Suvarna Super Special: ಪುಟ್ಟ ಪೋರಿಯ ಜಾದು: 12 ವರ್ಷಕ್ಕೆ 70 ವಿಶ್ವ ದಾಖಲೆ

Apr 27, 2022, 7:52 PM IST

ತಮಿಳುನಾಡಿನ 12 ವರ್ಷದ ಬಾಲಕಿಯೊಬ್ಬಳು ತನ್ನ ವಿಶೇಷ ಪ್ರತಿಭೆಯ ಮೂಲಕ ಬರೋಬರಿ 70 ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ. ತಮಿಳುನಾಡಿನ ತಿರುನ್ವೇಲಿಯ ಪ್ರಿಶಾ ಎಂಬ ಹೆಸರಿನ ಈಕೆಯನ್ನು ದೆಹಲಿಯಲ್ಲಿ ಭೇಟಿ ಮಾಡಿದ ಬಿಜೆಪಿ ಮುಖಂಡ ಸಿ.ಟಿ. ರವಿ ಆಕೆಯ ಪ್ರತಿಭೆಗೆ ಬೆರಗಾಗಿ ಶಾಲು ಹೊದಿಸಿ ಸನ್ಮಾನ ಮಾಡಿದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ಬಾಲಕಿ ತನ್ನ ಮುಂದೆ ಏನು ನಡೆಯುತ್ತಿದೆ ಎಂಬುದನ್ನು ಹೇಳುತ್ತಾಳೆ. ಇವಳಿಗೆ ಸಚಿವ ಸಿ.ಟಿ. ರವಿ ತಮ್ಮ ಐಡಿ ಕಾರ್ಡ್‌ ನೀಡಿ ಓದಲು ಹೇಳಿದರು. ಕಣ್ಣಿಗೆ ಬಟ್ಟೆ ಕಟ್ಟಿದ್ದರು ಈಕೆ ಐಡಿ ಕಾರ್ಡ್‌ನಲ್ಲಿರುವುದನ್ನು ಓದಿ ಹೇಳಿದಳು. ಇದರಿಂದ ಅಚ್ಚರಿಗೊಳಗಾದ ಅವರು ಆಕೆಯ ಪ್ರತಿಭೆಗೆ ಕೈ ಮುಗಿದಿದ್ದಾರೆ.