ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಮಹತ್ವದ ಹೆಜ್ಜೆ, ಮಕ್ಕಳಿಗೂ ಸಿಗಲಿದೆ ಲಸಿಕೆ, ಇದು ಕೊರೋನಾ ಗುಡ್‌ನ್ಯೂಸ್..!

Jun 6, 2021, 1:55 PM IST

ಬೆಂಗಳೂರು (ಜೂ. 06): ಕೊರೋನಾ ವಿರುದ್ಧ ಹೋರಾಟದಲ್ಲಿ, ವ್ಯಾಕ್ಸಿನ್ ಪರಿಣಾಮಕಾರಿ ಅಸ್ತ್ರ. ಅದರಲ್ಲೂ ಎರಡೂ ಡೋಸ್ ಪಡೆಯುವುದರಿಂದ ಕೊರೋನಾದಿಂದ ಸೇಫ್ ಆಗಬಹುದು ಎಂದು ಏಮ್ಸ್ ವರದಿ ನೀಡಿದೆ. ಇನ್ನೂ ಸಮಾಧಾನಕರ ವಿಚಾರವೆಂದರೆ, ಮಕ್ಕಳಿಗೂ ಕೂಡಾ ಲಸಿಕೆ ಬಂದಿದೆ.

ಸೋಂಕಿತರ ಜೀವ ಉಳಿಸಿದ 2 DG ಔಷಧ, ಬೆಂಗಳೂರಿನಲ್ಲಿ 3 ಪ್ರಯೋಗವೂ ಸಕ್ಸಸ್..!

ಭಾರತದಲ್ಲಿಯೂ ಟ್ರಯಲ್ಸ್ ನಡೆಯುತ್ತಿದ್ದು, ಸದ್ಯದಲ್ಲೇ ವ್ಯಾಕ್ಸಿನ್ ಸಿಗುವ ಭರವಸೆ ಇದೆ. ಇನ್ನೊಂದು ಕಡೆ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆಗೆ ಸೀರಂ ಗ್ರೀನ್ ಸಿಗ್ನಲ್ ಕೊಟ್ಟಿದೆ. ಭಾರತದಲ್ಲಿ ಶೇ. 50 ರಷ್ಟು ವ್ಯಾಕ್ಸಿನ್‌ನನ್ನು ಖಾಸಗಿ ಆಸ್ಪತ್ರೆಗಳು ನೇರವಾಗಿ ತಯಾರಿಕಾ ಕಂಪನಿಯಿಂದ ಖರೀದಿಸಬಹುದಾಗಿದೆ.  ಈ ಎಲ್ಲಾ ಸುದ್ದಿಗಳ ಸಮಗ್ರ ವಿವರ ಇಲ್ಲಿದೆ.