ಭಾರತದ ಹತೋಟಿಯಲ್ಲಿರಲಿದೆ ಪಾಕ್ ಆಕ್ರಮಿತ ಕಾಶ್ಮೀರ! ಆಪರೇಷನ್ ಪಿಒಕೆ-ಅಸಲಿ ಕತೆ ಏನು..?

Dec 12, 2023, 2:39 PM IST

ಭಾರತವನ್ನ ರಾಜಕೀಯವಾಗಿ ನೋಡೋದಾದ್ರೆ, ಬೇರೆಲ್ಲಾ ರಾಜ್ಯಗಳಿಗಿಂತ ಭಿನ್ನವಾಗಿ ಕಾಣೋದು, ಜಮ್ಮು ಮತ್ತು ಕಾಶ್ಮೀರ(Jammu kashmir). ಅದಕ್ಕೆ ಮುಖ್ಯ ಕಾರಣ, ನಮ್ಮ ಶತ್ರುದೇಶ ಪಾಕಿಸ್ತಾನ(Pakisthan). ಮತ್ತೆ ಮತ್ತೆ ಆ ಭೂಮಿಗೋಸ್ಕರ ಕಿತಾಪತಿ ತೆಗೀತಿತ್ತು ಪಾಕ್. ಆದ್ರೆ, ಪಾಪಿ ದೇಶದ ಆ ಪರಮಘಾತುಕ ದುರಾಸೆಗೆ ಭಾರತ ತೊಡೆತಟ್ಟಿನಿಂತಿರೋದ್ರಿಂದಲೇ, ಕಣಿವೆ ರಾಜ್ಯ ಕಂಪ್ಲೀಟ್ ಡಿಫರೆಂಟ್ ಅನ್ನಿಸಿಕೊಳ್ಳುತ್ತೆ. ಜಮ್ಮು ಮತ್ತು ಕಾಶ್ಮೀರ ಭಾರತದ ರಾಜ್ಯವೇ ಆಗಿದ್ರೂ, ಅದಕ್ಕೆ ನೀಡಲಾಗಿದ್ದ ಪ್ರತ್ಯೇಕ ಸ್ಥಾನಮಾನ, ಅದು ನಮ್ಮಿಂದ ಬೇರೆಯೇನೋ ಅನ್ನೋ ಭಾವನೆ ಮೂಡಿಸಿತ್ತು. ಆದ್ರೆ ಯಾವಾಗ, ಮೋದಿ ಸರ್ಕಾರ ಎರಡನೇ ಬಾರಿಗೆ ಅಸ್ತಿತ್ವಕ್ಕೆ ಬಂತೋ, ಆಗ ಮೋದಿ ಸರ್ಕಾರ ಕೈಗೆತ್ತಿಕೊಂಡ ಮಹತ್ವದ ನಿರ್ಧಾರ, ಕಣಿವೆ ರಾಜ್ಯದ ಚಿತ್ರಣವನ್ನೇ ಬದಲಾಯಿಸಿತ್ತು.ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಪೆಷಲ್ ಸ್ಟೇಟಸ್ ಕೊಟ್ಟಿದ್ದ ಆರ್ಟಿಕಲ್ 370ನ್ನ(370 abrogation) ಕಿತ್ತು ಹಾಕಿದ್ದಲ್ಲದೆ, ಕಣಿವೆ ರಾಜ್ಯವನ್ನ ಕೇಂದ್ರಾಡಳಿತ ಪ್ರದೇಶ ಮಾಡಿದ್ರು. ಆ ದಿನ ಅಮಿತ್ ಶಾ ಅವರ ಈ ಮಾತುಗಳು, ದೇಶದಲ್ಲೇ ಸಂಚಲನ ಸೃಷ್ಟಿಸಿದ್ದಂತೂ ಸುಳ್ಳಲ್ಲ. ಅದಾಗಿ 4 ವರ್ಷಗಳೇ ಕಳೆದಿವೆ. ಈಗ ಅದರ ಎಫೆಕ್ಟ್, ಇಂಪ್ಯಾಕ್ಟ್, ಕಣ್ಮುಚ್ಚಿ ಕೂತವರಿಗೂ ಮನದಟ್ಟಾಗೋ ಮಟ್ಟಕ್ಕೆ ಉಂಟಾಗಿದೆ. ಮೋದಿ ಸರ್ಕಾರದ ಅತಿ ದೊಡ್ಡ ಸಾಧನೆಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲೋದು ಕಾಶ್ಮೀರದ ಸ್ಪೆಷಲ್ ಸ್ಟೇಟಸ್  ರಿಮೂವ್ ಮಾಡಿದ್ದು. ಈ ಕಾರ್ಯದಿಂದ, ಇನ್ಮುಂದೆ ಕಾಶ್ಮೀರದಲ್ಲಿ ಭಯೋತ್ಪಾದನೆಯೇ ಇರಲ್ಲ ಅಂತ ನಂಬಲಾಗಿತ್ತು. ಈಗ ಆ ಮಾತಿಗೆ ಪುರಾವೆ ಕೂಡ ಸಿಕ್ಕಂತಾಗಿದೆ. ಮೋದಿ ಹಾಗೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನೇನು ಹೇಳಿತ್ತೋ, ಅದೀಗ ನಿಜವಾಗಿದೆ ಅನ್ನೋ ಭರವಸೆ ಮೂಡಿದೆ.

ಇದನ್ನೂ ವೀಕ್ಷಿಸಿ:  ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವುದು ತಲೆ ತಗ್ಗಿಸುವ ಕೃತ್ಯ, ಅಕ್ಷಮ್ಯ ಅಪರಾಧ: ಬಿ.ವೈ. ವಿಜಯೇಂದ್ರ