ಬಾಲಿವುಡ್ ಆಫರ್ ಬಂದಿದೆ, ರಿಜೆಕ್ಟ್ ಮಾಡಿದ್ದೇನೆ ಅಂದ್ರು ಸಮಂತಾ; ಸೀಕ್ರೆಟ್ ರಿವೀಲ್ ಮಾಡಿದ್ರಾ?

By Shriram Bhat  |  First Published May 7, 2024, 1:33 PM IST

ಸದ್ಯ ನಟಿ ಸಮಂತಾ ಅವರು ಮೆಯೋಸಿಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ಇದಕ್ಕಾಗಿ ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಇಗ ಅವರು ಸ್ವಲ್ಪ ಗುಣಮುಖರಾಗಿದ್ದು, ಟ್ರೀಟ್‌ಮೆಂಟ್ ಮುಂದುವರೆದಿದೆ. 


ನಟಿ ಸಮಂತಾ (Samantha) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ತಮಗೆ ಬಾಲಿವುಡ್ (Bollywood) ಆಫರ್ ಬಂದಿತ್ತಾ ಅಥವಾ ಇಲ್ಲವಾ ಎಂಬ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸಂದರ್ಶಕರು 'ನೀವು ಯಾವತ್ತಾದರೂ ಬಾಲಿವುಡ್ ಸಿನಿಮಾದಲ್ಲಿ ಆಫರ್ ಪಡೆಯಲು ಪ್ರಯತ್ನ ಮಾಡಿದ್ದೀರಾ' ಎಂಬ ಪ್ರಶ್ನೆಗೆ ನಟಿ ಸಮಂತಾ ಉತ್ತರ ನೀಡಿದ್ದಾರೆ. 'ನಾನು ತುಂಬಾ ಸಮಯದಿಂದ ನಟಿಯಾಗಿ ಸಿನಿರಂಗದಲ್ಲಿ ಇರುವುದು ನಿಮಗೂ ಗೊತ್ತಿದೆ. ನಾನು ಬಾಲಿವುಡ್ ಆಫರ್ ಪಡೆಯಲು ಪ್ರಯತ್ನ ಮಾಡಿದೆ ಎನ್ನವುದು ಸರಿಯಲ್ಲ, ಅಲ್ಲಿಂದ ನನಗೇ ಆಫರ್ ಬಂದಿತ್ತು.

ನಾನು ಸಾಕಷ್ಟು ಸೌತ್ ಇಂಡಿಯನ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ವೃತ್ತಿಯಲ್ಲಿ ಸ್ಟಾರ್ ನಟಿ ಪಟ್ಟವನ್ನು ಕೂಡ ಅಲಂಕರಿಸಿದ್ದೇನೆ. ಹೀಗಾಗಿ ನನಗೆ ಸಹಜ ಎನ್ನುವಂತೆ ಬಾಲಿವುಡ್‌ ಚಿತ್ರಗಳ ಆಫರ್ ಪಡೆದಿದ್ದೇನೆ. ಆದರೆ, ನನಗೆ ಹಿಂದಿ ಭಾಷೆ ಅಷ್ಟು ಕಂಫರ್ಟೇಬಲ್ ಅನ್ನಿಸಲಿಲ್ಲ. ಏಕೆಂದರೆ, ನಾನು ದಕ್ಷಿಣ ಭಾರತದವಳು, ಮತ್ತು ನನಗೆ ಹಿಂದಿ ಭಾಷೆ ಅಷ್ಟಾಗಿ ಬರುವುದಿಲ್ಲ. ಲಾಂಗ್ವೇಜ್ ಕಾರಣಕ್ಕೆ ನಾನು ಬಾಲಿವುಡ್ ಆಫರ್‌ ಅನ್ನು ಸ್ವೀಕರಿಸಲಿಲ್ಲ. ಆ ಬಗ್ಗೆ ನನಗೆ ಯಾವುದೇ ರೀಗ್ರೆಟ್ ಇಲ್ಲ' ಎಂದಿದ್ದಾರೆ ನಟಿ ಸಮಂತಾ. 

Tap to resize

Latest Videos

ಸ್ನೇಹ, ಸಂಬಂಧಗಳ ಬಗ್ಗೆ ಪೂಜಾ ಹೆಗಡೆ ಪಾಠ, ಅಷ್ಟೊಂದು ಅನುಭವ ಇದ್ಯಾ ಅಂತಿದಾರೆ ನೆಟ್ಟಿಗರು!

ಸದ್ಯ ನಟಿ ಸಮಂತಾ (Samantha Ruth Prabhu) ಅವರು ಮೆಯೋಸಿಟಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಅವರು ಇದಕ್ಕಾಗಿ ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಇಗ ಅವರು ಸ್ವಲ್ಪ ಗುಣಮುಖರಾಗಿದ್ದು, ಟ್ರೀಟ್‌ಮೆಂಟ್ ಮುಂದುವರೆದಿದೆ. ಸಮಂತಾ ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಸಿನಿಮಾದಲ್ಲಿ ನಟಿಸಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸಮಂತಾ ಅವರು ಮೆಯೋಸಿಟಿಸ್‌ಗೆ ಚಿಕಿತ್ಸೆ, ಧ್ಯಾನ, ಯೋಗ ಹಾಗೂ ಟ್ರಿಪ್‌ ಹೀಗೆ ದೇಹ ಮತ್ತು ಮನಸ್ಸಿಗೆ ಮುದ ನೀಡುವ ಮಾರ್ಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಪರಮ್-ಧನಂಜಯ್ 'ಕೋಟಿ'ಯಲ್ಲಿ ದಿನೂ ಸಾವ್ಕಾರ್; ತೆರೆ ಮೇಲೆ ರಮೇಶ್ ಇಂದಿರಾ ಘರ್ಜನೆ!

ಅಂದಹಾಗೆ, ವಿಜಯ್ ದೇವರಕೊಂಡ (Vijay Deavarakonda)ಜತೆ ಖುಷಿ ಸಿನಿಮಾದಲ್ಲಿ ನಟಿಸಿದ ಬಳಿಕ ನಟಿ ಸಮಂತಾ, ಅನಾರೋಗ್ಯದ ಕಾರಣಕ್ಕೆ ಬೇರೆ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ. ಈಗ, ಆದಷ್ಟು ಬೇಗ ಅನಾರೋಗ್ಯದಿಂದ ಮುಕ್ತಿ ಹೊಂದಿ  ಮತ್ತೆ ಸಿನಿಮಾ ನಟನೆಯನ್ನು ಮುಂದುವರಿಸುವ ಕನಸು ಕಾಣುತ್ತಿದ್ದಾರೆ ನಟಿ ಸಮಂತಾ. ನಟ ನಾಗ ಚೈತನ್ಯ (Naga Chaitanya)ಅವರನ್ನು ಮದುವೆಯಾಗಿದ್ದ ಸಮಂತಾ ಅವರಿಂದ ಡಿವೋರ್ಸ್ ಪಡೆದು ಸದ್ಯ ಒಂಟಿಯಾಗಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ಅವರ ಫ್ಯಾನ್ಸ್‌ಗಳು ಕುತೂಹಲದಿಂದ ಕಾಯುತ್ತಿದ್ದಾರೆ. 

ನಿನ್ನೆಯ ಹೊರತು ನಾಳೆಯ ಮರೆತು, ಇಂದಷ್ಟೇ ನೋಡಿಕೊಂಡು ಹೋಗೋನು; ನಟ ರಾಮಕೃಷ್ಣ

click me!