ಈ ಸಲ ವಿಶ್ವಕಪ್‌ ಗೆದ್ದೇ ಗೆಲ್ತೇವೆ: ಹರ್ಮನ್‌ಪ್ರೀತ್‌ ಕೌರ್ ವಿಶ್ವಾಸ

Published : Sep 25, 2024, 11:49 AM IST
ಈ ಸಲ ವಿಶ್ವಕಪ್‌ ಗೆದ್ದೇ ಗೆಲ್ತೇವೆ: ಹರ್ಮನ್‌ಪ್ರೀತ್‌ ಕೌರ್ ವಿಶ್ವಾಸ

ಸಾರಾಂಶ

ಮುಂಬರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಕಪ್ ಗೆಲ್ಲುವ ವಿಶ್ವಾಸವನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ 

ಮುಂಬೈ: ಈ ಬಾರಿ ಟಿ20 ವಿಶ್ವಕಪ್‌ಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಶ್ವಕಪ್‌ ಗೆಲ್ಲುವ ವಿಶ್ವಾಸವಿದೆ ಎಂದು ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದಾರೆ. ಅ.3ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ಗಾಗಿ ಯುಎಇಗೆ ತೆರಳುವ ಮುನ್ನ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹರ್ಮನ್‌ಪ್ರೀತ್‌ ಮಾತನಾಡಿದರು.

‘ತಂಡದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಸಂಪೂರ್ಣ ಸಿದ್ಧರಾಗಿದ್ದೇವೆ. ನಾವು ಈಗ ಆಸ್ಟ್ರೇಲಿಯಾ ತಂಡವನ್ನು ಸೋಲಿಸಬಲ್ಲೆವು. ಅದು ಅವರಿಗೂ ತಿಳಿದಿದೆ. ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೇವೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖ್ಯ ಕೋಚ್‌ ಮುಜುಂದಾರ್‌ ಕೂಡಾ ಉಪಸ್ಥಿತರಿದ್ದರು. 

ಭಾರತ ತಂಡ ಅ.4ರಂದು ನ್ಯೂಜಿಲೆಂಡ್‌ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಬಳಿಕ ಅ.6ರಂದು ಪಾಕಿಸ್ತಾನ, 9ರಂದು ಶ್ರೀಲಂಕಾ ಹಾಗೂ ಕೊನೆ ಪಂದ್ಯದಲ್ಲಿ ಅ.13ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ತಂಡ ಶೀಘ್ರದಲ್ಲೇ ಯುಎಇಗೆ ಪ್ರಯಾಣಿಸಲಿದೆ.

ಕಾನ್ಪುರ ಟೆಸ್ಟ್‌ಗೆ ಸ್ಪಿನ್‌ ಸ್ನೇಹಿ ಪಿಚ್‌: ಭಾರತ 3 ಸ್ಪಿನ್ನರ್‌ಗಳು ಕಣಕ್ಕಿಳಿಯುವ ಸಾಧ್ಯತೆ

ಟಿ20 ವಿಶ್ವಕಪ್‌ಗೆ ಭಾರತ ತಂಡ

ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್‌, ರಿಚಾ ಘೋಷ್‌, ಯಸ್ತಿಕಾ ಭಾಟಿಯಾ, ಪೂಜಾ ವಸ್ತ್ರಕರ್‌, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್‌, ದಯಾಳನ್‌ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್‌, ಶ್ರೇಯಾಂಕ ಪಾಟೀಲ್‌, ಸಜನಾ ಸಜೀವನ್‌.

ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ, ತನುಜಾ ಕನ್ವರ್‌, ಸೈಮಾ ಥಾಕೋರ್‌.

ವಿರಾಟ್ ಕೊಹ್ಲಿ ಯಾಕೆ ಐಪಿಎಲ್ ಹರಾಜಿಗೆ ಬರ್ತಿಲ್ಲ? ಅಷ್ಟಕ್ಕೂ ಆರ್‌ಸಿಬಿಗೂ, ಕೊಹ್ಲಿಗೂ ಏನು ಸಂಬಂಧ?

ಇರಾನಿ ಕಪ್‌: ಶೇಷ ಭಾರತ ತಂಡದಲ್ಲಿ ದೇವದತ್‌, ಪ್ರಸಿದ್ಧ್‌

ನವದೆಹಲಿ: ಹಾಲಿ ರಣಜಿ ಟ್ರೋಫಿ ಚಾಂಪಿಯನ್‌ ಮುಂಬೈ ವಿರುದ್ಧ ಅ.1ರಿಂದ ಲಖನೌದಲ್ಲಿ ನಡೆಯಲಿರುವ ಇರಾನಿ ಕಪ್‌ ಪಂದ್ಯಕ್ಕೆ ಶೇಷ ಭಾರತ(ರೆಸ್ಟ್‌ ಆಫ್‌ ಇಂಡಿಯಾ) ತಂಡಕ್ಕೆ ಕರ್ನಾಟಕದ ದೇವದತ್‌ ಪಡಿಕ್ಕಲ್ ಹಾಗೂ ಪ್ರಸಿದ್ಧ್ ಕೃಷ್ಣ ಆಯ್ಕೆಯಾಗಿದ್ದಾರೆ. ಮಂಗಳವಾರ ಬಿಸಿಸಿಐ ತಂಡ ಪ್ರಕಟಿಸಿತು. ಋತುರಾಜ್‌ ಗಾಯಕ್ವಾಡ್‌ ನಾಯಕನಾಗಿ ನೇಮಕಗೊಂಡಿದ್ದಾರೆ. ಧ್ರುವ್‌ ಜುರೆಲ್‌ ಹಾಗೂ ಯಶ್‌ ದಯಾಳ್‌ ಬಾಂಗ್ಲಾದೇಶ ವಿರುದ್ಧ ಸರಣಿಗೆ ಭಾರತ ತಂಡದಲ್ಲಿದ್ದರೂ, 2ನೇ ಟೆಸ್ಟ್‌ಗೆ ಆಯ್ಕೆಯಾಗದಿದ್ದರೆ ಅವರು ಇರಾನಿ ಕಪ್‌ನಲ್ಲಿ ಆಡುವ ಸಾಧ್ಯತೆಯಿದೆ.

ಇದೇ ವೇಳೆ ಮುಂಬೈ ತಂಡಕ್ಕೆ ಅಜಿಂಕ್ಯ ರಹಾನೆ ನಾಯಕತ್ವ ವಹಿಸಲಿದ್ದಾರೆ. ಭಾರತ ತಂಡದಲ್ಲಿರುವ ಸರ್ಫರಾಜ್‌ ಖಾನ್‌ ಕೂಡಾ 2ನೇ ಟೆಸ್ಟ್‌ಗೆ ಆಯ್ಕೆಯಾಗದಿದ್ದರೆ ಮುಂಬೈ ತಂಡದ ಪರ ಆಡಲು ಬಿಸಿಸಿಐ ಅನುಮತಿ ನೀಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಶ್ರೇಯಸ್‌ ಅಯ್ಯರ್‌, ಮುಶೀರ್ ಖಾನ್‌, ಶಮ್ಸ್‌ ಮುಲಾನಿ, ತನುಶ್‌ ಕೋಟ್ಯನ್‌ ಮುಂಬೈ ಪರ ಆಡುವ ನಿರೀಕ್ಷೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವ ಭಾರತೀಯನೂ ಮಾಡದ ಅಪರೂಪದ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ!
ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ