ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ತನ್ನ ಮೋಸಗಾರ ಅಪ್ಪನ ವಿರುದ್ಧ ಸಮರ ಸಾರಿದ್ದಾಳೆ. ಶಿವುನ ಆಸ್ತಿಯನ್ನು ಉಳಿಸಲು ಪಾರು ಹೋರಾಡುತ್ತಿದ್ದಾಳೆ. ವೀರಭದ್ರನಿಗೆ ಹೃದಯಾಘಾತವಾಗಿದ್ದು, ಪಾರು ಆತನ ನಾಟಕವನ್ನು ಬಯಲು ಮಾಡಿದ್ದಾಳೆ.
ಅಣ್ಣಯ್ಯ ಸೀರಿಯಲ್‌ನಲ್ಲಿ ಪಾರು ಅಬ್ಬರ ಜೋರಾಗಿದೆ. ಮೋಸಗಾರ ಅಪ್ಪನ ವಿರುದ್ಧ ಅವಳು ಸಮರ ಸಾರಿದ್ದಾಳೆ. ಪಾರುವಿನ ಈ ನಡೆ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಹೆಚ್ಚಿನವರು ಬೆಂಕಿ ಇಮೋಜಿ ಹಾಕಿ ಪಾರು ಸಪೋರ್ಟಿಗೆ ಬಂದಿದ್ದಾರೆ. ಇನ್ನೂ ಕೆಲವರು ವೀರಭದ್ರನಿಗಾದ ಅವಮಾನಕ್ಕೆ ತಮಾಷೆ ಮಾಡಿ ನಕ್ಕಿದ್ದಾರೆ. ಹಾಗೆ ನೋಡಿದರೆ ಈ ವೀರಭದ್ರ ಜಮೀಂದಾರ. ಅತಿಯಾದ ಆಸೆ, ಗಂಡು ಮಕ್ಕಳ ಮೇಲೆ ಪ್ರೇಮ, ಮೋಸ, ಕಪಟದಿಂದ ಶಿವುನಂಥಾ ಮುಗ್ಧರ ಆಸ್ತಿ ಹೊಡೆಯಲು ಮುಂದಾಗೋ ರೀತಿಯಿಂದ ದುಷ್ಟನಾಗಿ ವೀಕ್ಷಕರ ಮನಸ್ಸಲ್ಲಿ ಕೂತು ಬಿಟ್ಟಿದ್ದಾನೆ. ಸದ್ಯ ಈ ವೀರಭದ್ರ ತನ್ನ ಮಗನ ಜೊತೆಗೆ ಸೇರಿ ಶಿವುನ ನೂರಾರು ಎಕರೆ ಜಮೀನು ಒಳಹಾಕಲು ಪ್ಲಾನ್ ಮಾಡುತ್ತಿದ್ದಾನೆ. ತನ್ನ ತಂದೆಯ ಮೋಸ ಪಾರುಗೆ ಗೊತ್ತಾಗಿದೆ. ಅವಳು ಅಪ್ಪನಿಗೆ ಚೆನ್ನಾಗಿ ಟಕ್ಕರ್ ಕೊಟ್ಟಿದ್ದಾಳೆ. ಮಾವ ಪತ್ರಕ್ಕೆ ಸಹಿ ಹಾಕು ಅಂದಿದ್ದೇ ಹಿಂದೆ ಮುಂದೆ ನೋಡದೆ ಶಿವು ಪತ್ರಕ್ಕೆ ಸೈನ್ ಮಾಡಲು ಮುಂದಾಗಿದ್ದ.
ಆದರೆ ತನ್ನ ತಂದೆಯ ಕುತಂತ್ರವನ್ನು ಮೊದಲೇ ಅರಿತಿದ್ದ ಪಾರು ಶಿವುನನ್ನು ತಡೆದು ಬುದ್ಧಿ ಹೇಳಿದ್ದಳು. ತನ್ನ ತಂದೆಯ ಮುಂದೆಯೇ ತಂದೆ ಮಾಡೋ ಅನಾಚಾರಗಳ ಬಗ್ಗೆ ಪರೋಕ್ಷವಾಗಿ ವಾರ್ನ್ ಮಾಡಲು ಮುಂದಾಗಿದ್ದಳು. ಆದರೆ ಮುಗ್ಧ ಶಿವುಗೆ ಮಾವನ ಅನ್ಯಾಯ ಇನ್ನೂ ತಲೆಗೆ ಹೋದಂತಿಲ್ಲ.
ನನ್ನ ರಿಯಲ್ ಹೆಂಡ್ತಿಯಾಗಿದ್ರೆ ನನ್ನ ಕಿಡ್ನಿ ಮಾರಿ ಐಫೋನ್ ತಗೊಂಡ್ ಬರುತ್ತಿದ್ದಳು ಅಷ್ಟೇ!
ಇದಕ್ಕೂ ಮುನ್ನ ಶಿವು ಪಾರು ಬೆಳದಿಂಗಳ ಮೋಜು ಸೀರಿಯಲ್‌ನಲ್ಲಿ ಸೊಗಸಾಗಿ ಮೂಡಿಬಂದಿದೆ. ತೋಟದ ಮಧ್ಯದಲ್ಲೇ ಅಣ್ಣಯ್ಯ ಶಿವು, ಪಾರುಗಾಗಿ ಜೋಕಾಲಿ ಕಟ್ಟಿರುತ್ತಾನೆ. ಜೋಕಾಲಿ ಕಟ್ಟಿ ಅವಳಿಗೆ ಗೊತ್ತಿಲ್ಲದ ಹಾಗೆ ಅವಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಸರ್ಪ್ರೈಸ್ ನೀಡುತ್ತಾನೆ. ಈ ರೀತಿ ಸರ್ಪ್ರೈಸ್ ಶಿವು ಕೊಡಬಹುದು ಎಂದು ಅವಳು ಊಹೆ ಕೂಡ ಮಾಡಿರಲಿಲ್ಲ. ಆದರೆ ಅವರಿಬ್ಬರ ಬಾಲ್ಯದ ದಿನಗಳಲ್ಲಿ ತುಂಬಾ ಚೆನ್ನಾಗಿ ಸಮಯ ಕಳೆದಿದ್ದರು. ಇಬ್ಬರೂ ಒಟ್ಟಾಗಿ ಈ ರೀತಿ ಜೋಕಾಲಿ ಕಟ್ಟಿ ಆಡಿದ್ದರು. ಅದೆಲ್ಲವೂ ಅವಳಿಗೆ ಈಗ ನೆನಪಿಗೆ ಬರುತ್ತದೆ. ಅದನ್ನು ಕಂಡು ಅವಳು ಖುಷಿಯಾಗುತ್ತಾಳೆ. ಜೋಕಾಲಿ ಕಂಡ ತಕ್ಷಣ ಹೋಗಿ ಅಲ್ಲಿ ಕುಳಿತುಕೊಳ್ಳುತ್ತಾಳೆ.
ಅಣ್ಣಯ್ಯ ಆ ಜೋಕಾಲಿಯನ್ನು ತೂಗುತ್ತಾನೆ. ಆಗ ಅವಳ ಬಾಯಿಂದ ಒಂದು ಮಾತು ಬರುತ್ತದೆ. ನಾನು ಯಾವಾಗಲೂ ಊರಲ್ಲೇ ಇರಬೇಕಿತ್ತು. ನಾನು ಇಲ್ಲೇ ಬೆಳಿಬೇಕಿತ್ತು ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಶಿವು ಅವಳಿಗೆ ಸಮಾಧಾನ ಮಾಡುತ್ತಾನೆ. ಯಾಕೆ ಆಗಿದ್ದರ ಬಗ್ಗೆ ಚಿಂತೆ ಮಾಡ್ತೀಯಾ? ಈಗ ಇಲ್ಲಿದೀಯಾ ತಾನೇ? ಈಗ ಇದನ್ನು ಅನುಭವಿಸು ಎಂದು ಹೇಳುತ್ತಾನೆ. ಆದರೆ ತಾನು ಯಾವತ್ತಿದ್ದರೂ ಸಿದ್ಧಾರ್ಥನನ್ನೇ ಮದುವೆ ಆಗೋದು ಅನ್ನೋದು ಪಾರು ತಲೇಲಿದೆ.
ಅಪ್ಪ ತೀರಿಕೊಂಡಾಗ ಎರಡೂವರೆ ವರ್ಷದ ಮಗು; ಈಗ ತಂದೆಗೆ ತಕ್ಕ ಮಗಳು ಕಾವ್ಯಾ ನಾಗ್!
ಇದರ ಮಧ್ಯೆ ತನ್ನ ತಂದೆಯ ಬಗ್ಗೆ, ಆತನ ದುಷ್ಟತನದ ಬಗ್ಗೆ ಸಾಕಷ್ಟು ಸಿಟ್ಟೂ ಇದೆ. ಹೀಗಾಗಿ ಆತನ ವಿರುದ್ಧವೇ ಸಮರ ಸಾರಿದ್ದಾಳೆ. ಇತ್ತ ಶಿವು ಹತ್ರ ಹೇಗಾದ್ರೂ ಆಸ್ತಿ ಪತ್ರಕ್ಕೆ ಸೈನ್ ಮಾಡಿಸಿ ಆತನ ನೂರಾರು ಎಕರೆ ಆಸ್ತಿ ಹೊಡೀಬೇಕು ಅಂತ ಅಪ್ಪ ಮಗ ಪ್ಲಾನ್ ಮಾಡುತ್ತಿರುವಾಗಲೇ ಅಪ್ಪ ವೀರಭದ್ರನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ಸುದ್ದಿ ತಿಳಿದು ಶಿವು, ಪಾರು ಓಡಿ ಬಂದಿದ್ದಾರೆ. ಈ ವೇಳೆ ಪಾರುಗೆ ಅಪ್ಪ ಇದನ್ನೆಲ್ಲ ಫೇಕ್ ಆಗಿ ಮಾಡ್ತಿದ್ದಾನೆ ಎಂದು ಗೊತ್ತಾಗಿ ಆತನ ವಿರುದ್ಧ ದನಿ ಎತ್ತುತ್ತಾಳೆ. 'ಪಾರ್ವತಿ' ಅಂತ ಅಪ್ಪ ವೀರಭದ್ರ ಕೂಗಿದರೆ, 'ಪಾರ್ವತಿ ಅಲ್ಲ, ಪಾರ್ವತಿ ಶಿವು ಅನ್ಬೇಕು' ಅಂತ ಅಪ್ಪಂಗೇ ಆವಾಜ್ ಹಾಕಿದ್ದಾಳೆ. ಇದಕ್ಕೆ ವೀಕ್ಷಕರು ಪಾರುಗೆ ಜೈ ಅಂತಿದ್ದಾರೆ.