ಹಿಂದೂ ದೇವಾಲಯದ ನಂತರ ಭಾರತ ಮೂಲದ ಕ್ರಿಶ್ಚಿಯನ್ ಚರ್ಚ್‌ಗೂ ಜಾಗ ಕೊಟ್ಟ ಅಬುಧಾಬಿ

First Published Apr 28, 2024, 5:39 PM IST

ಬೃಹತ್ ಹಿಂದೂ ದೇವಾಲಯಕ್ಕೆ ಜಾಗ ನೀಡಿದ  ಇತಿಹಾಸ ನಿರ್ಮಿಸಿದ ಸೌದಿ ರಾಷ್ಟ್ರ ಅಬುಧಾಬಿ,ಈ ದೇಗುಲದ ಪಕ್ಕದಲ್ಲೇ ಬೃಹತ್ ಚರ್ಚ್ ನಿರ್ಮಾಣಕ್ಕೆ ಜಾಗ ನೀಡಿದೆ. ಈಗಾಗಲೇ ಚರ್ಚ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮೇ. 5 ರಂದು ಚರ್ಚ್‌ ಉದ್ಘಾಟನೆಗೊಳ್ಳಲಿದೆ. 

ಬೃಹತ್ ಹಿಂದೂ ದೇವಾಲಯಕ್ಕೆ ಜಾಗ ನೀಡಿದ  ಇತಿಹಾಸ ನಿರ್ಮಿಸಿದ ಸೌದಿ ರಾಷ್ಟ್ರ ಅಬುಧಾಬಿ,ಈ ದೇಗುಲದ ಪಕ್ಕದಲ್ಲೇ ಬೃಹತ್ ಚರ್ಚ್ ನಿರ್ಮಾಣಕ್ಕೆ ಜಾಗ ನೀಡಿದೆ. ಈಗಾಗಲೇ ಚರ್ಚ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮೇ. 5 ರಂದು ಚರ್ಚ್‌ ಉದ್ಘಾಟನೆಗೊಳ್ಳಲಿದೆ. ಚರ್ಚ್ ಆಫ್  ಸೌತ್ ಇಂಡಿಯಾ ಪಾರಿಷ್‌ ಹೆಸರಿನಲ್ಲಿ ನಿರ್ಮಾಣವಾಗಿರುವ ಈ ಚರ್ಚ್‌ ಕೂಡ ಅಬುಧಾಬಿಯ ಇತಿಹಾಸದಲ್ಲೇ ಸ್ಥಾಪನೆಯಾಗಿರುವ ಮೊದಲ ಚರ್ಚ್ ಎನಿಸಲಿದೆ. 

ಅಬು ಮುರೇಖಾದಲ್ಲಿ ಈಗಾಗಲೇ ಉದ್ಘಾಟನೆಗೊಂಡಿರುವ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (BAPS)ಅಥವಾ ಬಾಪ್ಸ್  ಹಿಂದೂ ದೇಗುಲದ ಪಕ್ಕದಲ್ಲೇ 4.37 ಎಕರೆಯಲ್ಲಿ ಈ ಚರ್ಚ್‌ ನಿರ್ಮಾಣಗೊಳ್ಳಲಿದೆ. ಅಬುಧಾಬಿ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಭೂಮಿಯನ್ನು ಚರ್ಚ್‌ ನಿರ್ಮಿಸುವುದಕ್ಕೆ ಉಡುಗೊರೆಯಾಗಿ ನೀಡಿದ್ದಾರೆ.

ಶಾಂತಿ, ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ) ಪ್ಯಾರಿಷ್, ಭಾನುವಾರ ಅಬುಧಾಬಿಯಲ್ಲಿ ತನ್ನ ಮೊದಲ ಚರ್ಚ್‌ ಅನ್ನು ಸರಳವಾಗಿ ಉದ್ಘಾಟಿಸಲು ಸಿದ್ಧವಾಗಿದೆ ಎಂದು ಪಾದ್ರಿಗಳು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ನಡೆಯುವ ಸಮಾರಂಭದ ನೇತೃತ್ವವನ್ನು ಸಿಎಸ್‌ಐನ ಮಧ್ಯ ಕೇರಳ ಡಯಾಸಿಸ್‌ನ ಬಿಷಪ್ ರೆ.ಡಾ.ಮಲಾಯಿಲ್ ಸಾಬು ಕೋಶಿ ಚೆರಿಯನ್ ವಹಿಸಲಿದ್ದಾರೆ. ನಂತರ ಕೃತಜ್ಞತಾ ಸಭೆ ನಡೆಯಲಿದೆ.

ಈ ಚರ್ಚ್‌ ತನ್ನ ಪ್ರಕಟಣೆಯಲ್ಲಿ ಏಪ್ರಿಲ್ 19, 1979 ರಂದು ತನ್ನ ಮೊದಲ ಸೇವೆಯಿಂದ ಇಲ್ಲಿಯವರೆಗೂ  ಯುಎಇ ನಾಯಕತ್ವವು ನೀಡಿದ ನಿರಂತರ ಬೆಂಬಲವನ್ನು ಶ್ಲಾಘಿಸಿದ್ದು, ಸುಮಾರು 4 ಮಿಲಿಯನ್ ಸದಸ್ಯತ್ವವನ್ನು ಹೊಂದಿರುವ ಇಎಸ್‌ಐ, ಭಾರತದ ಎರಡನೇ ಅತಿದೊಡ್ಡ ಕ್ರಿಶ್ಚಿಯನ್ ಚರ್ಚ್ ಆಗಿದೆ.

ಅಬುಧಾಬಿಯಲ್ಲಿ, ಈ ಸೇವೆಯನ್ನು ಇಲ್ಲಿಯವರೆಗೆ ನಗರದ ಸೇಂಟ್ ಆಂಡ್ರ್ಯೂ ಚರ್ಚ್‌ನಲ್ಲಿ ನಡೆಸಲಾಗಿದೆ. ಆದರೆ ಇನ್ನುಮುಂದೆ  ರಾಜಧಾನಿಯಲ್ಲಿರುವ ಸಿಎಸ್‌ಐ ಅನುಯಾಯಿಗಳು ತಮ್ಮ ಸ್ವಂತ ಚರ್ಚ್ ಕಟ್ಟಡದಲ್ಲಿ ಒಟ್ಟುಗೂಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಈಗ ನಿರ್ಮಾಣ ಗೊಂಡಿರುವ ಹೊಸ ಚರ್ಚ್ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಮಣ್ಣಿನ ಸ್ವರದ ಮತ್ತು ಅಷ್ಟಭುಜಾಕೃತಿಯ ಚರ್ಚ್ ಕಟ್ಟಡವು ದೇವತೆಗಳ ರೆಕ್ಕೆಗಳನ್ನು ಹೋಲುವ ಮುಂಭಾಗದ ಎತ್ತರವನ್ನು ಹೊಂದಿದೆ, ಇದು ಮನುಕುಲದ ರಕ್ಷಣೆ ಮತ್ತು ದೇವರ ಸೃಷ್ಟಿಯನ್ನು ಸಂಕೇತಿಸುತ್ತದೆ ಎಂದು ಚರ್ಚ್ ಹೇಳಿದೆ.

ನಾವು ದೇವರ ಷರತ್ತುಗಳಿಲ್ಲದ ಮತ್ತು ತ್ಯಾಗದ ಪ್ರೀತಿಯನ್ನು ಹಂಚಿಕೊಳ್ಳಲು ಇಲ್ಲಿದ್ದೇವೆ, ಮತ್ತು ಈ ಪೂಜಾ ಸ್ಥಳವು ಸಮುದಾಯಕ್ಕೆ ಎಲ್ಲಾ ಸಮಯದಲ್ಲೂ ನಮ್ಮ ಸೇವೆಗಳನ್ನು ನೀಡುತ್ತದೆ ಎಂದು ನಾವು ಈ ಮೂಲಕ ಭರವಸೆ ನೀಡುತ್ತೇವೆ ಎಂದು ಪ್ಯಾರಿಷ್‌ ಚರ್ಚ್‌ನ ಧರ್ಮಗುರು ರೆ. ಲಾಲ್ಜಿ ಎಂ. ಫಿಲಿಪ್ ಹೇಳಿದರು.

ಭಾನುವಾರದ ಮೇ5 ರ ಸಮಾರಂಭದಲ್ಲಿ ಚರ್ಚ್ ನೀಡಿದ ವೈಯಕ್ತಿಕ ಹಾಜರಾತಿಯ ಆಹ್ವಾನಿತರು ಮತ್ತು ಪ್ರವೇಶ ಪಾಸ್‌ ಪಡೆದವರಿಗೆ ಮಾತ್ರ ಇರುತ್ತದೆ. ಧರ್ಮದ ಹಿತೈಷಿಗಳು ಮತ್ತು ಅನುಯಾಯಿಗಳು ಈ ಚರ್ಚ್‌ ಸಮರ್ಪಣೆ ಸಮಾರಂಭದಲ್ಲಿ ಸೇರಲು ಆನ್‌ಲೈನ್ ನೇರ ಪ್ರಸಾರ ಲಭ್ಯವಿದ್ದು, ಎಲ್ಲಾ ಭಕ್ತರಿಗೆ  ನಿಯಮಿತ ಸೇವೆಯು ಮೇ 5 ರಂದು ಪ್ರಾರಂಭವಾಗುತ್ತದೆ.

click me!