'ಎಕ್ಸ್'ಗೆ ಎಕ್ಸ್​ಪೆನ್ಸಿವ್ ಗಿಫ್ಟ್ ಕೊಟ್ಟಿದ್ರಂತೆ ಸಮಂತಾ;ಕಿಚ್ಚು ಹಚ್ಚಿದ ಸಮಂತಾ ಬೋಲ್ಡ್ ಸ್ಟೇಟ್​ಮೆಂಟ್!

By Vaishnavi Chandrashekar  |  First Published Nov 25, 2024, 2:55 PM IST

 ರೆಬೆಲ್ ಸ್ಟಾರ್​ ಅಂಬರೀಷ್ 6ನೇ ಪುಣ್ಯಸ್ಮರಣೆ. ರಕ್ತಚರಿತ್ರ-2  ಸಿನಿಮಾ ನಟನಿಗೆ ಹೀನಾಯ ಸೋಲು. 55 ಲಕ್ಷ ಫಾಲೋವರ್ಸ್ ಬಂದಿದ್ದು 155 ವೋಟು..!


ಅಂಬಿ ಪುಣ್ಯಸ್ಮರಣೆ:

ಕರುನಾಡ ಕರ್ಣ, ರೆಬೆಲ್ ಸ್ಟಾರ್ ಅಂಬರೀಷ್ ನಮ್ಮನ್ನಗಲಿ ಇಂದಿಗೆ 6 ವರ್ಷ. ಈ ಸಾರಿಯ ವಿಶೇಷ ಅಂದ್ರೆ ಅಂಬಿ ಮನೆಗೆ ಹೊಸ ಅತಿಥಿ ಬಂದಿದ್ದಾನೆ. ಅಭಿಷೇಕ್ -ಅವೀವಾ ದಂಪತಿಗೆ ಕಳೆದ 12ನೇ ತಾರೀಖು ಗಂಡು ಮಗು ಜನಿಸಿದ್ದು, ಅಂಬಿ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಇವತ್ತು ಅಂಬರೀಷ್ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದು ಅಂಬಿಗೆ ನಮನ ಸಲ್ಲಿಸಿದ್ದಾರೆ.

Tap to resize

Latest Videos

ಏಜಾಜ್ ಖಾನ್ ಸೋಲು:

ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಲವು ನಟ-ನಟಿಯರು ಕೂಡ ಕಣದಲ್ಲಿದ್ದರು. ರಕ್ತಚರಿತ್ರ-2 ಸಿನಿಮಾದಲ್ಲಿ ನಟಿಸಿದ್ದ ಏಜಾಜ್ ಖಾನ್ ಈ ಬಾರಿ  ಮುಂಬೈನ ಪ್ರತಿಷ್ಠಿತ ಕ್ಷೇತ್ರವಾಗಿದ್ದ ವರ್ಸೋವಾದಿಂದ ಕಣಕ್ಕೆ ಇಳಿದಿದ್ದರು.  ಅಜಾದ್ ಸಮಾಜ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಏಜಾಜ್ ಖಾನ್ ಹೀನಾಯ ಸೋಲು ಕಂಡಿದ್ದಾರೆ. ಅಚ್ಚರಿ ಅಂದ್ರೆ 55 ಲಕ್ಷ ಇನ್​ಸ್ಟಾಗ್ರಾಮ್ ಫಾಲೋವರ್ ಹೊಂದಿರೋ ಈ ನಟನಿಗೆ ಬಂದಿರೋ ಮತಗಳು ಜಸ್ಟ್ 155.

ಸಮಂತಾ ಹೇಳಿಕೆ ವೈರಲ್:

ಸಮಂತಾ ನಟನೆಯ ಸಿಟಾಡೆಲ್ ವೆಬ್​ಸಿರೀಸ್ ಸಖತ್ ಟ್ರೆಂಡಿಂಗ್​ನಲ್ಲಿದೆ. ಇತ್ತೀಚಿಗೆ ಈ ಸೀರೀಸ್​​ನ ಪ್ರಮೋಷನ್​ಗಾಗಿ ವರುಣ್ ಧವನ್ ಆಂಡ್ ಸ್ಯಾಮ್ ಟಾಕ್ ಶೋವೊಂದರಲ್ಲಿ ಪಾಲ್ಗೊಂಡಿದ್ದಾರೆ. ಅದ್ರಲ್ಲಿ ರಾಪಿಡ್ ಫೈರ್ ರೌಂಡ್​ನಲ್ಲಿ ವರುಣ್ ನಿಮಗೆ ಅಗತ್ಯ ಇಲ್ಲದೇ ಇದ್ರೂ ಹೆಚ್ಚು ಖರ್ಚು ಯಾವುದಕ್ಕೆ ಮಾಡಿದ್ದೀರಿ ಅಂತ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಖಡಕ್ ಉತ್ತರ ಕೊಟ್ಟಿರೋ ಸಮಂತಾ, ನನ್ನ ಎಕ್ಸ್​​ ಬಾಯ್​ಫ್ರೆಂಡ್​​ಗೆ ಎಕ್ಸ್​​ಪೆನ್ಸಿವ್ ಗಿಫ್ಟ್ ಕೊಟ್ಟಿದ್ದೆ. ಅದು ವೇಸ್ಟ್ ಅಂದಿದ್ದಾರೆ. ಸಮಂತಾರ ಈ ಸ್ಟೇಟ್​ಮೆಂಟ್ ಸದ್ಯ ಕಿಚ್ಚು ಹಚ್ಚಿದೆ.

click me!