ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ ಏರ್‌ ಟ್ರೇನ್‌

Published : Sep 25, 2024, 11:09 AM IST
ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ ಏರ್‌ ಟ್ರೇನ್‌

ಸಾರಾಂಶ

ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ಏರ್ ಟ್ರೈನ್ ಆರಂಭವಾಗಲಿದೆ. ಏನಿದು ಏರ್‌ ಟ್ರೈನ್ ಎಂಬುದರ  ಮಾಹಿತಿ ಇಲ್ಲಿದೆ.

ನವದೆಹಲಿ: ದೇಶದ ಮೊದಲ ಏರ್‌ ಟ್ರೇನ್‌ (ಆಟೋಮೇಟೆಡ್‌ ಪೀಪಲ್‌ ಮೂವರ್‌- ಎಪಿಎಂ) ಸೇವೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ. ಏರ್‌ಟ್ರೇನ್ ಎಂಬುದು ಮೆಟ್ರೋ ಮಾದರಿಯ ಚಾಲಕ ರಹಿತ ರೈಲಾಗಿದೆ.

ಹಾಲಿ ವಿಮಾನ ನಿಲ್ದಾಣದಲ್ಲಿನ ಮೂರು ಟರ್ಮಿಗಳ ನಡುವೆ ಸಂಚಾರಕ್ಕೆ, ವಿಮಾನ ಇಳಿದ ಬಳಿಕ ಬೇರೆ ಪ್ರದೇಶಗಳಿಗೆ ತೆರಳುವ ಬಸ್‌ ಏರಲು ಅಥವಾ ಕ್ಯಾಬ್‌ ಆಗಮಿಸುವ ಸ್ಥಳಕ್ಕೆ ತೆರಳಲು ಪ್ರಯಾಣಿಕರು ಬಸ್‌ ಸೇವೆ ಬಳಸಬೇಕಿತ್ತು. ಇದು ಸಾಕಷ್ಟು ಸಮಯ ತಿನ್ನುವ ಕೆಲಸ.

ಹೀಗಾಗಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅವಕಾಶ ನೀಡಲು 2000 ಕೋಟಿ ರು.ವೆಚ್ಚದಲ್ಲಿ 7.7 ಕಿ.ಮೀ ಉದ್ದದ ಏರ್‌ಟ್ರೇನ್‌ ವ್ಯವಸ್ಥೆ ಜಾರಿಗೆ ನಿರ್ಧರಿಸಲಾಗಿದೆ. 2027ರಲ್ಲಿ ಈ ವ್ಯವಸ್ಥೆ ಆರಂಭದ ಬಳಿ ಹಾಲಿ ಬಳಕೆಯಲ್ಲಿರುವ ಬಸ್‌ ಸೇವೆ ಸ್ಥಗಿತಗೊಳಿಸಲಾಗುತ್ತದೆ.

ಏನಿದು ಏರ್‌ ಟ್ರೇನ್‌?:

ಇದು ಕೂಡಾ ಇತರೆ ಮೆಟ್ರೋ ರೈಲಿನಂತೆಯೇ ಇರುತ್ತದೆ. ಸೀಮಿತ ಪ್ರಮಾಣದ ಬೋಗಿ ಹೊಂದಿರುತ್ತದೆ. ಹಳಿಗಳ ಮೇಲೆ ಚಲಿಸುತ್ತದೆ. ಪೂರ್ವ ನಿರ್ಧರಿತ ಟ್ರ್ಯಾಕ್‌ಗಳ ಮೇಲೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಈ ಚಾಲಕ ರಹಿತ ರೈಲು ಸಂಚರಿಸುತ್ತದೆ. ಭೂಗತ ಅಥವಾ ಮೇಲುಸೇತುವೆ ಮೇಲೆ ಚಲಿಸುವ ಕಾರಣ ಸಂಚಾರಕ್ಕೆ ಯಾವುದೇ ಅಡ್ಡಿ ಇರದು. ತ್ವರಿತ ಸಂಚಾರ ಸಾಧ್ಯ. ಇವುಗಳನ್ನು ಬಳಸಿ ಬೇರೆ ಟರ್ಮಿನಲ್‌, ಪಾರ್ಕಿಂಗ್‌ ಸ್ಥಳ, ಕ್ಯಾಬ್‌ ಆಗಮಿಸುವ ಸ್ಥಳ, ಹೋಟೆಲ್‌ಗಳಿಗೆ ತೆರಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?