ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು.. 11 ಅತ್ಯಾಚಾರಿಗಳು ಮತ್ತೆ ಜೈಲಿಗೆ..!

Jan 9, 2024, 2:44 PM IST

ಅನ್ಯಾಯದ ಮಾರ್ಗದಲ್ಲಿ ನಡೆಯುವವರು ಅದೇನೇ ಕುತಂತ್ರಗಳನ್ನು ಮಾಡಿದ್ರೂ, ಅದೆಷ್ಟೇ ಷಡ್ಯಂತ್ರಗಳನ್ನು ಹೆಣೆದ್ರೂ, ನ್ಯಾಯ ದೇವತೆಯ ಕಣ್ಣಿಗೆ ಮಣ್ಣೆರಚಿದ್ರೂ. ಕೊನೆಗೆ ಗೆಲ್ಲೋದು ಸತ್ಯ ಮತ್ತು ನ್ಯಾಯ. ತಪ್ಪು ಮಾಡಿದವರು ಅದೆಷ್ಟೇ ಪ್ರಭಾವಿಗಳಾಗಿರಲಿ. ಈ ನೆಲದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 2002ರಲ್ಲಿ ಕಲಿಯುಗ ದುಶ್ಯಾಸನರಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್(Rape)ದ ಗರ್ಭಿಣಿ ಮಹಿಳೆ. ಆ ಮಹಿಳೆಯ ಮುಂದೆಯೇ ತಾಯಿ, ಮಗಳು ಸೇರಿದಂತೆ 7 ಮಂದಿ ಕುಟುಂಬಸ್ಥರ ಹತ್ಯಾಕಾಂಡ. ಸತ್ತು ಬದುಕಿದ್ದ ಬಿಲ್ಕಿಸ್ ಬಾನೊ(Bilkis Bano), ಸುದೀರ್ಘ ಕಾನೂನು ಹೋರಾಟದಲ್ಲಿ ಗೆದ್ದಿದ್ದಾರೆ. ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿ ನಂತ್ರ, ಗುಜರಾತ್ ಸರ್ಕಾರ(Gujarat government) ಬಿಡುಗಡೆಗೊಳಿಸಿದ್ದ 11 ಅಪರಾಧಿಗಳನ್ನು ಸುಪ್ರೀಂ ಕೋರ್ಟ್(Suprecourt) ಮತ್ತೆ ಜೈಲಿಗಟ್ಟಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸಿ ಸೋಮವಾರ ಐತಿಹಾಸಿಕ ತೀರ್ಪು ಕೊಟ್ಟಿದೆ.

ಇದನ್ನೂ ವೀಕ್ಷಿಸಿ:  ಆರೋಗ್ಯ ವಿಮೆ ಜಾರಿಗೆ ಎಂಇಎಸ್ ಪುಂಡರ ಬಳಕೆ: 865 ಗ್ರಾಮಗಳಿಗೆ ಯೋಜನೆ ವಿಸ್ತರಿಸಿದ 'ಮಹಾ' ಸರ್ಕಾರ