ಕಾರಿಗೆ ಒದ್ದ ಬೈಕ್ ಸವಾರ.. ನಂತರ ಆಗಿದ್ದೆಲ್ಲ ಘನಘೋರ ಅನಾಹುತ!

May 10, 2022, 10:32 AM IST

ಬೈಕ್ ಸವಾರನೋರ್ವ ರಸ್ತೆಯಲ್ಲಿ ಜೊತೆ ಜೊತೆಗೆ ಚಲಿಸುತ್ತಿದ್ದ ಕಾರಿಗೆ ಒದ್ದಿದ್ದು, ನಂತರ ಘನಘೋರ ಅನಾಹುತವೇ ನಡೆದಿದೆ. ಬೈಕ್ ಸವಾರ ಒದ್ದಿದ್ದಕ್ಕೋ ಅಥವಾ ಕಾರಿನಲ್ಲಿ ಮೊದಲೇ ತಾಂತ್ರಿಕ ತೊಂದರೆ ಇತ್ತೋ ತಿಳಿಯದು. ಬೈಕ್ ಸವಾರ ಒದ್ದ ಕೂಡಲೇ ಕಾರು ನಿಯಂತ್ರಣ ಕಳೆದುಕೊಂಡು ಎರ್ರಾಬಿರ್ರಿ ಓಡಲು ಶುರು ಮಾಡಿದ್ದು ರಸ್ತೆಯಲ್ಲಿದ್ದ ಇತರ ವಾಹನಗಳಿಗೆಲ್ಲಾ ಡಿಕ್ಕಿ ಹೊಡೆದಿದೆ. ಆದರೆ ಕಾರಿಗೆ ಒದ್ದ ಬೈಕ್ ಸವಾರ ಮಾತ್ರ ಯಾವುದೇ ತೊಂದರೆ ಇಲ್ಲದೇ ಎಸ್ಕೇಪ್‌ ಆಗಿದ್ದಾನೆ. 2017ರಲ್ಲಿ ಕ್ಯಾಲಿಫೋರ್ನಿಯಾದ ನಗರವಾದ ಸಾಂಟಾ ಕ್ಲಾರಿಟಾದಲ್ಲಿ ನಡೆದ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.