ದೇಶದ ಅತೀ ದೊಡ್ಡ ರಾಜ್ಯದ ಸಿಎಂ ಯೋಗಿ ತಂಗಿ, ಪುಟ್ಟದೊಂದು ಅಂಗಡಿ ನಡೆಸಿ ಜೀವನ!

Mar 6, 2022, 6:37 PM IST

ಲಕ್ನೋ(ಮಾ.06): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೆ ಸಿಎಂ ಆಗ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗೋದು ಮಾರ್ಚ್ 10 ರಂದು. ಆದರೀಗ ಇವೆಲ್ಲದರ ನಡುವೆ ಯೋಗಿ ಆದಿತ್ಯನಾಥ್ ತಂಗಿ ಬಹಳಷ್ಟು ಸದ್ದು ಮಾಡುತ್ತಿದ್ದಾರೆ. ಹೌದು ರಿಷಿಕೇಶದಲ್ಲಿ ಹೂವಿನ ವ್ಯಾಪಾರ ನಡೆಸುತ್ತಾ ಜೀವನ ಸಾಗಿಸ್ತಿರೋ ಬಡ ತಂಗಿ. ಯೋಗಿ ತಂಗಿಯ ಕುರಿತು ನೀವು ಕೇಳಿರದ ಕುತೂಹಲಕಾರಿ ವಿಚಾರ

ಹೌದು ಯೋಗಿ ಆದಿತ್ಯನಾಥ್ ಸಿಎಂ ಆದರೂ ಸರಳತೆಗೆ ಹೆಸರುವಾಸಿ, ಅಂತೆಯೇ ಅವರ ಕುಟುಂಬವೂ ಇದೇ ಸರಳತೆ ಅನುಸರಿಸಿದೆ. ಮನೆ ಮಗ ಸಿಎಂ ಆದರೂ ಈ ಕುಟುಂಬ ಸ್ವಾವಲಂಭಿಯಾಗಿ ಬದುಕುತ್ತಿದೆ. ಇದಕ್ಕೆ ಯೋಗಿ ಆದಿತ್ಯನಾಥ್ ಕಿರಿಯ ಸಹೋದರಿ ಮತ್ತೊಂದು ಉದಾಹರಣೆ. ಅವರು ತಮ್ಮದೇ ಆದ ಚಿಕ್ಕದೊಂದು ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿದ್ದಾರೆ. ಇಲ್ಲಿದೆ ಈ ಕುರಿತಾದ ಹೆಚ್ಚಿನ ವಿವರ