ಕೂಸು ಹುಟ್ಟುವ ಮುನ್ನವೆ ಕುಲಾವಿ ರೆಡಿ; ಹೆಸರಿಟ್ಟಿಲ್ಲ, ಆಗ್ಲೇ ಒಟಿಟಿ ಹಕ್ಕು ಸಿಕ್ಕ ಮೊದಲ ಕನ್ನಡ ಚಿತ್ರ!

By Shriram BhatFirst Published Oct 23, 2024, 7:40 PM IST
Highlights

ಇದೀಗ ಹೊಸ ಕನಸು ಹೊತ್ತು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಸೀತಾ ಅವರು 'ನಬೋ ನಭವಿಷ್ಯತಿ..' ಎಂಬಂತಹ ಹೊಚ್ಚ ಹೊಸ ಇತಿಹಾಸ ಸೃಷ್ಟಿಸಬಲ್ಲ ಸಿನಿಮಾವನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಹಲವು ರೀತಿಯಲ್ಲಿ ಯೋಚಿಸಿ ಅಳೆದೂ ತೂಗಿ ಕಥೆ ಆಯ್ಕೆ ಮಾಡಿಕೊಂಡಿರುವ ಸೀತಾ...

ಸಿನಿಮಾ ಅನ್ನೋದು ಯಾರನ್ನು ಯಾವಾಗ ಅಟ್ರಾಕ್ಸ್ ಮಾಡುತ್ತದೆ ಎಂದು ಹೇಳಲಾಗದು! ಡಾ ರಾಜ್‌ಕುಮಾರ ಅವರಂಥ ಕಡಿಮೆ ಓದಿದವರು ಹಾಗೂ ಶಿವರಾಜ್‌ಕುಮಾರ್ ಅವರಂತೇ ಹೆಚ್ಚು ಓದಿಕೊಂಡವರು ಎರಡೂ ವರ್ಗದ ಸಿನಿಮಾಕರ್ಮಿಗಳು ಅಲ್ಲಿದ್ದಾರೆ. ಕಲೆ ಯಾರನ್ನು ಕೈ ಬೀಸಿ ಕರೆಯುತ್ತದೆ, ಯಾರಲ್ಲಿ ಯಾವ ಪ್ರತಿಭೆ ಇರುತ್ತದೆ ಎಂಬುದನ್ನೂ ಊಹಿಸಲೂ ಅಸಾಧ್ಯ! ಯಾರು ಯಾವಾಗ, ಯಾವುದನ್ನು ಬಿಟ್ಟು ಚಿತ್ರರಂಗಕ್ಕೆ ಧುಮುಕುತ್ತಾರೆ ಎಂದು ಯಾರೂ ಹೇಳಲಾಗದು!

ಪ್ರತಿಭಾವಂತರು, ವಿದ್ಯಾವಂತರು ಅನ್ನದೆ ಯಾರನ್ನಾದರೂ ಸಿನಿಮಾ ಲ್ಯಾಂಡ್ ಆಕರ್ಷಿಸುತ್ತದೆ. ಅದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಸೀತಾ ಹರ್ಷವರ್ಧನ್ (Sitha Harshavardhan). ಐಎಎಸ್ (IAS) ಮಾಡಿಕೊಂಡಿದ್ದರೂ, ಉನ್ನತ ಹುದ್ದೆಯ ಆಸೆ ಬಿಟ್ಟು ಕಲೆಯ ಕಡೆ ಮುಖ ಮಾಡಿದವರು ಈ ಸೀತಾ ಹರ್ಷವರ್ಧನ್. ಹಲವಾರು ವರ್ಷಗಳಿಂದ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಸೀತಾ ಅವರೀಗ ಹೊಸ ಸಿನಿಮಾ  ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿ ಹೊಸ ಹೆಜ್ಜೆಇಟ್ಟಿದ್ದಾರೆ‌. 

Latest Videos

ಸನ್ನಿ ಡಿಯೋಲ್ 'ಜಾಟ್' ಅವತಾರ ನೋಡಿ ಕಣ್ ಕಣ್ ಬಿಡ್ತಿದಾರೆ ಬಾಲಿವುಡ್ ಮಂದಿ!

ಇದೀಗ ಹೊಸ ಕನಸು ಹೊತ್ತು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ಸೀತಾ ಅವರು 'ನಬೋ ನಭವಿಷ್ಯತಿ..' ಎಂಬಂತಹ
ಹೊಚ್ಚ ಹೊಸ ಇತಿಹಾಸ ಸೃಷ್ಟಿಸಬಲ್ಲ ಸಿನಿಮಾವನ್ನು ನಿರ್ಮಿಸಲು ಸಜ್ಜಾಗುತ್ತಿದ್ದಾರೆ. ಹಲವು ರೀತಿಯಲ್ಲಿ ಯೋಚಿಸಿ ಅಳೆದೂ ತೂಗಿ ಕಥೆ ಆಯ್ಕೆ ಮಾಡಿಕೊಂಡಿರುವ ಸೀತಾ ಅವರು ತಮ್ಮ ವಿಭಿನ್ನ ಪ್ರಯತ್ನಕ್ಕೆ ಬೇಕಾದ ಸಕಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. 

ವಿಭಿನ್ನ, ಹೊಸ ಥರದ ಹಾರರ್, ಥ್ರಿಲ್ಲರ್ ಶೈಲಿಯ ಕಥಾಹಂದರ ಒಳಗೊಂಡ ಈ ಚಿತ್ರದ ಶೀರ್ಷಿಕೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ, ಭಾರೀ ಬಿಗ್ ಬಜೆಟ್‌ನಲ್ಲಿ ಅದ್ದೂರಿಯಾಗಿ  ತಯಾರಾಗುತ್ತಿರುವ ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ಮುಂಚೂಣಿಯಲ್ಲಿರುವ ಅಮೆಜಾನ್ ಪ್ರೈಮ್ ಒಟಿಟಿ ಮುಹೂರ್ತಕ್ಕೂ ಮುನ್ನವೇ ಉತ್ತಮ ಬೆಲೆ ಕೊಟ್ಟು ಖರೀದಿಸಿದೆ‌. ಇದು ಕನ್ನಡ ಚಿತ್ರರಂಗ್ ಮಟ್ಟಿಗೆ ಹೊಸ ದಾಖಲೆ!

ಲೈಫಲ್ಲಿ ಮತ್ತೊಮ್ಮೆ ಅಮ್ಮನ ಮುಖ ನೋಡಲಾಗದೆಂದು ಮತ್ತೆ ಮತ್ತೆ ನೋಡುತ್ತಲೇ ಇದ್ದ ಸುದೀಪ್!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಹೂರ್ತಕ್ಕೂ ಮುನ್ನವೇ ಒಟಿಟಿಗೆ ಸೇಲಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ. ಅಲ್ಲದೆ ಈ ಚಿತ್ರದ ತೆಲುಗು ವರ್ಷನ್ ವಿತರಣೆಯ ಜವಾಬ್ದಾರಿಯನ್ನು ಖುಷಿ ಟಾಕೀಸ್ ಸಂಸ್ಥೆ  ಹೊತ್ತುಕೊಂಡಿದೆ. ಐಎಎಸ್‌ ಬಿಟ್ಟು ಸಿನಿಮಾ ಉದ್ಯಮಕ್ಕೆ ಕಾಲಿಟ್ಟಿರುವ ಸೀತಾ ಹರ್ಷವರ್ಧನ್ ಅವರು ತಮ್ಮ ಮಹದಾಸೆಯನ್ನು ನನಸಾಗಿಸಿಕೊಳ್ಳಲು ಸತತ ಪ್ರಯತ್ನಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. 

ಶೀರ್ಷಿಕೆ ಅನಾವರಣದ ಬಳಿಕ ಚಿತ್ರದ ಪ್ಲಾನಿಂಗ್, ಶೂಟಿಂಗ್ ಎಲ್ಲವೂ ಹಂತಹಂತವಾಗಿ ನಡೆಯಲಿದ್ದು, ಈ ಬಗ್ಗೆ ಸರಿಯಾದ ಪ್ಲಾನ್ ರೆಡಿಯಾಗಿದೆಯಂತೆ. ಸೀತಾರ ವಿಭಿನ್ನ ಕನಸು, ಸಿದ್ಧತೆ ನೋಡುತ್ತಿರುವವರಿಗೆ ಅವರು ಭವಿಷ್ಯದಲ್ಲಿ ಕನ್ನಡ ಸಿನಿಮಾ ಉದ್ಯಮಕ್ಕೊಂದು ಆಸ್ತಿ ಆಗಬಲ್ಲರು ಎಂಬ ವಿಶ್ವಾಸ ಮೂಡಿದೆಯಂತೆ. ಮಿಕ್ಕ ಎಲ್ಲವನ್ನೂ ಕಾಲವೇ ನಿರ್ಧರಿಸಬೇಕಿದೆ. 

ಮಾಲಾಶ್ರಿ 'ಕೋತಿ' ಹೇಳಿಕೆ ಅಸಲಿಯತ್ತು ಬಹಿರಂಗ; ಕನಸಿನ ರಾಣಿ ನಿಜವಾಗಿ ಹಾಗೆ ಹೇಳಿದ್ರಾ?

click me!