ಮಕ್ಕಳನ್ನು ಹ್ಯಾಂಡ್​ಬ್ಯಾಗ್​ನಂತೆ ಬಳಸೋದೆಂಥ ಸಂಸ್ಕೃತಿ? ಐಶ್ವರ್ಯ ರೈಗೆ ಮಾಳವಿಕಾ ಅವಿನಾಶ್​ ಹೇಳಿದ್ದಿಷ್ಟು...

By Suchethana D  |  First Published Sep 25, 2024, 11:18 AM IST

ಹೋದ ಕಡೆಗಳಲ್ಲೆಲ್ಲಾ ಮಗಳು ಆರಾಧ್ಯಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುವ ಐಶ್ವರ್ಯ ರೈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದ್ದು, ಇದರ ಕುರಿತು ನಟಿ ಮಾಳವಿಕಾ ಅವಿನಾಶ್​ ಹೇಳಿದ್ದೇನು? 
 


ಮಕ್ಕಳನ್ನು ಹ್ಯಾಂಡ್​ ಬ್ಯಾಗಿನಂತೆ ಜತೆಯಲ್ಲಿ ಎಲ್ಲಾ ಕಡೆ ಕರ್ಕೊಂಡು ಹೋಗೋದೆಂತ ಸಂಸ್ಕೃತಿ...?
ಹೀಗಂತ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ ನಟಿ ಮಾಳವಿಕಾ ಅವಿನಾಶ್​. ಇದಕ್ಕೆ ಕಾರಣ, ನಟಿ ಐಶ್ವರ್ಯ ರೈ, ಮಗಳು ಆರಾಧ್ಯಳನ್ನು ಪ್ಯಾರೀಸ್​ಗೆ ಕರೆದುಕೊಂಡು ಹೋಗಿ ವಾಪಸಾಗಿರುವ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವುದು. ಅಷ್ಟಕ್ಕೂ ಇದೊಂದೇ ವಿಡಿಯೋವಲ್ಲ. ಸಾಮಾನ್ಯವಾಗಿ ಐಶ್ವರ್ಯ ಎಲ್ಲಿಯೇ ಹೋದರೂ ಮಗಳನ್ನು ಕರೆದುಕೊಂಡೇ ಹೋಗುತ್ತಾರೆ. ಆಕೆ ಕೂಡ ಶಾಲೆಗೆ ಹೋಗುವ ವಿದ್ಯಾರ್ಥಿನಿ. ಆದರೆ ಮಗಳು ಇಷ್ಟು ದೊಡ್ಡವಳಾದರೂ ಸದಾ ತಮ್ಮ ಸೆರಗಿನಡಿಯಲ್ಲಿಯೇ ಕಟ್ಟಿಕೊಂಡು ತಿರುಗುತ್ತಾರೆ. ಇದೇ ಕಾರಣಕ್ಕೋ ಏನೋ ಆರಾಧ್ಯಾ ಎಲ್ಲಿಯೇ ಹೋದರೂ ಇನ್ನೂ ಚಿಕ್ಕಮಗುವಿನಂತೆಯೇ ವರ್ತಿಸುವುದನ್ನು ವಿಡಿಯೋಗಳಲ್ಲಿ ನೋಡಬಹುದು. 

ಇದೀಗ ಪ್ಯಾರೀಸ್​ ಫ್ಯಾಷನ್​ ವೀಕ್​ನಿಂದ ವಾಪಸಾಗಿರುವ ವಿಡಿಯೋ ವೈರಲ್​ ಆಗುತ್ತಲೇ ಕಮೆಂಟುಗಳ ಸುರಿಮಳೆಯಾಗಿದೆ. ಅದರಲ್ಲಿ ಬಹುತೇಕ ಎಲ್ಲರೂ ಕೇಳಿರುವ ಪ್ರಶ್ನೆಯೇ ಇದು. ಆರಾಧ್ಯಳಿಗೆ ಶಾಲೆ ಇರಲ್ವಾ ಅಥ್ವಾ ಬಾಲಿವುಡ್​ನ ಮಕ್ಕಳು ಶಾಲೆಗೆ ಹೋಗದೇ ಡಿಗ್ರಿ ಪಡೆಯುತ್ತಾರಾ ಎನ್ನುವುದು. ಅಪ್ಪ-ಅಮ್ಮಂದಿರು ಮಕ್ಕಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಪೊಸೆಸಿವ್​ ಆದರೂ ಇದೇ ರೀತಿ ವರ್ತಿಸುತ್ತಾರೆ ಎನ್ನುತ್ತಾರೆ ಮನೋವೈದ್ಯರು. ಇದೇ ಕಾರಣಕ್ಕಾಗಿಯೇ ಐಶ್ವರ್ಯ ಮತ್ತು ಅಭಿಷೇಕ್​ ನಡುವೆ ಕೂಡ ಮನಸ್ತಾಪ ಬಂದಿದೆ ಎಂದೇ ಹೇಳಲಾಗುತ್ತದೆ. ಕೇವಲ ಐಶ್ವರ್ಯ ಅಷ್ಟೇ ಅಲ್ಲದೇ, ಕೆಲವು ಸೆಲೆಬ್ರಿಟಿಗಳು ಸೇರಿದಂತೆ ಸಾಮಾನ್ಯ ಪಾಲಕರು ಅದರಲ್ಲಿಯೂ ಹೆಚ್ಚಾಗಿ ಹೆಂಗಸರು ಈ ರೀತಿ ವರ್ತಿಸುವುದು ಇದೆ. ಅದನ್ನೇ ಮಾಳವಿಕಾ ಅವರು ತುಂಬಾ ಸುಂದರವಾಗಿ ವರ್ಣಿಸಿದ್ದಾರೆ. ಮಾಳವಿಕಾ ಅವರು ತಮ್ಮ ಪೋಸ್ಟ್​ನಲ್ಲಿ ಐಶ್ವರ್ಯ ರೈ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲವಾದರೂ, ಕಮೆಂಟಿಗರು ಈ ಮಾತು ನಟಿಗೇ ಅನ್ವಯಿಸುತ್ತದೆ ಎಂದು ಹೇಳುವ ಮೂಲಕ ಪ್ರತಿಕ್ರಿಯೆ ಕೊಡುತ್ತಿದ್ದಾರೆ. 

 
 
 
 
 
 
 
 
 
 
 
 
 
 
 

Latest Videos

undefined

A post shared by Viral Bhayani (@viralbhayani)

ಮಾಳವಿಕಾ ಬರೆದಿರುವುದು ಹೀಗಿದೆ; 
"ಮಕ್ಕಳನ್ನು ಹ್ಯಾಂಡ್​ ಬ್ಯಾಗಿನಂತೆ ಜತೆಯಲ್ಲಿ ಎಲ್ಲಾ ಕಡೆ ಕರ್ಕೊಂಡು ಹೋಗೋದೆಂತ ಸಂಸ್ಕೃತಿ...? ಆಫೀಸಿಗೆ,ಆಫೀಸ್ ಟೂರಿಗೆ ಹೋದಾಗ ಮಕ್ಕಳನ್ನು ಕರ್ಕೊಂಡು ಹೋದರೆ ಸುಮ್ಮನ್ನಿರುತ್ತಾರೆಯೇ ಬಾಸು? ಮಿಕ್ಕವರಿಗೆ ಆಫೀಸಿದ್ದ ಹಾಗೆ ನಮಗೆ ಶೂಟಿಂಗ್, ಕಾರ್ಯಕ್ರಮಗಳು, ಫೋಟೊ ಶೂಟ್ ಇಂತಹವೆಲ್ಲಾ! ನಿಮ್ಮ ಯಾವುದೋ insecurity/ಅಸುರಕ್ಷತೆಯ ಕಾರಣ, ಹರೆಯದ ಹುಡುಗಿಯರನ್ನು ಕರ್ಕೊಂಡು ಹೋಗೊದ್ರಿಂದ ಆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ತಾವು ತಮ್ಮ ತಾಯಂತ ತಲೆಯೊಳಗೆ ಸ್ಟಾರ್ ಆಗುತ್ತಾರೆ ಆ ಮಕ್ಕಳು. ತಾಯಿ ಹಾಕಿದ ಪರಿಶ್ರಮ, ಪಟ್ಟ ಕಷ್ಟ ಯಾವುದೂ ಆ ಮಕ್ಕಳಿಗೆ ಗೊತ್ತಿರುವುದಿಲ್ಲ. ಗೊತ್ತಾಗುವುದು ಬೇಡ. ಈ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆಯೇ ತಾವೂ ಹೀರೋಯಿನ್ ಆಗುವ ಕನಸು ಕಾಣುತ್ತಾರೆ. ತನ್ನ ಪೊಸಿಶನ್ನನ್ನು ಬಳಸಿಕೊಂಡು, ಆ ತಾಯಿ ಒಂದು ಪಿಕ್ಚರನ್ನೂ ಆ ಮಗ/ಮಗಳಿಗೆ ಕೊಡಿಸಿಬಿಡಬಹುದೇನೊ. ಶೂಟಿಂಗಲ್ಲಿ ತಾಯಿ ಮಾಡಿರುವ ಐವತ್ತು ಸಿನಿಮಾಗಳನ್ನು ತೀನೆ ಮಾಡಿದ್ದೇನೇನೊ ಎಂಬ ಆಟಿಟ್ಯೂಡ್. ಜತೆಗೆ ಏಳೆಂಟು ಜನ, ಕೈಗೊಬ್ಬ ಕಾಲ್ಗೊಬ್ಬ. ತಾಯಿ ಮೊದಲ ಚಿತ್ರ ಮಾಡುವಾಗ ಹಾಕಿದ್ದ ಹರಕಲು ಬಟ್ಟೆಚಪ್ಪಲಿ, ಯಾವುದೂ ಈ ಮಕ್ಕಳಿಗೆ ಗೊತ್ತಿರುವುದಿಲ್ಲ. 

ತೆರೆಯ ಮೇಲೆ ಕಾಣುತ್ತಿದ್ದಂತೆಯೇ, ಅಯ್ಯೊ, ಇವಳು ತಾಯಿಯಂತೆ ಎಲಿಲಿದ್ದಾಳೆ ಎಂಬ ಕಂಪ್ಯಾರಿಸನ್ ಶುರುವಾಗುತ್ತೆ. ಅವಳೆಂತಹ ಸುಂದರಿ, ಡ್ಯಾಸ್ನ್ಸರ್, ಪರ್ಫಾಮರ್…ಮಗಳೇನೂ ಸುಖ ಇಲ್ಲ ಎಂದು ಸಾರಾಸಗಟಾಗ ಕೆಗೆದು ಹಾಕಿಬಿಡುತ್ತಾರೆ ಪ್ರೇಕ್ಷಕರು. ಪಿಕ್ಚರ್ ಓಡಿದರೆ ಸರಿ. ಓಡದೆ ಹೋದರೆ, ಮಂದಿನ ಹತ್ತು, ಇಪ್ಪತ್ತು ಮೂವತ್ತು ವರ್ಷಗಳು, ತಾನ್ಯಾಕೆ ಕಾಯಿಯಂತಿಲ್ಲ, ತಾಯಿಯಂತೆ ಸ್ಟಾರಾಗಲಿಲ್ಲ ಎಂಬ ಕೊರಗು. ಸ್ಟಾರ್ ಮಕ್ಕಳಾಗಿ ಹುಟ್ಟುವುದು ಅದೃಷ್ಟವೇ. ಆದರೆ ಅದನ್ನೇ ಬದುಕೆಂದುಕೊಳ್ಳಬಾರದಿರಬೇಕು ಮಕ್ಕಳು. ತಮ್ಮದೊಂದು ವ್ಯಕ್ತಿತ್ವ, ಬದುಕು, ಗುರಿ ಇವೆಲ್ಲವೂ ಇರಬೇಕೆಂಬುದನ್ನು ಸ್ಟಾರ್ ತಂದೆ ತಾಯಂದಿರೂ ಮಕ್ಕಳಿಗೆ ಮನವಿ ಮಾಡಿಕೊಡಬೇಕು. ಎಲ್ವರಂತೆ ಸಾಮಾನ್ಯ ಬದುಕನ್ನು ಬದುಕುವ ಅವಕಾಶ ಮಾಡಿಕೊಡಬೇಕು. ಜ್ಯಾಕೀ ಚ್ಯಾನ್, ತಾನು ಮಗನನ್ನು ಬೆಳೆಸುವುದರಲ್ಲಿ ಸೋತಿದ್ದೇನೆ ಎಂಬುದನ್ನು ಎಲ್ಲೊ ಹೇಳಿಕೊಂಡದ್ದನ್ನು ನೋಡಿದ ನೆನಪು. ಜೇಸೀ ಚ್ಯಾನಿಗೀಗ 41ವರ್ಷ. ಬದುಕಲ್ಲಿ ಏನು ಆಗಿಲ್ಲ, ಸೋತ ನಟ ಅಷ್ಟೆ. ಜಾಕೀ ಎಂತ ಲೆಜೆಂಡ್, ಮಗ ನೋಡಿ. 

ಕವಿತಾ ಗೌಡ ಮನೆ ತುಂಬಿದ ಕಂದಮ್ಮ: ಆಸ್ಪತ್ರೆಯಿಂದ ಮನೆವರೆಗಿನ ವಿಡಿಯೋ ಶೇರ್​ ಮಾಡಿದ ನಟಿ

ಸ್ಟಾರ್ ಮಕ್ಕಳು ಸ್ಟಾರ್ ಆಗಿಯೇ ಆಗುತ್ತಾರೆ ಎಂಬ ಶಾಸನವೇನಿಲ್ಲ. ಸೋತ ಎಷ್ಟೊ ಮಕ್ಕಳನ್ನು, ನಾನೇ ನೋಡಿದ್ದೇನೆ. ಹೋದಲ್ಲೆಲ್ಲಾ ಮಕ್ಕಳನ್ನು ಕೊಂಡು ಹೋಗುವ ಅಭ್ಯಾಸವನ್ನು ನಮ್ಮ ಸ್ಟಾರ್ ಗಳು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ಹಸ್ತಕ್ಷೇಪ ಮಾಡುವುದೂ ಒಂದು ರೀತಿಯಲ್ಲಿ ಅವರ ಬಾಲ್ಯ ಯೌವ್ವನದ ಮೇಲೆ ಮಾಡುವ ಪ್ರಹಾರವೇ.  ಪ್ರಪಂಚದಲ್ಲಿ ಎಲ್ಲವೂ ಇದೆ ಮಗಳೇ, ನನ್ನ ಆಯ್ಕೆಯ ಬದುಕು ಇದು, ನಿನ್ನದು ಇದೇ ಆಗಬಹುದು ಬೇರೆಯದಾಗಬಹುದು ಅಂತ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಕರ್ತವ್ಯವೇ. ನಾನು ಓದಿಲ್ಲ, ನೀನು ಮೊದಲು ಓದು. ಅಮೇಲೆ ಸ್ಟಾರಾಗೊ ಯೋಚನೆ ಮಾಡು. ಮುಖ್ಯವಾಗಿ ಸ್ಟಾರ್ ಆಗುವುದಕ್ಕೆ ಒಂದು ಎಕ್ಸ್ ಫ್ಯಾಕ್ಟರ್ ಇರುತ್ತದೆ. ಅದು ಅವರವರ ಅದೃಷ್ಟದ ಪರೀಕ್ಷೆ. ಗೆದ್ದರೂ ಸೋತರೂ ನೀನು ಕುಗ್ಗದೆ ಬದುಕಲ್ಲಿ ಗೆಲ್ಲ ಬೇಕು ಎಂದೂ ಎಷ್ಟೊ ಸ್ಟಾರ್ ಮಕ್ಕಳಿಗೆ ಹೇಳಬೇಕೆಂದು ನನಗೆ ಮನಸ್ಸಾಗುತ್ತಗೆ. “ಸಾಕು ಬೇರೆಯವರ ಉಸಾಬರಿ. ನಿನ್ನ ಕೆಲಸ ನೀನು ನೋಡು. ನಿನ್ನ ಪ್ರಾಕ್ಟಿಕಲ್ ಪಥದರ್ಶನವನ್ನು ಸ್ವೀಕರಿಸುವ ಮನಸ್ಥಿತಿ ಅವರಿಗಿರುವುದಿಲ್ಲ”, ಅಂತ ಅವಿನಾಶ್ ಸುಮ್ಮನಾಗಿಸುತ್ತಾರೆ. ಇಷ್ಟಕ್ಕೂ ಕ್ರಿಕೆಟ್ ಸ್ಟಾರ್ಸ್ ಮಕ್ಕಳೇನು ಅವರಂತೆ ಸ್ಟಾರ್ಸಾಗುವುದಿಲ್ಲವಲ್ಲ. ಭಗವಂತ ನಮಗೆ ಅಂತ ಒಂದು ಮಾರ್ಗವನ್ನು ಮುಂಚೆಯೇ ನಿರ್ಧರಿಸುತ್ತಾನೆ. 

ತಾಯಿ, ವಿಶ್ವ ಸುಂದರಿ, ಹೋದಲೆಲ್ಲಾ ಆ ಪುಟ್ಟ ಹುಡುಗಿ ಬಾಲಂಗೋಚಿಯಂತೆ…ಒಂದು ಬದಿಯಲ್ಲಿ ಆಕೆಯನ್ನು ತಾಯಾರು ಮಾಡಿದ ಸ್ಟೈಲಿಸ್ಟ್, ಹೇರ್ ಡ್ರೆಸ್ಸರ್, ಮೇಕಪ್ ಮಾಡಿದವರು, ಮತ್ತೊಂದು ಕಡೆ ಆ ಹುಡುಗಿ…ಇದೆಂತಹ ಅವಸ್ಥೆ. ಆ ಮಗುವಿಗೆ, ಶಾಲೆ, ಓದು ಏನೂ ಇರುವುದಿಲ್ಲವೆ? ಹೀಗೆ ತಾಯಿಯ ಜಗತ್ತೆಲ್ಲ ಜತೆ ತಿರುಗಾಡುತ್ತಾಳಲ್ಲಾ? ತಾಯಿಗೆ ಹಾಗೆ ಉಡುಗೆ ತೊಟ್ಟು ಪೋಸ್ ಕೊಡುವುದು, ಅವಳ ವೃತ್ತಿ! ಈ ಮಗುವಿಗಲ್ಲೇನು ಕೆಲಸ? ಯಾಕೊ ಆ ದೃಶ್ಯವನ್ನು ನೋಡಿ ಬೇಜಾರಾಯಿತು. ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ನಾವೇ ಬಳಸಿಕೊಂಡುಬಿಡುತ್ತೇವಾ?" ಎಂದಿದ್ದಾರೆ ಮಾಳವಿಕಾ. 

ಬದಲಾಗ್ತಿದ್ದಾಳೆ ಭಾಗ್ಯ? ಸೀರೆ ಹೋಗಿ ಜೀನ್ಸ್- ಜಡೆ ಹೋಗಿ ಬಾಬ್​ಕಟ್: ​ ಹೆಂಗಸ್ರ ಹಣೆಬರಹ ಇಷ್ಟೆನಾ? ನೆಟ್ಟಿಗರ ಬೇಸರ

click me!