News Hour: ಪಾದಯಾತ್ರೆ ಕೈ ಬಿಟ್ಟ ಕಾಂಗ್ರೆಸ್.. ಜನರ ಆರೋಗ್ಯಕ್ಕಾಗಿ ಬದ್ಧ

Jan 14, 2022, 2:30 AM IST

ಬೆಂಗಳೂರು(ಜ.14)  ಕೊರೋನಾ (Coronavirus) ಹಬ್ಬುತ್ತಿದೆ. ಜನರ ಆರೋಗ್ಯದ ದೃಷ್ಟಿಯಿಂದ ಮೇಕೆದಾಟು (Mekedatu Padayatre) ಪಾದಯಾತ್ರೆ ಕೈಬಿಡುತ್ತಿದ್ದೇವೆ ಎಂದು ಸಿದ್ದರಾಮಯ್ಯ
ಹೇಳಿದ್ದಾರೆ. ಸದ್ಯಕ್ಕೆ ಪಾದಯಾತ್ರೆ ಮುಂದಕ್ಕೆ ಹಾಕಿದ್ದು ನಮ್ಮ ಹೋರಾಟ  ಮುಂದುವರಿಯಲಿದೆ ಎಂದಿದ್ದಾರೆ. ಕೋರ್ಟ್(Karnataka Highcourt)  ಚಾಟಿ ನಂತರ ಕರ್ನಾಟಕ ಸರ್ಕಾರ ಪಾದಯಾತ್ರೆ
ನಿಲ್ಲಿಸಲು ಆದೇಶ ನೀಡಿತ್ತು. ಇದಾದ ಮೇಲೆ ಹಲವು ಹೈಡ್ರಾಮಾಗಳು ನಡೆದವು.  ಮಧ್ಯರಾತ್ರಿ ಡಿಕೆಶಿ ಮನೆಗೆ ಹೋದ ಅಧಿಕಾರಿಗಳು ನೋಟಿಸ್ ನೀಡಲು ಮುಂದಾದರು.

ಕಾಂಗ್ರೆಸ್ ಪಾದಯಾತ್ರೆ ಮತ್ತು ರಾಜಕಾರಣ

ಸಿಎಂಗಳ ಜತೆ ಸಭೆ ನಡೆಸಿದ ಮೋದಿ ಲಾಕ್ ಡೌನ್ ಮಾಡದಂತೆ  ಪರೋಕ್ಷ ಸಲಹೆ ನೀಡಿದ್ದಾರೆ. ಕರ್ನಾಟಕದಲ್ಲಿ ಒಂದೇ ದಿನ 25 ಸಾವಿರ ಪ್ರಕರಣ ದಾಖಲಾಗಿದ್ದು ಆತಂಕ ಹೆಚ್ಚಿಸಿದೆ. ವಸತಿ ಶಾಲೆಗಳು ಕೊರೋನಾ ಹಾಟ್ ಸ್ಪಾಟ್ ಆಗುತ್ತಿದೆ.