ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾಗಿ ಬೇಕಾದ ರೆಸ್ಟ್ ಯಾವುದು ಗೊತ್ತಾ?

Published : Apr 28, 2024, 05:53 PM IST

ನಾವು ನಮ್ಮ ಜೀವನದಲ್ಲಿ ಎಷ್ಟೊಂದು ಬ್ಯುಸಿಯಾಗಿದ್ದೇವೆ ಅಂದರೆ ವಿಶ್ರಾಂತಿ ತೆಗೆದುಕೊಳ್ಳೋದನ್ನೇ ಮರೆತು ಬಿಡುತ್ತೇವೆ, ವಿಶ್ರಾಂತಿಯ ಕೊರತೆಯಿಂದಾಗಿ ನಮ್ಮ ಜೀವನ ಅನಾರೋಗ್ಯದ ಗೂಡಾಗಿದೆ. 

PREV
17
ಪ್ರತಿಯೊಬ್ಬ ಮನುಷ್ಯನಿಗೆ ಅಗತ್ಯವಾಗಿ ಬೇಕಾದ ರೆಸ್ಟ್ ಯಾವುದು ಗೊತ್ತಾ?

ಆರೋಗ್ಯವಾಗಿರೋದು ಅಂದ್ರೆ ಜ್ವರ, ತಲೆನೋವು, ಅಥವಾ ಕ್ಯಾನ್ಸರ್, ಶುಗರ್ ನಂತರ ರೋಗ ಇಲ್ಲದೇ ಇರೋದು ಅಂತ ಮಾತ್ರ ಅಲ್ಲ. ನಮ್ಮ ಮಾನಸಿಕ, ಭಾವನಾತ್ಮಕ ಆರೋಗ್ಯವೂ ದೈಹಿಕ ಆರೋಗ್ಯದಷ್ಟೇ ಮುಖ್ಯ. ನಾವು ಆರೋಗ್ಯದಿಂದ ಇರಬೇಕು ಅಂದ್ರೆ ಈ ಆರು ರೀತಿಯ ರೆಸ್ಟ್ (rest every person need)ಬೇಕೇ ಬೇಕು. 

27

ಮಾನಸಿಕ ವಿಶ್ರಾಂತಿ (Mental health): ಮೆದುಳಿಗೆ ಬ್ರೇಕ್ ಕೊಡುವಂತದ್ದು ಮಾನಸಿಕ ವಿಶ್ರಾಂತಿ. ಕೆಲವೊಮ್ಮೆ ನಾವು ಚಿಂತೆಯಲ್ಲಿ ನೊಂದು, ಬೆಂದು ಬಳಲುತ್ತೇವೆ. ಅದನ್ನು ನಾರ್ಮಲ್ ಎನ್ನುವಂತೆ ಇದ್ದುಬಿಡುತ್ತೇವೆ. ಆದರೆ ಮಾನಸಿಕ ಆರೋಗ್ಯ ತುಂಬಾನೆ ಮುಖ್ಯ. ಅದಕ್ಕಾಗಿ ಮಾನಸಿಕ ವಿಶ್ರಾಂತಿ ತೆಗೆದುಕೊಳ್ಳೋದು ಸಹ ಮುಖ್ಯ. 

37

ದೈಹಿಕ ವಿಶ್ರಾಂತಿ (Physical rest) : ದೈಹಿಕ ವಿಶ್ರಾಂತಿ ಅಂದರೆ ನಿಮ್ಮ ದೇಹಕ್ಕೆ ನೀಡುವಂತಹ ವಿಶ್ರಾಂತಿ. ನಿದ್ರೆ ಮಾಡೋದು ಮಾತ್ರವಲ್ಲ ದೇಹಕ್ಕೆ ವಿಶ್ರಾಂತಿ ನೀಡುವಂತಹ ಯಾವುದೇ ವಿಷಯವು ದೈಹಿಕ ವಿಶ್ರಾಂತಿಯಾಗಿದೆ. ಇದು ಕೂಡ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. 

47

ಭಾವನಾತ್ಮಕ ವಿಶ್ರಾಂತಿ (Emotional rest): ಭಾವನಾತ್ಮಕ ವಿಶ್ರಾಂತಿ ಎಂದರೆ ನಿಮ್ಮ ಫೀಲಿಂಗ್ ಗಳಿಗೆ ವಿಶ್ರಾಂತಿ ನೀಡೋದು. ನಿಮಗೆ ಯಾವುದೇ ಒಂದು ಕೆಲಸ ಆಗದೇ ಇದ್ದರೂ ಅದಕ್ಕೆ ಓಕೆ ಎಂದು ಹೇಳೋದು ಭಾವನಾತ್ಮಕವಾಗಿ ನಿಮ್ಮ ಕುಸಿಯುವಂತೆ ಮಾಡುತ್ತೆ. ಹಾಗಾಗಿ ನೋ ಎನ್ನುವಲ್ಲಿ ನೋ ಎಂದು ಬಿಡಿ, ಒಂದು ಸಲಕ್ಕೆ ಬೇಸರ ಎನಿಸಿದರೂ, ನೀವು ಖಂಡಿತವಾಗಿಯೂ ನೆಮ್ಮದಿಯಾಗಿರುತ್ತೀರಿ. 

57

ಸಾಮಾಜಿಕ ವಿಶ್ರಾಂತಿ (Social rest) : ನಿಮ್ಮ ಸೋಶಿಯಲ್ ಲೈಫ್ ನಿಂದ ನೀವು ವಿಶ್ರಾಂತಿ ತೆಗೆದುಕೊಳ್ಳುವುದು ಸಹ ಮುಖ್ಯ. ಇಲ್ಲವಾದರೆ ಪ್ರತಿಕ್ಷಣಕ್ಕೂ ನೀವು ಚಿಂತೆಯಿಂದ ಬಳಲುವಂತಾಗುತ್ತದೆ. ನೀವು ಬ್ರೇಕ್ ಅಪ್ ಆದಾಗ, ರಿಲೇಶನ್ ಶಿಪ್ ನಿಂದ ದೂರ ಉಳಿದಾಗ, ಸೋಶಿಯಲ್ ರೆಸ್ಟ್ ತೆಗೆದುಕೊಳ್ಳೋದು ಮುಖ್ಯ.
 

67

ಆಧ್ಯಾತ್ಮಿಕ ವಿಶ್ರಾಂತಿ (Spiritual Rest): ಮನುಷ್ಯರು ಯಾವಾಗ ಹೊರಬರಲಾಗದ ಸಮಸ್ಯೆಯ ಮಧ್ಯೆ ಸಿಲುಕಿದರೆ ಅದರಿಂದ ಹೊರ ಬರಬೇಕಾದರೆ ಆಧ್ಯಾತ್ಮಿಕ ವಿಶ್ರಾಂತಿ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಧ್ಯಾನದ ಮೊರೆಹೋಗುವುದು ಮುಖ್ಯ.
 

77

ಸಂವೇದನಾ ವಿಶ್ರಾಂತಿ (Sensory rest) : ಇತ್ತೀಚಿನ ದಿನಗಳಲ್ಲಿ ನಾವು ಕಂಪ್ಯೂಟರ್, ಮೊಬೈಲ್, ಟಿವಿ ಮುಂದೇ ಗಂಟೆಗಟ್ಟಲೆ ಕುಳಿತುಕೊಳ್ಳುತ್ತೇವೆ. ಇದರಿಂದ ನಮ್ಮ ಸೆನ್ಸ್ ಕಳೆದುಕೊಂಡಿದ್ದೇವೆ ಅನಿಸುತ್ತೆ. ಹಾಗಾಗಿ ಯಾವಾಗಲಾದರು ಒಂದುಬಾರಿಯಾದರೂ ಇವುಗಳಿಂದ ದೂರಉಳಿಯೋದು ಮುಖ್ಯ. 
 

Read more Photos on
click me!

Recommended Stories