ಆರೋಗ್ಯ ವಿಮೆ ಜಾರಿಗೆ ಎಂಇಎಸ್ ಪುಂಡರ ಬಳಕೆ: 865 ಗ್ರಾಮಗಳಿಗೆ ಯೋಜನೆ ವಿಸ್ತರಿಸಿದ 'ಮಹಾ' ಸರ್ಕಾರ
ಬೆಳಗಾವಿಯಲ್ಲೇ ಆರೋಗ್ಯ ವಿಮಾ ಕೇಂದ್ರವನ್ನು ಮಹಾರಾಷ್ಟ್ರ ಸರ್ಕಾರ ತೆರೆಯುವ ಮೂಲಕ ಇಲ್ಲಿನ ಜನರಿಗೆ ಯೋಜನೆಯನ್ನು ವಿಸ್ತರಿಸಿದೆ.
ಕರ್ನಾಟಕಕ್ಕೂ ಆರೋಗ್ಯ ವಿಮೆ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ(Maharashtra Government) ವಿಸ್ತರಿಸಿದೆ. ಬೆಳಗಾವಿಯಲ್ಲೇ ಆರೋಗ್ಯ ವಿಮಾ(Health insurance) ಕೇಂದ್ರವನ್ನು ಮಹಾರಾಷ್ಟ್ರ ಸರ್ಕಾರ ತೆರೆದಿದೆ. 865 ಗ್ರಾಮಗಳಿಗೆ ಈ ಯೋಜನೆ ವಿಸ್ತರಣೆ ಮಾಡಲಾಗಿದೆ. ಇಷ್ಟಾದರೂ ಕೂಡ ರಾಜ್ಯ ಸರ್ಕಾರ ಮೌನವಹಿಸಿದೆ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಆರೋಗ್ಯ ವಿಮೆ ಯೋಜನೆ ಜಾರಿಗೆ ಎಂಇಎಸ್(MES) ಪುಂಡರ ಬಳಕೆ ಮಾಡಿಕೊಳ್ಳಲಾಗಿದೆ. ಯೋಜನೆ ಲಾಭ ಪಡೆಯಲು ಸೇವಾ ಕೇಂದ್ರಗಳಲ್ಲಿ ಅರ್ಜಿ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯಡಿ 5 ಲಕ್ಷದವರೆಗೂ ಚಿಕಿತ್ಸೆ ಪಡೆಯಬಹುದಾಗಿದೆ.
ಇದನ್ನೂ ವೀಕ್ಷಿಸಿ: ಜೆಟ್‌ಲ್ಯಾಗ್ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಪ್ರಕರಣ: ಮಾಲೀಕರಾದ ಶಶಿರೇಖಾ ವಿಚಾರಣೆ, 8 ಸೆಲೆಬ್ರೆಟಿಗಳಿಗೆ ನೋಟಿಸ್