ಸಿಗರೇಟ್ ಸೇದೋರಿಗೆ ಶಾಕಿಂಗ್ ನ್ಯೂಸ್! ಧೂಮಪಾನ ಕಣ್ಣಿನ ಸಮಸ್ಯೆಗೂ ಕಾರಣವಾಗುತ್ತೆ ಜೋಪಾನ!

Published : Nov 25, 2024, 12:02 PM ISTUpdated : Nov 25, 2024, 12:42 PM IST

ಧೂಮಪಾನ ಅಭ್ಯಾಸ ಮತ್ತು ಕುಡಿತದ ಚಟವು ನಿಮ್ಮ ಆರೋಗ್ಯಕ್ಕೆ ಮಾತ್ರ ಅಲ್ಲ, ನಿಮ್ಮ ಕಣ್ಣುಗಳಿಗೂ ಹಾನಿಯನ್ನುಂಟು ಮಾಡುತ್ತೆ, ಇದರಿಂದ ಕಣ್ಣುಗಳಿಗೆ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದನ್ನು ನೋಡೋಣ.   

PREV
16
ಸಿಗರೇಟ್ ಸೇದೋರಿಗೆ  ಶಾಕಿಂಗ್ ನ್ಯೂಸ್! ಧೂಮಪಾನ ಕಣ್ಣಿನ ಸಮಸ್ಯೆಗೂ ಕಾರಣವಾಗುತ್ತೆ ಜೋಪಾನ!

ಸಿಗರೇಟ್ ಮತ್ತು ಆಲ್ಕೋಹಾಲ್ (cigarate and alcohol) ಸೇವನೆಯ ಅಭ್ಯಾಸವು ಅನೇಕ ರೋಗಗಳೊಂದಿಗೆ ಸಂಬಂಧ ಹೊಂದಿರೋ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬೇಕು ಅಲ್ವಾ?. ಆದರೆ ಧೂಮಪಾನ ಮತ್ತು ಮದ್ಯಪಾನವು ಕಣ್ಣುಗಳಿಗೆ ಯಾವ ರೀತಿಯ ಹಾನಿಯನ್ನುಂಟು ಮಾಡುತ್ತದೆ ಅನ್ನೋದು ಅನೇಕ ಜನರಿಗೆ ತಿಳಿದಿಲ್ಲ. ಇಲ್ಲಿದೆ ಆಲ್ಕೋಹಾಲ್ ಸೇವಿಸೋದರಿಂದ ಕಣ್ಣುಗಳಿಗೆ ಏನೆಲ್ಲಾ ಆಗುತ್ತೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ. 

26

ಧೂಮಪಾನದಿಂದ ಕಣ್ಣಿಗೆ ಹಾನಿ   
ಆಲ್ಕೋಹಾಲ್ ಮತ್ತು ಸಿಗರೇಟ್ ಗಳ ಅಭ್ಯಾಸವು ಕಣ್ಣುಗಳಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಸಣ್ಣ ಪುಟ್ಟ ಸಮಸ್ಯೆಯಿಂದ ಹಿಡಿದು, ದೊಡ್ಡ ದೊಡ್ಡ ಸಮಸ್ಯೆಗಳವರೆಗೆ ಇದು ಪರಿಣಾಮವನ್ನುಂಟು ಮಾಡುತ್ತೆ. ಅವುಗಳ ಬಗ್ಗೆ ತಿಳಿಯೋಣ. 

36

ಕಣ್ಣಿನ ಪೊರೆ ಅಪಾಯ ಹೆಚ್ಚಾಗಬಹುದು
ಧೂಮಪಾನವು (smoking) ಕಣ್ಣಿನ ಪೊರೆಯ ಅಪಾಯವನ್ನು ಹೆಚ್ಚಿಸುತ್ತದೆ. ಸಿಗರೇಟುಗಳಲ್ಲಿರುವ ತಂಬಾಕು ಮತ್ತು ರಾಸಾಯನಿಕಗಳು ಕಣ್ಣುಗಳನ್ನು ಹಾನಿಗೊಳಿಸುತ್ತವೆ. ಅಷ್ಟೇ ಅಲ್ಲ ಕಣ್ಣುಗಳ ನೈಸರ್ಗಿಕ ಮಸೂರದ ಸುತ್ತಲೂ ಮೋಡದಂತಹ ದಟ್ಟವಾದ ತಡೆ ಸೃಷ್ಟಿಸಲು ಆರಂಭವಾಗುತ್ತೆ. ಇದರಿಂದ ಕಣ್ಣು ಕಾಣಿಸೋದಿಲ್ಲ. 

46

ಧೂಮಪಾನ ಮತ್ತು ಡಯಾಬಿಟಿಕ್ ರೆಟಿನೋಪತಿ
ಧೂಮಪಾನ ಮಾಡುವ ಮಧುಮೇಹಿಗಳು (diabetics) ತಮ್ಮ ರೋಗಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೊಂದಿರಬಹುದು. ಇದು ಧೂಮಪಾನದಿಂದಾಗಿ ಡಯಾಬಿಟಿಕ್ ರೆಟಿನೋಪತಿಯ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಧೂಮಪಾನದಿಂದಾಗಿ ದುರ್ಬಲ ದೃಷ್ಟಿ ಮತ್ತು ಕಳಪೆ ದೃಷ್ಟಿಯಂತಹ ಸಮಸ್ಯೆಗಳು ಸಹ ಹೆಚ್ಚಾಗಬಹುದು.

56

ಮಾಕ್ಯುಲರ್ ಡಿಜೆನರೇಶನ್  
ವಯಸ್ಸಾದಂತೆ ಮ್ಯಾಕ್ಯುಲ್ ಅವನತಿಯ (macular degeneration) ಸಮಸ್ಯೆ ಧೂಮಪಾನದಿಂದಾಗಿ ಹೆಚ್ಚಾಗಬಹುದು. ಈ ಪರಿಸ್ಥಿತಿಯಲ್ಲಿ, ಅನೇಕ ವೃದ್ಧರು ತಮ್ಮ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. ಮಾಕ್ಯುಲರ್ ಕ್ಷೀಣತೆಯಲ್ಲಿ, ರೆಟಿನಾದ ಮಧ್ಯ ಭಾಗಕ್ಕೆ ಹಾನಿಯಾಗುತ್ತದೆ, ಇದು ದೃಷ್ಟಿ ದುರ್ಬಲಗೊಳ್ಳಲು ಕಾರಣವಾಗುತ್ತದೆ.

66

ಕಣ್ಣುಗಳ ಮೇಲೆ ಆಲ್ಕೋಹಾಲ್ ನ ಅಡ್ಡ ಪರಿಣಾಮಗಳು
ಆಲ್ಕೋಹಾಲ್ ಸೇವನೆಯು ನಿಮ್ಮ ಕಣ್ಣಿನೊಳಗಿನ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಗ್ಲಾಕೋಮಾದ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಗ್ಲಾಕೋಮಾ ರೋಗಿಗಳಿಗೆ ಅವರ ಸ್ಥಿತಿ ಗಂಭೀರವಾಗದಂತೆ ತಡೆಯಲು ಮದ್ಯಪಾನ ಮಾಡದಂತೆ ಸೂಚಿಸಲಾಗಿದೆ.

Read more Photos on
click me!

Recommended Stories