ಪಿತೃಪಕ್ಷದಲ್ಲಿ ಮಾಡಿದ ಎಡವಟ್ಟಿನಿಂದ ಸಿಎಂಗೆ ಕಂಟಕ ಎದುರಾಯ್ತೇ?

By Girish Goudar  |  First Published Sep 25, 2024, 11:34 AM IST

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸದ್ಯ ಸಂಕಷ್ಟಕ್ಕೆ ಇದೇ ಕಾರಣ ಎನ್ನುವ ಚರ್ಚೆ ಜೋರಾಗ್ತಿದೆ. ಪಿತೃ ಪಕ್ಷದಲ್ಲಿ ತುಂಗಭದ್ರೆಗೆ ಬಾಗಿನ ಅರ್ಪಣೆ ಮಾಡಿ ಸಿದ್ದರಾಮಯ್ಯ ಅವಕೃಪೆಗೆ ಪಾತ್ರರಾಗಿದ್ದಾರೆ ಹೀಗೆಂದು ಬಿಜೆಪಿ ನಾಯಕರ ಅರೋಪ 


ವಿಜಯನಗರ(ಸೆ.25):  ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪಿತೃಪಕ್ಷದಲ್ಲಿ ಮಾಡಿದ ಕೆಲಸವೊಂದು ಎಡವಟ್ಟಿಗೆ ಕಾರಣವಾಯ್ತೇ?. ಇಂತಹದೊಂದು ಚರ್ಚೆ ಇದೀಗ ನಡೆಯುತ್ತಿದೆ. ಪಿತೃಪಕ್ಷದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದಕ್ಕೆ ಸಿಎಂಗೆ ಕಂಟಕ ಎದುರಾಯ್ತೇ ಎಂಬ ಅನುಮಾನ ಮೂಡಿದೆ?. 

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಸದ್ಯ ಸಂಕಷ್ಟಕ್ಕೆ ಇದೇ ಕಾರಣ ಎನ್ನುವ ಚರ್ಚೆ ಜೋರಾಗ್ತಿದೆ. ಪಿತೃ ಪಕ್ಷದಲ್ಲಿ ತುಂಗಭದ್ರೆಗೆ ಬಾಗಿನ ಅರ್ಪಣೆ ಮಾಡಿ ಸಿದ್ದರಾಮಯ್ಯ ಅವಕೃಪೆಗೆ ಪಾತ್ರರಾಗಿದ್ದಾರೆ ಹೀಗೆಂದು ಬಿಜೆಪಿ ನಾಯಕರು ಅರೋಪಿಸುತ್ತಿದ್ದಾರೆ. 

Tap to resize

Latest Videos

undefined

ತುಂಗಭದ್ರಾ ಡ್ಯಾಂಗೆ ಇಂದು ಸಿಎಂ ಬಾಗಿನ: ಇತಿಹಾಸದಲ್ಲಿ ಇದೇ ಮೊದಲು..!

ಸಾಮಾನ್ಯವಾಗಿ ಪಿತೃಪಕ್ಷದಲ್ಲಿ ಯಾವುದೇ ಶುಭ ಕಾರ್ಯ ಮಾಡೋದಿಲ್ಲ. ಕಳೆದ ತಿಂಗಳು ಡ್ಯಾಂ ಗೇಟ್ ಒಡೆದು 35ಕ್ಕೂ ಹೆಚ್ಚು ಟಿಎಂಸಿ‌ ನೀರು ನದಿಪಾಲಾದ್ರೂ ಒಂದೇ ತಿಂಗಳಲ್ಲಿ ಮತ್ತೊಮ್ಮೆ ತುಂಬಿತ್ತು. ಅದೃಷ್ಟವೆನ್ನುವಂತೆ ಡ್ಯಾಂ ಭರ್ತಿಯಾಗಿ ಎರಡನೇ ಬೆಳೆಗೂ ನೀರು ಸಿಗುವ ವಿಶ್ವಾಸ ಮೂಡಿಸಿದೆ. ಇಂತಹ ಸುಸಂಧರ್ಭದಲ್ಲಿ ವಾತಾವರಣದಲ್ಲಿ ಬಾಗಿನ ಅರ್ಪಣೆ ಮಾಡುವದು ಒಳ್ಳೆಯದು. ಅದರೆ ಪಿತೃಪಕ್ಷದಲ್ಲಿ ಯಾಕೆ ಬಾಗಿನ ಅರ್ಪಣೆ ಮಾಡಬೇಕಿತ್ತು. ಪಿತೃ ಪಕ್ಷಕ್ಕೂ ಮುನ್ನಾ ಅಥವಾ ನಂತರ ಬಾಗಿನ ಅರ್ಪಣೆ ಮಾಡಬಹುದಿತ್ತು. 

click me!