Cleaning Tips: ಮನೆ ಕ್ಲೀನ್ ಮಾಡುವಾಗ ಇದನ್ನು ನೀರಲ್ಲಿ ಬೆರೆಸಿದ್ರೆ ನೆಲ ಫಳಫಳ ಹೊಳೆಯುತ್ತೆ!

First Published Apr 28, 2024, 5:45 PM IST

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಕಷ್ಟದ ಕೆಲಸ. ಹೆಚ್ಚಿನ ಜನರು ತಮ್ಮ ಮನೆಯನ್ನು ಸ್ವಚ್ಛವಾಗಿಡಲು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾ ಇರುತ್ತಾರೆ. ಆದರೂ ಮನೆ ಕ್ಲೀನಾಗಿ ಕಾಣ್ತಿಲ್ಲ ಅಂತ ಬೇಜಾರು ಮಾಡಿಕೊಳ್ತಾರೆ. ಆದ್ರೆ ಈ ಕೆಲವು ಜೆಲ್‌ಗಳನ್ನು ನೀರಲ್ಲಿ ಬೆಳೆಸಿದ್ರೆ ಮನೆ ಫಳಫಳ ಹೊಳೆಯುತ್ತೆ.

ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಕಷ್ಟದ ಕೆಲಸ. ಹೆಚ್ಚಿನ ಜನರು ತಮ್ಮ ಮನೆಯನ್ನು ಸ್ವಚ್ಛವಾಗಿಡಲು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾ ಇರುತ್ತಾರೆ. ಆದರೂ ಮನೆ ಕ್ಲೀನಾಗಿ ಕಾಣ್ತಿಲ್ಲ ಅಂತ ಬೇಜಾರು ಮಾಡಿಕೊಳ್ತಾರೆ. ಆದ್ರೆ ಈ ಕೆಲವು ಜೆಲ್‌ಗಳನ್ನು ನೀರಲ್ಲಿ ಬೆಳೆಸಿದ್ರೆ ಮನೆ ಫಳಫಳ ಹೊಳೆಯುತ್ತೆ.

ಮನೆಯನ್ನು ಒರೆಸುವಾಗ ಈ 3 ಪದಾರ್ಥಗಳನ್ನು ನೀರಿನೊಂದಿಗೆ ಬೆರೆಸಿ. ಇದರಿಂದ ಕೀಟ, ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ. ಮನೆ ಕೂಡಾ ಸ್ವಚ್ಛವಾಗಿ ತುಂಬಾ ಚೆನ್ನಾಗಿ ಕಾಣಿಸುತ್ತದೆ.

ವಿನೇಗರ್‌
ಬೇಸಿಗೆಯಲ್ಲಿ ಮನೆಯಲ್ಲಿ ಸೊಳ್ಳೆಗಳನ್ನು ಹೋಗಲಾಡಿಸಲು ಬಯಸಿದರೆ ವಿನೇಗರ್‌ನ್ನು ನೀರಿನಲ್ಲಿ ಬೆರೆಸಿ ಒರೆಸಿ. ಇದರಿಂದ ಕೀಟಗಳು ಮತ್ತು ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ. ಇದಲ್ಲದೆ, ನೆಲವೂ ಹೊಳೆಯುತ್ತದೆ.

ಎಣ್ಣೆಗಳು
ಸಾರಭೂತ ತೈಲ: ಮನೆಯಲ್ಲಿ ಸೊಳ್ಳೆಗಳ ಹಾವಳಿಯನ್ನು ತೊಡೆದುಹಾಕಲು ಸಾರಭೂತ ತೈಲವನ್ನು ಬಳಸಬಹುದು. ಅದೇನೆಂದರೆ, ಲ್ಯಾವೆಂಡರ್ ಎಣ್ಣೆ ಅಥವಾ ಪುದೀನಾ ಎಣ್ಣೆಯಂತಹ ಸಾರಭೂತ ತೈಲವನ್ನು ನೀರಿಗೆ ಬೆರೆಸಿದರೆ, ಮನೆಯಲ್ಲಿ ಕೀಟಗಳು ಮತ್ತು ಸೊಳ್ಳೆಗಳಂತಹ ಸಮಸ್ಯೆಗಳು ಇರುವುದಿಲ್ಲ. ಅದೂ ಅಲ್ಲದೆ ಮನೆಯ ನೆಲವೂ ಸ್ವಚ್ಛವಾಗಿರುತ್ತದೆ.

ದಾಲ್ಚಿನ್ನಿ
ಬೇಸಿಗೆಯಲ್ಲಿ ಮನೆಯಲ್ಲಿ ಸೊಳ್ಳೆಗಳನ್ನು ತೊಡೆದುಹಾಕಲು, ಮೊದಲು ದಾಲ್ಚಿನ್ನಿಯನ್ನು ನೀರಿನಲ್ಲಿ ಕುದಿಸಿ. ನಂತರ ಆ ನೀರಿನಿಂದ ಮನೆಯನ್ನು ಒರೆಸಿ. ಇಂತಹ ಬೆಚ್ಚಗಿನ ನೀರಿನಿಂದ ಮನೆಯನ್ನು ಶುಚಿಗೊಳಿಸುವುದರಿಂದ ನೆಲದ ಮೇಲಿನ ಕೊಳೆ ಸಂಪೂರ್ಣವಾಗಿ ಹೋಗುವುದಲ್ಲದೆ, ಮನೆಯಲ್ಲಿ ನೊಣ ಮತ್ತು ಸೊಳ್ಳೆಗಳ ಕಾಟವೂ ಕಡಿಮೆಯಾಗುತ್ತದೆ.

ಪಾತ್ರೆ ತೊಳೆಯುವ ಸಾಬೂನು
ಪಾತ್ರೆ ತೊಳೆಯುವ ಸೋಪು ಕೂಡ ಮನೆಯಲ್ಲಿ ಸೊಳ್ಳೆಗಳ ಹಾವಳಿಯನ್ನು ಕಡಿಮೆ ಮಾಡುತ್ತದೆ. ಮನೆಯನ್ನು ಸಾಬೂನಿನಿಂದ ತೊಳೆದ ನಂತರ, ಸಾಮಾನ್ಯ ನೀರಿನಿಂದ ನೆಲ ಒರೆಸುವುದನ್ನು ಮರೆಯಬೇಡಿ.

ಉಪ್ಪು ನೀರು
ಒಂದು ಬಕೆಟ್ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪು ಸೇರಿಸಿ ಮತ್ತು ಈ ಉಪ್ಪು ನೀರನ್ನು ಬಳಸಿ ನೆಲವನ್ನು ಒರೆಸಿ. ನಕಾರಾತ್ಮಕತೆಯನ್ನು ತೊಡೆದುಹಾಕಲು ಇದು ಅತ್ಯುತ್ತಮ ಮಾರ್ಗವಾಗಿದೆ. ಮಾಪಿಂಗ್ ಮಾಡಿದ ನಂತರ ಈ ನೀರನ್ನು ಫ್ಲಶ್ ಮಾಡಬೇಕು. ಇದನ್ನು ನಿಯಮಿತವಾಗಿ ಅಥವಾ ವಾರಕ್ಕೊಮ್ಮೆಯಾದರೂ ಮಾಡುವುದರಿಂದ ನೆಲ ಫಳಫಳ ಹೊಳೆಯುತ್ತದೆ.

click me!