Jun 14, 2020, 6:02 PM IST
ನವದೆಹಲಿ (ಜೂ. 14): 'ಧೋನಿ ಅನ್ಟೋಲ್ಡ್ ಸ್ಟೋರಿ' ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸುಶಾಂತ್ ಸಿಂಗ್ ಸಾವಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ' ಸುಶಾಂತ್ ಸಾವಿನ ಸುದ್ದಿ ತಿಳಿದು ಶಾಕ್ ಆಗಿದೆ. ಕಿರಿಯ, ಪ್ರತಿಭಾವಂತ ನಟ ಇಷ್ಟು ಬೇಗ ಅಗಲಬಾರದಿತ್ತು. ಟಿವಿ, ಸಿನಿಮಾಗಳಲ್ಲಿ ಸುಶಾಂತ್ ನಟನೆ ಹಲವರಿಗೆ ಸ್ಫೂರ್ತಿಯಾಗಿತ್ತು.
'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!