ಸಿನಿಮಾನೂ ಇಲ್ಲ.. ರಾಜಕೀಯವೂ ಇಲ್ಲ.. ನಿಖಿಲ್ ಅತಂತ್ರ! ಕುರುಕ್ಷೇತ್ರ ಸಿನಿಮಾದಿಂದ ಅಂಟಿತಾ ನಿಖಿಲ್​ಗೆ ಶಾಪ?

By Vaishnavi Chandrashekar  |  First Published Nov 25, 2024, 2:21 PM IST

'ಸೈನಿಕ’ನ ಎದುರು ಸೋತು ಸುಣ್ಣವಾದ ಅಭಿಮನ್ಯು. ಸತತ 3ನೇ ಸೋಲು.. ಯುವರಾಜನ ಬೆಂಬಿಡದ ದುರಾದೃಷ್ಟ.


ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದ ನಿಖಿಲ್ ಕುಮಾರಸ್ವಾಮಿ ರಿಯಲ್ ಲೈಫ್‌ನಲ್ಲೂ ಅಭಿಮನ್ಯುವಿನಂತೆಯೇ ಆಗಿ ಹೋಗಿದ್ದಾರೆ. ರಾಜಕೀಯ ಚಕ್ರವ್ಯೂಹದಲ್ಲಿ ಸತತ ಮೂರನೇ ಬಾರಿ ಸೋತಿರೋ ನಿಖಿಲ್ ನಿರಾಸೆ ಅನುಭವಿಸಿದ್ದಾರೆ. ಅಲ್ಲಿಗೆ ಸಿನಿಮಾನೂ ಇಲ್ಲ. ರಾಜಕೀಯದಲ್ಲೂ ಸಲ್ಲದ ನಿಖಿಲ್ ಅಕ್ಷರಶಃ ಅತಂತ್ರನಾಗಿದ್ದಾರೆ.ಯೆಸ್! ಸ್ಯಾಂಡಲ್​ವುಡ್​ನಲ್ಲಿ ಯುವರಾಜ ಅಂತ ಕರೆಸಿಕೊಂಡಿದ್ದ ನಿಖಿಲ್ ರಾಜಕೀಯ ರಣರಂಗದಲ್ಲಿ ಮತ್ತೊಮ್ಮೆ ಸೋಲು ಕಂಡಿದ್ದಾರೆ. ನಿಖಿಲ್ ಎದುರು ಗೆದ್ದು ಬೀಗಿರೋ ಸಿ.ಪಿ.ಯೋಗಿಶ್ವರ್ ಕೂಡ ಸಿನಿಮಾರಂಗದವರೇ. ಎರಡು ದಶಕದ ಹಿಂದೆ ನಟ-ನಿರ್ಮಾಪಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಯೋಗೀಶ್ವರ್ ಸೈನಿಕ ಅಂತಲೇ ಫೇಮಸ್ ಆಗಿದ್ದವರು.

ಈ ಸೈನಿಕ ಈಗ ಫುಲ್ ಟೈಂ ರಾಜಕಾರಣಿಯಾಗಿದ್ದಾರೆ. ಆದ್ರೆ ಸಿನಿಮಾ ಮತ್ತು ರಾಜಕೀಯ ಎರಡಲ್ಲೂ ಒಂದೊಂದು ಹೆಜ್ಜೆ ಇಟ್ಟಿದ್ದ ನಿಖಿಲ್, ಇತ್ತ ಸಿನಿಮಾದಲ್ಲೂ ಅತ್ತ ರಾಜಕೀಯದಲ್ಲೂ ನೆಲೆಕಾಣದೇ ಅತಂತ್ರವಾಗಿದ್ದಾರೆ. ಸೈನಿಕನ ಎದುರು ಅಭಿಮನ್ಯು ಪರಾಭವಗೊಂಡಿದ್ದಾರೆ. ನಿಖಿಲ್ ತಂದೆ ಹೆಚ್.ಡಿ ಕುಮಾರ್​ಸ್ವಾಮಿ ಕೂಡ ಮೊದಲು ಸಿನಿರಂಗದಲ್ಲಿ ಆಕ್ಟಿವ್ ಆಗಿದ್ದವರು. ವಿತರಕ ನಿರ್ಮಾಪಕನಾಗಿನ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ನಿಖಿಲ್ ಕೂಡ ಸಿನಿಮಾರಂಗದತ್ತ ಆಸಕ್ತಿ ಬೆಳೆಸಿಕೊಂಡರು. ನಟನೆಯ ಪಾಠ ಕಲಿತುಕೊಂಡು ಬಂದು ತಮ್ಮದೇ ಹೋಂ ಬ್ಯಾನರ್​ನ ಜಾಗ್ವಾರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಲಾಂಚ್ ಆದ್ರು. 

Tap to resize

Latest Videos

ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಡ್ರೆಸ್‌ ಮಾಡಿಕೊಳ್ಳುತ್ತಿರುವ ಫೋಟೋ ಲೀಕ್

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಜಾಗ್ವಾರ್ ಸಿನಿಮಾಗೆ ಕಥೆ ಬರೆದಿದ್ದರು. ದೊಡ್ಡ ತಾರಾಗಣ, ಅದ್ದೂರಿ ಮೇಕಿಂಗ್ ಹೊರತಾಗಿಯೂ ಜಾಗ್ವಾರ್ ಅಷ್ಟೇನೂ ದೊಡ್ಡ ಯಶಸ್ಸು ಕಾಣಲಿಲ್ಲ. ಜಾಗ್ವಾರ್​​ನಲ್ಲಿ ಸಪ್ಪೆಯಾಗಿ ಕಂಡಿದ್ದ ನಿಖಿಲ್, ಎರಡನೇ ಸಿನಿಮಾ ಸೀತಾರಾಮ ಕಲ್ಯಾಣ ಬರುವ ಹೊತ್ತಿಗೆ ಕೊಂಚ ನಟನೆಯಲ್ಲಿ ಸುಧಾರಿಸಿದ್ರು. ರಚಿತಾ ರಾಮ್-ನಿಖಿಲ್ ಜೋಡಿಯಾಗಿ ನಟಿಸಿದ ಈ ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ಕಾಣ್ತು.ಇನ್ನೂ ದರ್ಶನ್ ನಟನೆಯ ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಅಭಿಮನ್ಯು ಪಾತ್ರ ಮಾಡಿದ್ರು. ದೊಡ್ಡ ತಾರಾಗಣವಿದ್ದ ಹಿಸ್ಟಾರಿಕಲ್ ಸಿನಿಮಾದಲ್ಲಿ ನಿಖಿಲ್​ಗೆ ಪ್ರಮುಖ ಪಾತ್ರ ಸಿಕ್ಕಿತ್ತು. ಇದನ್ನ ನಿಖಿಲ್ ಅದೃಷ್ಟ ಅಂದುಕೊಂಡರು. ಆದ್ರೆ ಇದೇ ಪಾತ್ರದಿಂದಲೇ ನಿಖಿಲ್​ಗೆ ದುರಾದೃಷ್ಟ ಬೆನ್ನುಬಿತ್ತು ಅನ್ನೋ ಮಾತಿವೆ.

ಒಂದೇ ಮನೆಯಲ್ಲಿ ಇಬ್ರು ರಕ್ಷಿತಾ; ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು ಜೀವಂತ ಉಳ್ಕೊಂತಾರಾ ಜೋಗಿ ಪ್ರೇಮ್‌?

ಹೌದು ಕುರುಕ್ಷೇತ್ರ ಸಿನಿಮಾ ಮಾಡಿದವರಿಗೆಲ್ಲಾ ಒಂದಿಲ್ಲೊಂದು ತೊಂದರೆ ಕಾಡಿದೆ. ದುರ್ಯೋಧನ ಪಾತ್ರ ಮಾಡಿದ್ದ ದರ್ಶನ್ ಕೊಲೆ ಕೇಸ್​​ನಲ್ಲಿ ಸಿಲುಕಿದ್ದಾರೆ. ಈ ಚಿತ್ರ ನಿರ್ಮಿಸಿದ ಮುನಿರತ್ನ ಅತ್ಯಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದರು. ಭಾನುಮತಿ ಪಾತ್ರ ಮಾಡಿದ ಮೇಘನಾ ಪತಿಯನ್ನ ಕಳೆದುಕೊಂಡು ನೋವು ಅನುಭವಿಸಿದ್ರು. ಭೀಷ್ಮನ ಪಾತ್ರ ಮಾಡಿದ ಅಂಬಿ ಸಿನಿಮಾ ರಿಲೀಸ್​​ಗೂ ಮುನ್ನವೇ ಕಾಲವಾದ್ರು.ಇನ್ನೂ ಕುರುಕ್ಷೇತ್ರದಲ್ಲಿ ಅಭಿಮನ್ಯುವಾಗಿ ನಟಿಸಿದ ನಿಖಿಲ್​ಗಂತೂ ಸೋಲು ಬೆನ್ನು ಬಿಡದೇ ಕಾಡ್ತಾ ಇದೆ. ತಾತ ಮಾಜಿ ಪ್ರಧಾನಿ, ಅಪ್ಪ ಮಾಜಿ ಮುಖ್ಯಮಂತ್ರಿ-ಹಾಲಿ ಕೇಂದ್ರ ಮಂತ್ರಿ.. ಆದ್ರೆ ನಿಖಿಲ್​ಗೆ ಮಾತ್ರ ಒಂದೇ ಒಂದು ಚುನಾವಣೆ ಗೆಲ್ಲೋದಕ್ಕೆ ಆಗ್ತಾ ಇಲ್ಲ.

2019ರಲ್ಲಿ ಮಂಡ್ಯ ಲೋಕಸಭೆಗೆ ಸ್ಪರ್ಧಿಸಿ ಸೋತ ನಿಖಿಲ್ ಕಳೆದ ಬಾರಿ ರಾಮನಗರದದಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಸೋತ್ರು. ಮತ್ತೀಗ ಚೆನ್ನಪಟ್ಟಣದಲ್ಲಿ ಮತ್ತೊಮ್ಮೆ ಪರಾಭವಗೊಂಡಿದ್ದಾರೆ. ಥೇಟ್ ಅಭಿಮನ್ಯುವಿನಂತೆ ರಾಜಕೀಯ ಚಕ್ರವ್ಯೂಹದಲ್ಲಿ ಸೋತು ಸುಣ್ಣವಾಗಿದ್ದಾರೆ.ಅಸಲಿಗೆ ನಿಖಿಲ್ ನಟನೆಯ ಕೊನೆಯ ಸಿನಿಮಾ ರೈಡರ್​ಗೆ ಒಳ್ಳೆ ರೆಸ್ಪಾನ್ಸ್ ಬಂದಿತ್ತು. ಈ ಚಿತ್ರದ ಬಳಿಕ ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ನಿಖಿಲ್ ಚಿತ್ರವನ್ನ ನಿರ್ಮಿಸೋದಕ್ಕೆ ಮುಂದೆ ಬಂದಿತ್ತು. ಸಿನಿಮಾದ ಮುಹೂರ್ತ ಕೂಡ ಆಗಿತ್ತು. ಆದ್ರೆ ರಾಜಕೀಯದ ಕಡೆಗೆ ಮುಖ ಮಾಡಿದ ನಿಖಿಲ್ ಸಿನಿಮಾರಂಗದಿಂದ ದೂರವಾದ್ರು. ಈಗ ಸಿನಿಮಾನೂ ಇಲ್ಲ-ರಾಜಕೀಯವೂ ಇಲ್ಲ ಅಂತ ಅತಂತ್ರವಾಗಿದ್ದಾರೆ..! ಥೇಟ್ ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನಂತೆ ಪರದಾಡ್ತಾ ಇದ್ದಾರೆ. 

click me!