ಇಸ್ರೋದಿಂದ ಮೇಡ್ ಇನ್ ಇಂಡಿಯಾ ಕಾರು ಸೆನ್ಸಾರ್, ಇನ್ಮುಂದೆ ಇಳಿಕೆಯಾಗಲಿದೆ ವಾಹನ ದರ!

First Published | Nov 25, 2024, 2:46 PM IST

ಸದ್ಯ ಭಾರತದ ಕಾರು ಉತ್ಪಾದನೆಯಲ್ಲಿ ಕಾರಿನ ಸೆನ್ಸಾರ್ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ಬೆಲೆ ಹೆಚ್ಚಾಗುತ್ತಿದೆ. ಇದೀಗ ಇಸ್ರೋ ಮಹತ್ವದ ಹೆಜ್ಜೆ ಇಟ್ಟಿದೆ. ಕಾರು ಸೆನ್ಸಾರ್‌ಗಳನ್ನು ಇಸ್ರೋ ಅಭಿವೃದ್ಘಿಪಡಿಸಲು ಮುಂದಾಗಿದೆ. ಇದರಿಂದ ಕಾರುಗಳ ಬೆಲೆ ಇಳಿಕೆಯಾಗಲಿದೆ.  

ಕಾರ್ ಸೆನ್ಸರ್

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್  ಮಹತ್ವದ ಮಾಹಿತಿ ನೀಡಿದ್ದಾರೆ. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಸೆನ್ಸರ್‌ಗಳು ತುಂಬಾ ಸಂಕೀರ್ಣ. ಇವುಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ. ಆದರೆ ಕಾರುಗಳಿಗೆ ಬೇಕಾದ ಸೆನ್ಸರ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದೀಗ ಇಸ್ರೋ ಈ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಭಾರತದಲ್ಲಿ ಓಡಾಡುವ ಹೆಚ್ಚಿನ ಕಾರುಗಳಲ್ಲಿ ವಿದೇಶಿ ಸೆನ್ಸರ್‌ಗಳನ್ನು ಬಳಸಲಾಗುತ್ತದೆ. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಸೆನ್ಸರ್‌ಗಳನ್ನು ನಾವು ತಯಾರಿಸುತ್ತಿರುವುದರಿಂದ, ಕಾರುಗಳಿಗೆ ಬೇಕಾದ ಸೆನ್ಸರ್‌ಗಳನ್ನು ಕಡಿಮೆ ಬೆಲೆಯಲ್ಲಿ ತಯಾರಿಸಿ ಕಾರು ತಯಾರಕರಿಗೆ ನೀಡಬಹುದು. ಕಡಿಮೆ ಬೆಲೆಯಲ್ಲಿ ಕಾರ್ ಸೆನ್ಸರ್‌ಗಳನ್ನು ತಯಾರಿಸಲು ಕಾರು ತಯಾರಕರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಇಸ್ರೋ ಚೇರ್ಮೆನ್ ಎಸ್ ಸೋಮನಾಥ್ ಹೇಳಿದ್ದಾರೆ.

Tap to resize

ಹೆಚ್ಚಿನ ವಸ್ತುಗಳನ್ನು ಭಾರತದಲ್ಲೇ ತಯಾರಿಸುವತ್ತ ಗಮನ ಹರಿಸಿದ್ದೇವೆ. ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ ಅನೇಕ ಭಾಗಗಳನ್ನು ಈಗ ಭಾರತದಲ್ಲೇ ತಯಾರಿಸಿ, ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ತಂತ್ರಜ್ಞಾನ ವರ್ಗಾವಣೆ ಕೂಡ ಅಷ್ಟೇ ಮುಖ್ಯ ಎಂದು ಸೋಮನಾಥ ಹೇಳಿದ್ದಾರೆ. 

ಐಟಿ-ಬಿಟಿ ಉದ್ಯಮದ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, “ಭಾರತದಲ್ಲಿ ಸೆನ್ಸರ್‌ಗಳನ್ನು ತಯಾರಿಸುವುದು ಅನೇಕ ಇವಿ ಮತ್ತು ಆಟೋಮೊಬೈಲ್ ಕಾರ್ಖಾನೆಗಳನ್ನು ಸ್ಥಾಪಿಸಿರುವ ರಾಜ್ಯದ ಆರ್ಥಿಕತೆಗೆ ಸಹಾಯ ಮಾಡುತ್ತದೆ.  ಸ್ವದೇಶೀಕರಣವು ವಾಹನಗಳ ಬೆಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸ್ಟಾರ್ಟ್‌ಅಪ್‌ಗಳಿಗೂ ಸಹಾಯ ಮಾಡುತ್ತದೆ. ತಂತ್ರಜ್ಞಾನ ಶೃಂಗಸಭೆಯಲ್ಲಿ ಭಾಗವಹಿಸುವ ಅನೇಕ ಸ್ಟಾರ್ಟ್‌ಅಪ್‌ಗಳು ಮತ್ತು ಹೂಡಿಕೆದಾರರು ಈ ಯೋಜನೆಯಲ್ಲಿ ಆಸಕ್ತಿ ಹೊಂದಿದ್ದಾರೆ ಎಂದಿದ್ದಾರೆ.

ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಆಟೋಮೇಷನ್ ಕ್ಷೇತ್ರದ ಪ್ರತಿನಿಧಿಯೊಬ್ಬರು, “ಇದು ಒಳ್ಳೆಯ ಯೋಜನೆ. ಕರ್ನಾಟಕದಲ್ಲಿ ಬೆಳೆಯುತ್ತಿರುವ ಆಟೋಮೊಬೈಲ್ ಮತ್ತು ತಂತ್ರಜ್ಞಾನ ಕ್ಷೇತ್ರವನ್ನು ಇದು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಿದೆ ಎಂದಿದ್ದಾರೆ. 

Latest Videos

click me!