ನಟ ಸುದರ್ಶನ್ ರಂಗಪ್ರಸಾದ್ ಅವರು ತಮ್ಮ ರಿಯಲ್ ಲೈಫ್‌ನಲ್ಲಿಯೂ ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್ ರೀತಿ ವರ್ತಿಸಿದ್ರೆ ಏನಾಗುತ್ತದೆ ಎನ್ನುವುದನ್ನು ತಮಾಷೆಯಾಗಿ ಹೇಳಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್ ಎಂದ್ರೆ ಸೀರಿಯಲ್ ಪ್ರೇಮಿಗಳು ಅದರಲ್ಲಿಯೂ ಮಹಿಳೆಯರು ಉಸ್ಸಪ್ಪಾ ಎನ್ನುತ್ತಾರೆ. ಇಂಥ ಗಂಡ ಮಾತ್ರ ಯಾರಿಗೂ ಬೇಡಪ್ಪಾ ಎಂದು ಎಲ್ಲ ಮಹಿಳೆಯರೂ ಹೇಳುತ್ತಾರೆ. ಅಂಥ ಕ್ಯಾರೆಕ್ಟರ್ ತಾಂಡವ್‌ದು. ಮದುವೆಯಾಗಿ ಬೆಳೆದು ನಿಂತಿರುವ ಮಕ್ಕಳು ಇರುವಾಗ ಮತ್ತೊಬ್ಬಳ ಸಹವಾಸ ಮಾಡಿದ್ದಾನೆ. ಪತ್ನಿ ಭಾಗ್ಯಳ ಕಂಡರೆ ಅವನಿಗೆ ಆಗುವುದೇ ಇಲ್ಲ. ಸದಾ ಕೆಟ್ಟ ಕೆಟ್ಟ ಶಬ್ದಗಳಿಂದ ಅವಳನ್ನು ಮೂದಲಿಸುತ್ತಲೇ ಇರುತ್ತಾನೆ. ಅದು ಯಾವ ಪರಿಯಲ್ಲಿ ಎಂದರೆ ತಲೆ ಕೆಟ್ಟ ವೀಕ್ಷಕರು, ಭಾಗ್ಯಳಿಗೆ ಪ್ಲೀಸ್ ವಿಚ್ಛೇದನ ಕೊಡಮ್ಮಾ, ಯಾಕೆ ಇಷ್ಟು ಅನುಭವಿಸುತ್ತಿಯಾ ಎಂದು ಕಣ್ಣೀರು ಹಾಕುವುದು ಇದೆ. ಇದೊಂದು ಸೀರಿಯಲ್ ಎನ್ನುವುದನ್ನೂ ಮರೆತು ತಾಂಡವ್‌ನನ್ನು ವಾಚಾಮಗೋಚರವಾಗಿ ಬೈಯುವ ದೊಡ್ಡ ವರ್ಗವೇ ಇದೆ. ಅದೇ ರೀತಿ ತಾಂಡವ್ ತನ್ನ ಲವರ್ ಶ್ರೇಷ್ಠಾ ಜೊತೆ ಮದುವೆಯಾಗುತ್ತಿರುವ ಸುದ್ದಿ ಮನೆಯಲ್ಲಿ ಎಲ್ಲರೂ ಇಲ್ಲಿಯವರೆಗೆ ಭಾಗ್ಯಳಿಂದ ಮುಚ್ಚಿಟ್ಟಿದ್ದರು. ಶ್ರೇಷ್ಠಾ ಮತ್ತು ತನ್ನ ಪತಿ ತಾಂಡವ್ ಫ್ರೆಂಡ್‌ಷಿಪ್ ಬಗ್ಗೆ ತಿಳಿದಿದ್ದರೂ, ಈ ಹಂತಕ್ಕೆ ಗಂಡ ಹೋಗುತ್ತಾನೆ ಎನ್ನುವ ಕಲ್ಪನೆ ಭಾಗ್ಯಳಿಗೆ ಇರಲಿಲ್ಲ.
ಆದರೆ ಈಗ ಎಲ್ಲವೂ ಅಯೋಮಯವಾಗಿದೆ. ಭಾಗ್ಯಳಿಗೆ ಎಲ್ಲಾ ವಿಷಯ ತಿಳಿದಿದೆ. ಆಕಾಶವೇ ತಲೆ ಮೇಲೆ ಬಿದ್ದ ಅನುಭವ ಅವಳಿಗೆ, ಭೂಮಿಯೇ ಬಾಯ್ಬಿಟ್ಟು ತನ್ನನ್ನು ಕರೆದುಕೊಳ್ಳಬಾರದೇ ಎಂದು ತನ್ನ ಭಾಗ್ಯವನ್ನು ತಾನೇ ಶಪಿಸಿಕೊಳ್ಳುತ್ತಿದ್ದಾರೆ. ಮನೆ, ಕುಟುಂಬ, ಪತಿ ಎಂದು ಜೀವನಪೂರ್ತಿ ದುಡಿದ ಭಾಗ್ಯಳಿಗೆ ಪತಿಯ ಅಸಲಿಯತ್ತು ಗೊತ್ತಾಗಿದೆ. ಅದೇ ಇನ್ನೊಂದೆಡೆ ತಾಂಡವ್‌ನ ಬಗ್ಗೆ ವೀಕ್ಷಕರ ಸಿಟ್ಟು, ಆಕ್ರೋಶವೂ ಹೆಚ್ಚಾಗಿದೆ. ಇಂಥ ತಾಂಡವ್ ಕ್ಯಾರೆಕ್ಟರ್ ಒಳಗೆ ಹೊಕ್ಕು ಅದ್ಭುತ ಅಭಿನಯ ನೀಡುತ್ತಿರುವ ನಟನ ಅಸಲಿ ಹೆಸರು ಸುದರ್ಶನ್ ರಂಗಪ್ರಸಾದ್. ಇವರ ರಿಯಲ್ ಪತ್ನಿಯ ಹೆಸರು ಸಂಗೀತಾ ಭಟ್. ಇದೀಗ ಪಂಚಮಿ ಟಾಕ್ಸ್‌ನಲ್ಲಿ ನಟ, ರಿಯಲ್ ಮತ್ತು ರೀಲ್ ಲೈಫ್ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಅವರು ಹಲವಾರು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ರೀಲ್ ಪತ್ನಿ ಎದುರು ರಿಯಲ್ ಪತ್ನಿ ಜೊತೆ ಶ್ರೀರಸ್ತು ಶುಭಮಸ್ತು ಮಾಧವ್ ಸಕತ್ ಸ್ಟೆಪ್
ಒಂದು ವೇಳೆ ರಿಯಲ್ ಲೈಫ್‌ನಲ್ಲಿಯೂ ಅಂದ್ರೆ ನಿಮ್ಮ ಪತ್ನಿ ಸಂಗೀತಾ ಅವರಿಗೂ ಸೀರಿಯಲ್‌ನ ತಾಂಡವ್ ರೀತಿ ವರ್ತಿಸಿದರೆ ಏನಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಸುದರ್ಶನ್ ಅವರು, ನಾನು ರಿಯಲ್ ಆಗಿ ತುಂಬಾ ಸಾಫ್ಟ್. ಆದರೆ ಇದೀಗ ತಾಂಡವ್ ಕ್ಯಾರೆಕ್ಟರ್ ಒಂದು ಹಂತ ಮೀರಿ ಹೋಗಿದೆ. ಅದೇ ಗುಂಗಿನಲ್ಲಿ ಕೆಲವೊಮ್ಮೆ ಮನೆಗೂ ಹೋಗುವುದು ಇದೆ. ಸೌಮ್ಯ ಸ್ವಭಾವದ ನಾನು ಆ ಕ್ಯಾರೆಕ್ಟರ್‍ನಲ್ಲಿ ಹೊಕ್ಕೆ ನಿಜ ಜೀವನದಲ್ಲಿಯೂ ಕೋಪಿಷ್ಠನಾಗಿಬಿಟ್ಟಿದ್ದೇನೆ ಎನ್ನುತ್ತಲೇ, ಒಂದು ವೇಳೆ ತಾಂಡವ್ ರೀತಿ ಮನೆಯಲ್ಲಿ ವರ್ತಿಸಿದರೆ ನನ್ನ ಹೆಂಡ್ತಿ ಸಂಗೀತಾ ನನ್ನ ಕಿಡ್ನಿ ಮಾರಿ ಹೊಸ ಐಫೋನ್ ತಗೋಳಾತೆ ಅಷ್ಟೇ ಎಂದು ತಮಾಷೆ ಮಾಡಿದ್ದಾರೆ. ಇದೇ ಸಂದರ್ಶನದಲ್ಲಿ ಸೆಲೆಬ್ರಿಟಿಯ ಜೀವನವೂ ಅಷ್ಟೊಂದು ಹೇಗೆ ಸುಲಭವಲ್ಲ ಎಂಬ ಬಗ್ಗೆಯೂ ಮಾತನಾಡಿದ್ದಾರೆ. ಒಂದು ಸೀರಿಯಲ್ ಟಾಪ್‌ನಲ್ಲಿ ಇರುವಾಗ ಅಷ್ಟೇ ಆ ಕಲಾವಿದರಿಗೆ ಮರ್ಯಾದೆ. ಆಮೇಲೆ ಸ್ವಲ್ಪ ಸಮಯ ಕಳೆದ ಮೇಲೆ ಅವರು ತೆರೆ ಮೇಲೆ ಕ್ಲಿಕ್ ಆಗ್ತಿಲ್ಲಾ ಎಂದರೆ ಅವರನ್ನು ಮಾತಾಡಿಸೋರೂ ಯಾರೂ ಇರಲ್ಲ ಎನ್ನುವ ಬಹುದೊಡ್ಡ ಸತ್ಯವನ್ನೂ ಹೇಳುವ ಮೂಲಕ, ಹೆಸರು ಗಳಿಸಿದ ಮಾತ್ರಕ್ಕೆ ಯಾರೇ ಆದರೂ ಮೆರೆಯಬಾರದು ಎನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ ನಟ.
ಇನ್ನು ತಾಂಡವ್ ಅರ್ಥಾತ್ ಸುದರ್ಶನ್ ಅವರ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರ ಮದುವೆಯಾಗಿ ಒಂಬತ್ತು ವರ್ಷಗಳಾಗಿವೆ. ಪತ್ನಿ ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ.
ದಿನಕ್ಕೆ ಒಂದು ಲಕ್ಷ ಗಳಿಸೋ ಯೋಜನೆ ತಿಳಿಸಿದ್ರಾ ಸುಧಾ ಮೂರ್ತಿ? ವೈರಲ್ ವಿಡಿಯೋದಲ್ಲಿ ಅವ್ರು ಹೇಳಿದ್ದೇನು?