ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಲ್ಲದೇ ಅಭಿವೃದ್ಧಿ ಪರ ಕೆಲಸಗಳಿಗೂ ಅನುದಾನ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ವಿಶೇಷವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಮುಧೋಳ (ಸೆ.30): ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಲ್ಲದೇ ಅಭಿವೃದ್ಧಿ ಪರ ಕೆಲಸಗಳಿಗೂ ಅನುದಾನ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ವಿಶೇಷವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ತಾಲೂಕಿನ ಚನ್ನಾಳ, ಜಾಲಿಬೇರ, ಮಂಟೂರ, ಹಲಗಲಿ ಮತ್ತು ಜಿರಗಾಳ ಗ್ರಾಮಗಳಲ್ಲಿ ₹218.44 ಲಕ್ಷ ಅನುದಾನದಡಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಅಡಿಗಲ್ಲು, ಉದ್ಘಾಟನೆ ಸಮುದಾಯ ಭವನಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
₹10 ಲಕ್ಷ ಅನುದಾನದಲ್ಲಿ ಜಾಲಿಬೇರಿ ಕ್ರಾಸ್‌ನಲ್ಲಿ ಬಸ್ ನಿಲ್ದಾಣಕ್ಕೆ ಭೂಮಿಪೂಜೆ, ₹45 ಲಕ್ಷ ಅನುದಾನದಲ್ಲಿ ಮಂಟೂರ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ಮತ್ತು ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಸಮುದಾಯ ಭವನಕ್ಕೆ ಭೂಮಿಪೂಜೆ, ₹57.04 ಲಕ್ಷ ಅನುದಾನದಲ್ಲಿ ಮಂಟೂರ ಗ್ರಾಮದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ಣ ಬಾಲಕರ ವಸತಿ ನಿಲಯಕ್ಕೆ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ, ₹27.80 ಲಕ್ಷ ಅನುದಾನದಲ್ಲಿ ಹಲಗಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಎರಡು ಕೊಠಡಿಗಳ ಉದ್ಘಾಟನೆ, ₹20 ಲಕ್ಷ ಅನುದಾನದಲ್ಲಿ ಹಲಗಲಿ ಗ್ರಾಮದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಭೂಮಿಪೂಜೆ.
undefined
ಗೆಲ್ಲುವ ಯೋಗ್ಯತೆ ಇಲ್ಲದ ಬಿ.ಎಲ್.ಸಂತೋಷ್ ರಾಜ್ಯ ನಿಯಂತ್ರಿಸ್ತಿದಾರೆ: ಸಚಿವ ಆರ್.ಬಿ.ತಿಮ್ಮಾಪುರ
₹7.10 ಲಕ್ಷ ಅನುದಾನದಲ್ಲಿ ಹಲಗಲಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿಗೆ ಭೂಮಿಪೂಜೆ, ₹5 ಲಕ್ಷ ಅನುದಾನದಲ್ಲಿ ಹಲಗಲಿಯಲ್ಲಿ ಗ್ರಾಮದ ಪಿ.ಹೆಚ್.ಸಿ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ₹18 ಲಕ್ಷ ಅನುದಾನದಲ್ಲಿ ಹಲಗಲಿ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ, ₹25 ಲಕ್ಷ ಅನುದಾನದಲ್ಲಿ ಹಲಗಲಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಕೋಣೆ ಉದ್ಘಾಟನೆ, ₹3.50 ಲಕ್ಷ ಅನುದಾನದಲ್ಲಿ ಜೀರಗಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನೆರವೇರಿಸಿದ್ದೇನೆ.
ಅಲ್ಲದೇ ಚನ್ನಾಳ ಗ್ರಾಮದ ಗಂಗಾ ಪರಮೇಶ್ವರ ಮೀನುಗಾರಿಕೆ ಸಂಘವನ್ನು ಉದ್ಘಾಟಿಸಿದ್ದೇನೆ. ಮಂಟೂರ ಗ್ರಾ.ಪಂ ಕಟ್ಟಡಕ್ಕೆ ನಿವೇಶನ ನೀಡಿದ ಗ್ರಾಮದ 18 ಜನ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದೇನೆಂದು ಹೇಳಿದ ಅವರು ಇವೆಲ್ಲವೂ ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿಯಾಗಿವೆ ಎಂದರು.ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ, ಜನಪರ, ಬಡವರ ಪರ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಪರವಾಗಿದೆ. ಆದರೆ ವಿರೋಧ ಪಕ್ಷದವರು ಕಾಂಗ್ರೆಸ್ ಸರ್ಕಾರ ಏನೂ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲವೆಂದು ಟೀಕೆ ಮಾಡುತ್ತಿದೆ. ಹಾಗಾದರೆ ನಾವಿಂದು ಭೂಮಿಪೂಜೆ, ಅಡಿಗಲ್ಲು, ಶಂಕುಸ್ಥಾಪನೆ, ಉದ್ಘಾಟನೆ ನೀಡಿರುವುದು ಅವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯಪಾಲರ ಷಡ್ಯಂತ್ರಕ್ಕೆ ನಾವು ಬಲಿಯಾಗಲ್ಲ: ಸಚಿವ ಆರ್.ಬಿ.ತಿಮ್ಮಾಪುರ
ಇನ್ನೂ ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಟೀಕೆ ಮಾಡುವವರಿಗೆ ತಕ್ಕ ಉತ್ತರ ನೀಡುತ್ತೇವೆಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಗೋವಿಂದಪ್ಪ ಗುಜ್ಜನ್ನವರ, ಗಿರೀಶಗೌಡ ಪಾಟೀಲ, ಉದಯಕುಮಾರ ಸಾರವಾಡ, ರಾಜು ಬಾಗವಾನ, ಸದುಗೌಡ ಪಾಟೀಲ, ಸಂಜಯ ತಳೇವಾಡ, ಮಹಾಂತೇಶ ಮಾಚಕನೂರ, ಚಿನ್ನು ಅಂಬಿ, ಮುದಕಣ್ಣ ಅಂಬಿಗೇರ, ಕಲ್ಮೇಶ ಪಂಚಗಾಂವಿ, ಸತ್ಯಪ್ಪ ಹೂಗಾರ, ಮಾನಿಂಗಪ್ಪ ತಟ್ಟಿಮನಿ, ಶಂಕ್ರೆಪ್ಪ ಅಂಬಿ, ಡಾ.ಅಶೋಕ ಸೂರ್ಯವಂಶಿ, ಮೋಹನ ಕೋರಡ್ಡಿ, ಮಹೇಶ ದಂಡೆನ್ನವರ, ರಾಜು ವಾರದ, ಹೆಚ್.ಎಲ್.ಮೆಟಗುಡ್ಡ, ಉಮೇಶ ಸಿದ್ನಾಳ, ಮಹಾದೇವ ಸನಮುರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.