ಸೌದಿಯ ಜೈಲುಗಳಲ್ಲಿ ಪಾಕ್‌ನ ಖದೀಮರು! ಭಾರತದ ಕಡು ವೈರಿ ಸ್ಥಿತಿ ಎಷ್ಟು ದಾರುಣವಾಗಿದೆ ಗೊತ್ತಾ..?

Oct 6, 2023, 3:13 PM IST

ಭಾರತಕ್ಕೆ ಭಯೋತ್ಪಾದಕರನ್ನ ಕಳಿಸಿದ್ದಾಯ್ತು,. ಚೀನಾಕ್ಕೆ ಕತ್ತೆಗಳನ್ನ ಕಳಿಸಿದ್ದಾಯ್ತು.. ಈಗ ಮುಸ್ಲಿಂ ಬಾಹುಳ್ಯದ ದೇಶಗಳಿಗೆ, ಭಿಕ್ಷುಕರನ್ನ ಎಕ್ಸ್ಪೋರ್ಟ್ ಮಾಡ್ತಾ ಇದೆ ಪಾಕಿಸ್ತಾನ. ಹಿಂದೊಮ್ಮೆ ಭಾರತ ಏನು ಭವಿಷ್ಯ ನಡುದಿತ್ತೋ, ಈಗ ಅದು ನಿಜವಾಗಿದೆ. ಸೌದಿಯ ಜೈಲುಗಳಲ್ಲಿ, ಪಾಕಿನ ಖದೀಮರೇ ತುಂಬ್ಕೊಂಡಿದಾರೆ. ಪಾಕಿಸ್ತಾನ(Pakisthan) ಅಂದ್ ಕೂಡ್ಲೆ ನಮಗೆ ಮೊದಲು ನೆನಪಾಗೋದೇನು ಹೇಳಿ. ಅದು ನಮ್ಮ ಶತ್ರುದೇಶ.. ನಮ್ಮ ಮೇಲೆ ಸುಖಾಸುಮ್ಮನೆ ಯುದ್ಧ ಮಾಡಿ, ಸೋತು ಶರಣಾದ ದೇಶ. ಯಾವಾಗೆಲ್ಲಾ ಭಾರತ(India) ಸ್ನೇಹ ಹಸ್ತ ಚಾಚುತ್ತೋ, ಆಗೆಲ್ಲಾ ನಮ್ಮ ಬೆನ್ನಿಗೆ ಚೂರಿ ಹಾಕಿರೋ ದೇಶ ಅನ್ನೋದು ಸಾಮಾನ್ಯವಾಗಿ ನೆನಪಿಗೆ ಬರುತ್ತೆ. ಇದೆಲ್ಲದರ ಜೊತೆಗೆ, ಇದೆಲ್ಲಕ್ಕಿಂತಾ ಮುಖ್ಯವಾಗಿ, ಪಾಕಿಸ್ತಾನ ಅಂದ್ ಕೂಡ್ಲೆ ತಲೆಗೆ ಬರೋ ಇನ್ನೊಂದು ಹೆಸರು, ಉಗ್ರರಸ್ವರ್ಗ. ಪಾಕಿಸ್ತಾನ ಅನ್ನೋದು ಅಕ್ಷರಶಃ ಉಗ್ರರ ಸ್ವರ್ಗ. ಬರೀ ಭಾರತಕ್ಕೆ ಬೇಕಿರೋ ಉಗ್ರರು ಮಾತ್ರವೇ ಅಲ್ಲ, ಜಗತ್ತಿನ ನಾನಾ ದೇಶಗಳ ವಾಟೆಂಡ್ ಲಿಸ್ಟ್ ಉಗ್ರರಿಗೆ, ಮಡಿಲುಕೊಟ್ಟು ಸಾಕ್ತಾ ಇದೆ, ಪಾಕಿಸ್ತಾನ. ಜಗತ್ತಿಗೆ ಪಾಕಿಸ್ತಾನ ಏನೇನು ಎಕ್ಸ್ಪೋರ್ಟ್ ಮಾಡ್ತಾ ಇದೆ ಅಂತ ನೋಡಿದ್ರೆ, ಫಸ್ಟ್ ಅಂಡ್ ಲಾಸ್ಟ್ ಮೆಟಿರಿಯಲ್ ಆಗಿ ಉಳಿಯೋದು, ಟೆರರಿಸ್ಟ್ಗಳು, ಟೆರರಿಸಂ ಮಾತ್ರ.. ಆದ್ರೆ, ಅದೊಂದೆನಾ ನನ್ನ ಪ್ರಾಡಕ್ಟು..? ನನ್ ಹತ್ರ ಇನ್ನೂ ಏನೇನೆಲ್ಲಾ ವೇರೈಟಿ ಸಪ್ಲೈ ಗೂಡ್ಸ್ ಇದಾವೆ ಗೊತ್ತಾ ಅಂತ ಪಾಕಿಸ್ತಾನ ಅಖಾಡಕ್ಕೆ ಧುಮುಕಿದೆ.. ಬರೀ ಭಯೋತ್ಪಾದಕಷ್ಟೇ ಅಲ್ಲ, ಭಿಕ್ಷುಕರನ್ನೂ ಸಪ್ಲೈ ಮಾಡ್ತೀನಿ ಅಂತ ಮೆರೆಯೋಕೆ ಶುರುಮಾಡಿದೆ ಪಾಕಿಸ್ತಾನ. ಪಾಕಿಸ್ತಾನ ಇವತ್ತು ಎಂಥಾ ಗತಿಯಲ್ಲಿದೆ ಅನ್ನೋ ಸಂಗತಿ, ಇಡೀ ಜಗತ್ತಿಗೇ ಗೊತ್ತಿದೆ.

ಇದನ್ನೂ ವೀಕ್ಷಿಸಿ:  ಗಣಪತಿ ಮೆರವಣಿಗೆ ನಡೆಸಿದ್ದೇ ಅಪರಾಧವಾಯ್ತಾ..? ರಾಗಿಗುಡ್ಡ ಗಲಾಟೆಗೆ ಕುಮ್ಮಕ್ಕು ಕೊಟ್ಟವರು ಯಾರು..?