2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್‌ಗೆ ಬಂಪರ್ ಲಾಟರಿ ಹೊಡೆದಿದ್ದು, ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಜೆದ್ದಾ (ಸೌದಿ ಅರೇಬಿಯಾ): ಭಾರತದ ಸ್ಟಾರ್ ಕ್ರಿಕೆಟಿಗರಾದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ನಿರೀಕ್ಷೆಯಂತೆಯೇ ಐಪಿಎಲ್ ಹರಾಜಿನ ದಾಖಲೆಗಳನ್ನೆಲ್ಲಾ ಪುಡಿಗಟ್ಟಿದ್ದಾರೆ. ಹರಾಜು ಇತಿಹಾಸದಲ್ಲೇ ಅತಿ ದುಬಾರಿ ಆಟಗಾರರು ಎಂಬ ಖ್ಯಾತಿಗೆ ಈ ಇಬ್ಬರು ಪಾತ್ರರಾಗಿದ್ದಾರೆ. ರಿಷಭ್ ಪಂತ್ ಬರೋಬ್ಬರಿ ₹27 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಪಾಲಾದರೆ, ಕಳೆದ ಬಾರಿ ತಮ್ಮದೇ ನಾಯಕತ್ವದಲ್ಲಿ ಕೋಲ್ಕತಾ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಶ್ರೇಯಸ್ ಅಯ್ಯರ್ ₹26.75 ಕೋಟಿಗೆ ಪಂಜಾಬ್‌ಗೆ ಕಿಂಗ್ಸ್‌ಗೆ ಬಿಕರಿಯಾದರು. ಇನ್ನು ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್‌ಗೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಜಾಕ್‌ಪಾಟ್ ಹೊಡೆದಿದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಭಾನುವಾರ ಆರಂಭಗೊಂಡ 2 ದಿನಗಳ ಐಪಿಎಲ್ ಹರಾಜಿನ ಮೊದಲ ದಿನ ಸ್ಟಾರ್ ಆಟಗಾರರಿಗೆ ಭಾರಿ ಪೈಪೋಟಿ ಕಂಡುಬಂತು. ಕಳೆದ ಬಾರಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರು.ಗೆ ಕೋಲ್ಕತಾ ತಂಡಕ್ಕೆ ಹರಾಜಾಗಿ, ಐಪಿಎಲ್‌ನ ಅತಿ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆ ದಾಖಲೆಯನ್ನು ಶ್ರೇಯಸ್ ಹಾಗೂ ರಿಷಭ್ ಪಂತ್ ಮುರಿದರು.
ಚಹಲ್‌ಗೆ 18 ಕೋಟಿ: ಅತಿ ದುಬಾರಿ ಸ್ಪಿನ್ನರ್
ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಸ್ಪಿನ್ನರ್ ಎನ್ನುವ ದಾಖಲೆಯನ್ನು ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಬರೆದಿದ್ದಾರೆ. ಚಹಲ್‌ರನ್ನು ಪಂಜಾಬ್ ಕಿಂಗ್ಸ್ ಬರೋಬ್ಬರಿ 18 ಕೋಟಿ ರು. ನೀಡಿ ಖರೀದಿಸಿತು. ಈ ಮೊದಲು ಚಹಲ್ ಮುಂಬೈ, ಆರ್‌ಸಿಬಿ, ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು.
ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಮಿಸ್ಟ್ರಿ ಸ್ಪಿನ್ನರ್ ಕರೆತಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ಈ ಸಲ ಟಾಪ್-5 ದುಬಾರಿ ಆಟಗಾರರೆಲ್ಲಾ ಭಾರತೀಯರೇ!
ಈ ಹಿಂದಿನ ಹಲವು ಹರಾಜುಗಳಲ್ಲಿ ವಿದೇಶಿ ಆಟಗಾರರು ಹೆಚ್ಚು ಮೊತ್ತಕ್ಕೆ ಬಿಡ್ ಆಗಿದ್ದರು. ಆದರೆ ಈ ಬಾರಿ ಫ್ರಾಂಚೈಸಿಗಳು ಭಾರತೀಯ ಆಟಗಾರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದವು. ಅತಿಹೆಚ್ಚು ಮೊತ್ತಕ್ಕೆ ಬಿಡ್ ಆದ ಅಗ್ರ-5 ಆಟಗಾರರು ಭಾರತೀಯರೇ ಎನ್ನುವುದು ಗಮನಾರ್ಹ ಸಂಗತಿ.
ಪಂಜಾಬ್ ಕಿಂಗ್ಸ್‌ಗೆ ಶ್ರೇಯಸ್, ಡೆಲ್ಲಿಗೆ ರಾಹುಲ್, ಲಖನೌಗೆ ಪಂತ್ ನಾಯಕ?
ಹರಾಜಿನ ಆರಂಭಿಕ ಹಂತದಲ್ಲೇ ಬಹುತೇಕ ಫ್ರಾಂಚೈಸಿಗಳು ತಮ್ಮ ತಂಡಗಳಿಗೆ ನಾಯಕರನ್ನು ಹುಡುಕಿಕೊಂಡರು. 2025ರಲ್ಲಿ ಪಂಜಾಬ್ ತಂಡವನ್ನು ಶ್ರೇಯಸ್ ಅಯ್ಯರ್, ಡೆಲ್ಲಿ ತಂಡವನ್ನು ಕೆ.ಎಲ್.ರಾಹುಲ್, ಲಖನೌ ತಂಡವನ್ನು ರಿಷಭ್ ಪಂತ್ ಮುನ್ನಡೆಸುವುದು ಬಹುತೇಕ ಖಚಿತ. ಇನ್ನು, 23.75 ಕೋಟಿ ರು. ನೀಡಿ ವೆಂಕಟೇಶ್ ಅಯ್ಯರ್‌ರನ್ನು ಖರೀದಿಸಿರುವ ಕೆಕೆಆರ್, ಅವರನ್ನೇ ನಾಯಕನನ್ನಾಗಿ ನೇಮಿಸಿದರೂ ಅಚ್ಚರಿಯಿಲ್ಲ.
ಚಾಂಪಿಯನ್ ತಂಡದ ಆಟಗಾರನನ್ನು ಕರೆತಂದ ಆರ್‌ಸಿಬಿ; ಇಬ್ಬರು ವಿಕೆಟ್ ಕೀಪರ್ ಬೆಂಗಳೂರು ತೆಕ್ಕೆಗೆ
01ನೇ ಆಟಗಾರ
ಐಪಿಎಲ್ ಹರಾಜಿನಲ್ಲಿ 20 ಕೋಟಿ ರು.ಗಿಂತ ದೊಡ್ಡ ಮೊತ್ತಕ್ಕೆ ಬಿಡ್ ಆದ ಮೊದಲ ಭಾರತೀಯ ಎನ್ನುವ ದಾಖಲೆಯನ್ನು ಶ್ರೇಯಸ್ ಅಯ್ಯರ್ ಬರೆದಿದ್ದಾರೆ. 20 ಕೋಟಿ ರು.ಗೆ ಅಧಿಕ ಮೊತ್ತಕ್ಕೆ ರಿಟೈನ್ ಆದ ಮೊದಲಿಗೆ ಕೊಹ್ಲಿ.