ಖಲಿಸ್ತಾನಿ ಉಗ್ರ ಮುಸ್ಲಿಮರಿಗೆ ಹೇಳಿದ್ದೇನು..? ಅಯೋಧ್ಯೆಗೂ.. ಸಿಖ್ಖರಿಗೂ ಇರೋ ನಂಟಿನ ಕತೆ ಏನು..?

Dec 28, 2023, 2:48 PM IST

ಅದ್ವೀತೀಯ ಸಡಗರಕ್ಕೆ ಸಾಕ್ಷಿಯಾಗಲಿರೋ ಅಯೋಧ್ಯೆ (Ayodhya) ಮೇಲೆ ಬಿದ್ದಿದೆ ಖಲಿಸ್ತಾನಿ ಉಗ್ರನ ಕೆಟ್ಟ ಕಣ್ಣು.ಇನ್ನೊಂದು 25 ದಿನಗಳಲ್ಲಿ ಭಾರತ ಒಂದು ಮಹತ್ವಪೂರ್ಣ, ಅದ್ದೂರಿ ದಿನಕ್ಕೆ ಸಾಕ್ಷಿಯಾಗಲಿದೆ.. ಅದೇ, ಅಯೋಧ್ಯಾ ರಾಮಮಂದಿರದ(Ram mandir) ಲೋಕಾರ್ಪಣೆ.ಅಯೋಧ್ಯೆ ಅನ್ನೋದು ಜಗತ್ತಿನ ಅತಿ ಪುರಾತನ ನಗರ. ಆದ್ರೆ, ಅಂಥಾ ನಗರ ಇವತ್ತಿನ ಮಾಡ್ರನ್ ಸಿಟಿಗಳು ಸಹ ಹೊಟ್ಟೆ ಉರಿದುಕೊಳ್ಳೋ ಹಾಗೆ ಸಿಂಗಾರಜಗೊಳ್ಳುತ್ತಿದೆ. ರಸ್ತೆಗಳೆಲ್ಲಾ ರಾಜಮಾರ್ಗವಾಗ್ತಾ ಇದೆ.. ಊರಿನ ಗೋಡೆಗಳೆಲ್ಲಾ ರಾಮಾಯಣದ ಕತೆ ಹೇಳುತ್ತಿವೆ.. ಮನೆಮನೆಯೂ ಮದುವೆ ಮನೆ ಥರ ಸಡಗರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅತಿಯಾದ ಆಸಕ್ತಿ ಹಾಗೂ ಉತ್ತರ ಪ್ರದೇಶದ(Uttarapradesh) ಮುಖ್ಯಮಂತ್ರಿ, ಯೋಗಿ ಆದಿತ್ಯನಾಥರ(Yogi Adityanath) ಜವಾಬ್ದಾರಿ-ಉಸ್ತುವಾರಿ, ಈ ಕಾರಣದಿಂದ ಅಯೋಧ್ಯೆ ಅದ್ವಿತೀಯವಾಗಿ ಅಭಿವೃದ್ಧಿ ಕಾರ್ಯ ಕಾಣ್ತಾ ಇದೆ.. ಜಸ್ಟ್ 5 ವರ್ಷಗಳ ಹಿಂದೆ ಇದ್ದ ಅಯೋಧ್ಯೆಗೂ, ಇವತ್ತು ನಾವು ನೋಡೋ ಅಯೋಧ್ಯೆಗೂ ಅಜಗಜಾಂತರ. ಮುಂದಿನ ಜನವರಿ 22ರಂದು, ರಾಮಮಂದಿರ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಆ ಶುಭಕ್ಷಣವನ್ನ ಕಣ್ತುಂಬಿಸಿಕೊಳ್ಳೋಕೆ ದೇಶದ ಕೋಟಿ ಕೋಟಿ ಜನ ತುದಿಗಾಲಲ್ಲಿ ಕಾದು ನಿಂತಿದ್ದಾರೆ.. ಆದ್ರೆ ಸಧ್ಯಕ್ಕಿರೋ ಮಾಹಿತಿ ಪ್ರಕಾರ, ರಾಮಮಂದಿರದ ಉದ್ಘಾಟನೆಗೂ ಮುನ್ನ, 2 ನಿಲ್ದಾಣಗಳ ಲೋಕಾರ್ಪಣೆಯಾಗಲಿದೆ. ಖುದ್ದು ಪ್ರಧಾನಿ ಮೋದಿ ಅವರೇ ಆ ಲೋಕಾರ್ಪಣಾ ಕಾರ್ಯ ನೆರವೇರಿಸೋಕೆ ಬರ್ತಾ ಇದಾರೆ.. ಇದೇ ಕಾರಣಕ್ಕೆ ಅಯೋಧ್ಯೆ ದೊಡ್ಡ ಹಬ್ಬಕ್ಕೂ ಮುನ್ನವೇ ಮತ್ತೊಂದು ಉತ್ಸವಕ್ಕೆ ಸಜ್ಜಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಅವನ ಕೊಲೆಗೆ ಕಾರಣ ಹೊನ್ನಾ..? ಹೆಣ್ಣಾ..? ಮಣ್ಣಾ..? ಒಟ್ಟಿಗೆ ಆಡಿ ಬೆಳೆದವನೇ ಚಾಕು ಹಾಕಿದ್ನಾ..?