ಪಂಜಾಬ್ ತಂಡವು 26.75 ಕೋಟಿ ರುಪಾಯಿಗಳಿಗೆ ಶ್ರೇಯಸ್ ಐಯ್ಯರ್ ಅವರನ್ನು ಖರೀದಿಸಿದೆ. ಈ ಮೂಲಕ ಅವರನ್ನು ನಾಯಕರನ್ನಾಗಿ ಮಾಡುವುದು ಪಂಜಾಬ್ ಉದ್ದೇಶ ಎಂಬುದು ಸ್ಪಷ್ಟವಾಗಿದೆ.
ಆದರೆ ಹರಾಜಿನ ಮೊದಲು ಶ್ರೇಯಸ್ ಅಯ್ಯರ್ ಜೊತೆ ಪಂಜಾಬ್ ಮಾತುಕತೆ ನಡೆಸಿರಲಿಲ್ಲ. ರಿಕಿ ಪಾಂಟಿಂಗ್ ಶ್ರೇಯಸ್‌ಗೆ ಕರೆ ಮಾಡಿದರೂ ಅವರು ಫೋನ್ ಎತ್ತಲಿಲ್ಲವಂತೆ. ಇದನ್ನು ಸ್ವತಃ ರಿಕಿ ಪಾಂಟಿಂಗ್ ಹೇಳಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಶ್ರೇಯಸ್‌ಗಾಗಿ ಡೆಲ್ಲಿ ತಂಡ ಕೂಡ ಪೈಪೋಟಿ ನಡೆಸಿತು. ಹೀಗಾಗಿ ಬೆಲೆ 26.75 ಕೋಟಿಗೆ ಏರಿತು. ಆದರೆ ಪಾಂಟಿಂಗ್ ಬಿಡಲಿಲ್ಲ. ಹರಾಜಿನ ಮೊದಲು ಶ್ರೇಯಸ್ ಪಾಂಟಿಂಗ್ ಕರೆಗೆ ಸ್ಪಂದಿಸದಿರುವುದು ಅಚ್ಚರಿ ಮೂಡಿಸಿದೆ.
ಶ್ರೇಯಸ್ ಐಯ್ಯರ್, ಪಂಜಾಬ್ ಕಿಂಗ್ಸ್
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಶ್ರೇಯಸ್ ಅಯ್ಯರ್, ಇದೀಗ ಪಂಜಾಬ್ ಕಿಂಗ್ಸ್ ತಂಡ ಕೂಡಿಕೊಂಡಿದ್ದಕ್ಕೆ ಖುಷಿಯಾಗಿದೆ ಎಂದು ಹೇಳಿದ್ದಾರೆ.