ಪರಿಹಾರ ಕೊಟ್ಟಿದ್ರಿಂದ ಯಾರಿಗೆ ಲಾಭ..? ಹೇಗೆ ಲಾಭ..? ಮುಗಿಯದ ಕತೆಯಾಗಿದೆಯೇಕೆ ಪರಿಹಾರ ಪಾಲಿಟಿಕ್ಸ್!?

ಪರಿಹಾರ ಕೊಟ್ಟಿದ್ರಿಂದ ಯಾರಿಗೆ ಲಾಭ..? ಹೇಗೆ ಲಾಭ..? ಮುಗಿಯದ ಕತೆಯಾಗಿದೆಯೇಕೆ ಪರಿಹಾರ ಪಾಲಿಟಿಕ್ಸ್!?

Published : Apr 28, 2024, 05:58 PM ISTUpdated : Apr 28, 2024, 05:59 PM IST

ಚುನಾವಣಾ ಸಂಗ್ರಾಮದಲ್ಲಿ ಪರಿಹಾರದ ಪ್ರಭಾವ ಏನು..?
ಸುಪ್ರೀಮ್ ಕೋರ್ಟ್ ಕದ ತಟ್ಟಿ ನ್ಯಾಯ ಕೇಳಿತ್ತು ಸರ್ಕಾರ!
ಪರಿಹಾರಕ್ಕೆ ಧನ್ಯವಾದ ಹೇಳಿದರೇಕೆ ಬಿಜೆಪಿ ನಾಯಕರು..?

ರಾಜ್ಯಕ್ಕೆ ಬರ ಪರಿಹಾರ ಬಂದಿದೆ. ಆದ್ರೆ ಅದರ ಜೊತೆಗೆ ಹೊಸ ಲೆಕ್ಕಾಚಾರವೂ ಶುರುವಾಗಿದೆ. ಅಂದ್ ಹಾಗೆ ರಾಜ್ಯ ಸರ್ಕಾರ ಕೇಳಿದ್ದು 18,172 ಕೋಟಿ. ಆದ್ರೆ ಕೇಂದ್ರ ಸರ್ಕಾರ(Central government ) ಬಿಡುಗಡೆ ಮಾಡಿರೋದು,3454 ಕೋಟಿ. ಹಾಗಾಗಿನೇ ಪರಿಹಾರ ಪಾಲಿಟಿಕ್ಸ್ ಮುಗಿಯದ ಕತೆಯಾಗಿ ಉಳಿದಿರೋದು. ಅಸಲಿಗೆ ಬರ ಪರಿಹಾರ(Drought Relief)  ಕೊಟ್ಟಿದ್ದು ನಾವು ಅಂತಿದೆ ಕೇಂದ್ರ  ಸರ್ಕಾರ. ತರಿಸಿಕೊಂಡಿದ್ದು ನಾವು ಅಂತಿದೆ ರಾಜ್ಯ ಸರ್ಕಾರ.. ಇದೆಲ್ಲವನ್ನೂ ಸುಪ್ರೀಂ ಕೋರ್ಟ್ ನೋಡ್ತಾ ಇದೆ. ಕರ್ನಾಟಕದ(Karnataka) ಬರ ಅದೆಷ್ಟು ಭೀಕರವಾಗಿದೆ ಅಂದ್ರೆ, ಕಳೆದ ನೂರು ವರ್ಷಗಳಲ್ಲೇ ಇಂಥಾ ಪರಿಸ್ಥಿತಿ ಯಾವತ್ತೂ ಬಂದಿಲ್ಲ. ಅದೇ ಕಾರಣಕ್ಕಾಗಿಯೇ ರಾಜ್ಯದ ರೈತ ಕಂಗಾಲಾಗಿರೋದು. ಆದ್ರೆ, ಬರ ಪರಿಹಾರದ ವಿಚಾರದಲ್ಲೂ ರಾಜ್ಯ ಮತ್ತು ಕೇಂದ್ರದ ನಡುವೆ ದಂಗಲ್ ಶುರುವಾಗೋಯ್ತು. ರಾಜ್ಯದಲ್ಲಿರೋ 236 ತಾಲೂಕುಗಳ ಪೈಕಿ, 223 ತಾಲ್ಲೂಕುಗಳು ಬರಪೀಡಿತವಾಗಿವೆ. ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಒಟ್ಟು 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕಾ ಬೆಳೆ ನಷ್ಟವಾಗಿದೆ. ಬರದಿಂದ ರಾಜ್ಯದಲ್ಲಿ ಒಟ್ಟಾರೆ 35,162 ಕೋಟಿ ನಷ್ಟವಾಗಿದೆ. 18,171 ಕೋಟಿ ರೂ. ಬರ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ರಾಜ್ಯದ ಮನವಿ ಆಲಿಸಿದ ಕೇಂದ್ರ ಸರ್ಕಾರ, ಆ ಬಗ್ಗೆ ಪ್ರತಿಕ್ರಿಯೆ ಕೂಡ ಕೊಟ್ಟಿತ್ತು. ರಾಜ್ಯದಲ್ಲಿ ಪರಿಸ್ಥಿತಿ ಏನಾಗಿದೆ, ಹೇಗಿದೆ ಅನ್ನೋದರ ಬಗ್ಗೆ, ಕೇಂದ್ರದ ಬರ ಅಧ್ಯಯನ ತಂಡ ಕೂಡ ರಾಜ್ಯಕ್ಕೆ ಭೇಟಿ ನೀಡಿ ವರದಿ ನೀಡಿತ್ತು. ಅಷ್ಟೆಲ್ಲಾ ಆದ ಮೇಲೂ, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡ್ತಿಲ್ಲ. ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡ್ತಾ ಇದೆ, ಅನ್ನೋ ಆರೋಪನಾ ರಾಜ್ಯ ಸರ್ಕಾರ ಮಾಡ್ತಲೇ ಬಂದಿತ್ತು. ಇದೇ ವಿಚಾರವನ್ನ ಕೋರ್ಟ್ ತನಕ ತಗೊಂಡ್ ಹೋಯ್ತು.

ಇದನ್ನೂ ವೀಕ್ಷಿಸಿ:  Murder News: ಬೆಂಗಳೂರಿನಲ್ಲಿ ಕರಗ ಮೆರವಣಿಗೆ ವೇಳೆ ಕಿರಿಕ್: ಕಾಲು ತುಳಿದಿದ್ದಕ್ಕೆ ಕೊಂದುಬಿಟ್ಟರಾ ಹಂತಕರು..?

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?
Read more