ಡೆಡ್ಲಿ ಕೊರೋನಾಗೆ ಮತ್ತೊಬ್ಬ ಶಾಸಕ ಬಲಿ!

Jun 24, 2020, 2:47 PM IST

ಕೋಲ್ಕತ್ತಾ(ಜೂ.24): ಡೆಡ್ಲಿ ಕೊರೋನಾಗೆ ಮತ್ತೊಬ್ಬ ಶಾಸಕ ಬಲಿಯಾಗಿದ್ದಾರೆ.. ತಮಿಳುನಾಡು ಬಳಿಕ ಪಶ್ಚಿಮ ಬಂಗಾಳದ ಟಿಎಂಸಿ ಪಕ್ಷದ ಶಾಸಕ ಕೊರೋನಾದಿಂದ ಕೊನೆಯುಸಿರೆಳೆದಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಪ್ತರಲ್ಲಿ ಗುರುತಿಸಿಕೊಂಡಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ 60 ವರ್ಷದ ತಮೋನಾಶ್ ಘೋಷ್ ಈ ಮಹಾಮಾರಿಗೆ ಬಲಿಯಾಗಿದ್ದಾರೆ.

ಘೋಷ್ ಅಗಲುವಿಕೆ ಹಿನ್ನೆಲೆ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್  ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಶಾಸಕ ಅನ್ಬಳಗನ್ ಕೊರೋನಾದಿಂದ ಮೃತಪಟ್ಟಿದ್ದರು.