮಾತನಾಡಿದ್ದ ಅನುಷಾ ರೈ, ದರ್ಶನ್ ಪರಿಸ್ಥಿತಿ ನೋಡಿದ್ರೆ ಸಂಕಟವಾಗುತ್ತೆ. ಅವರು ತಪ್ಪು ಮಾಡಿದ್ದಾರೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. 

2 ವರ್ಷಗಳ ನಂತರ ಮತ್ತೆ ಬಂದ ಸಾಯಿ ಪಲ್ಲವಿ; ತಂಗಿ ಮದ್ವೆಯ ಮೋಜು ಮಸ್ತಿ ಮುಗೀತಾ ಎಂದು ಕಾಲೆಳೆದ ನೆಟ್ಟಿಗರು!

ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ, ಬಿಗ್ ಬಾಸ್ ಮನೆ ಸೇರಿರುವ ಐದು ಸ್ಪರ್ಧಿಯಲ್ಲಿ ಇಬ್ಬರು ನರಕ ಸೇರಿದ್ರೆ ಉಳಿದವರು ಸ್ವರ್ಗದಲ್ಲಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಮಾತ್ರ, ಇವರ್ಯಾರು ದರ್ಶನ್ ಗೆ ಬೆಂಬಲ ನೀಡಿಲ್ಲ. ಫೇಮಸ್ ಆಗಿ ಬಿಗ್ ಬಾಸ್ ಮನೆಗೆ ಹೋಗೋದು ಇವರ ಉದ್ದೇವಾಗಿತ್ತು. ಹಾಗೇ ದರ್ಶನ್ ಬಗ್ಗೆ ಮಾತನಾಡಿದ್ರೆ ದರ್ಶನ್ ಅಭಿಮಾನಿಗಳ ವೋಟು ಗಿಟ್ಟಿಸಿಕೊಳ್ಳಬಹುದೆಂಬ ಆಸೆ ಇವರದ್ದು ಎನ್ನುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?