ತರುಣ್ ಸುದೀರ್ ನಿರ್ದೇಶನ ಮಾಡಿರುವ ಕಾಟೇರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಆರಾಧನಾ ರಾಮ್. ಸಾಕಷ್ಟು ವಿದೇಶ ಟ್ರಿಪ್‌ಗಳು ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸಖತ್ ಸ್ಟೈಲಿಷ್. ತಾಯಿ ಮತ್ತು ಮಗಳು ಸಖತ್ ಮಾಡರ್ನ್ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಫೋಟೋಗಳು ವೈರಲ್ ಆಗಿದೆ.
ಆರಾಧನಾ ರಾಮ್ ಧರಿಸಿರುವ ಪಿಂಕ್ ಬಣ್ಣದ ಮ್ಯಾಕ್ಸಿ ಮ್ಯಾಂಗೋ ಬ್ರ್ಯಾಂಡ್ ಆಗಿದ್ದು ಇದರ ಬೆಲೆ 14 ಸಾವಿರ ಎನ್ನಲಾಗಿದೆ. ಈ ಲುಕ್‌ಗೆ ಮ್ಯಾಚ್ ಮಾಡಲು gucci ಬ್ಯಾಗ್ ಧರಿಸಿದ್ದಾರೆ ಇದರ ಬೆಲೆ 75,290 ರೂಪಾಯಿ ಎನ್ನಲಾಗಿದೆ.
ಬಿಡುವಿನ ಸಮಯದಲ್ಲಿ ಆರಾಧನಾ ಆದಷ್ಟು ವಿದೇಶ ಟ್ರಿಪ್ ಮಾಡುತ್ತಾರೆ. ಪ್ರತಿ ಸಲವೂ ಒಂದೊಂದು ಜಾಗವನ್ನು ಎಕ್ಸ್‌ಪ್ಲೋರ್ ಮಾಡುತ್ತಾರೆ. ಹೀಗಾಗಿ ವಿದೇಶದಲ್ಲಿ ಇರುವ ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಶಾಪಿಂಗ್ ಮಾಡುತ್ತಾರೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣ ಮಾಡುವ ಮುನ್ನ ಆರಾಧನಾ ಕ್ಲಿಕ್ ಮಾಡಿಕೊಂಡಿರುವ ಫೋಟೋ ಇದಾಗಿದೆ. ಟೋರ್ನ್ ಜೀನ್ಸ್, ಜಾಕೆಟ್ ಮತ್ತು ಆರೇಂಜ್ ಟಾಪ್ ಧರಿಸಿದ್ದಾರೆ. ಇಲ್ಲಿ ಧರಿಸಿರುವ ಬ್ಯಾಗ್ ಕೂಡ ಲಕ್ಷ ಬೆಲೆ ಎನ್ನಲಾಗಿದೆ.
ಪ್ರತಿ ಡ್ರೆಸ್‌ಗೂ ಆರಾಧನಾ ಡಿಫರೆಂಟ್ ಆಕ್ಸಸರಿಸ್ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲಿಯೂ ರಿಪೀಟ್ ಮಾಡುವುದಿಲ್ಲ. ಲುಕ್‌ಗೆ ಮ್ಯಾಚ್ ಆಗುವಂತೆ ಬ್ಯಾಗ್ ಕ್ಯಾರಿ ಮಾಡುತ್ತಾರೆ. ಇದು winter ಲುಕ್.