ರಾಜಣ್ಣ ಅವರೇ, ಕೃಷ್ಣ ಶೂದ್ರನೋ, ಬ್ರಾಹ್ಮಣನೋ ಅನ್ನೋ ವಿಚಾರ ಬಿಡಿ; ಈ ಬಡಜನರಿಗೆ ಕುಡಿಯಲು ಶುದ್ದ ನೀರು ಕೊಡಿ!

By Santosh NaikFirst Published Oct 23, 2024, 7:46 PM IST
Highlights

ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲಮಾವು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಹಲವರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು (ಅ.23): ಶೂದ್ರರು ಹಿಂದೂ ಧರ್ಮದ ರಾಮಾಯಾಣ ಮಹಾಭಾರತ ಗ್ರಂಥ ಬರೆದಿದ್ದಾರೆ. ಶ್ರೀಕೃಷ್ಣನೇ ಶೂದ್ರ  ಎಂದು ಮಧುಗಿರಿ ಶಾಸಕ ಹಾಗೂ ಸಹಕಾರ ಸಚಿವ ಕೆಎನ್‌ ರಾಜಣ್ಣ ಹೇಳಿದ್ದರು. ಆದರೆ, ತಮ್ಮದೇ ಜಿಲ್ಲೆಯಲ್ಲಿ ಸಂಭವಿಸಿದ ಘೋರ ಅವಘಡದ ಬಗ್ಗೆ ಮಾತ್ರ ಈವರೆಗೂ ತುಟಿಬಿಚ್ಚಿಲ್ಲ. ಕೃಷ್ಣ ಶೂದ್ರನೋ, ಬ್ರಾಹ್ಮಣನೋ ಎನ್ನುವ ಬಗ್ಗೆ ಉತ್ಸಾಹದಿಂದ ಮಾತನಾಡುವ ಸಚಿವ ಕೆಎನ್‌ ರಾಜಣ್ಣ, ತಮ್ಮದೇ ಜಿಲ್ಲೆಯಲ್ಲಿ ಬಡಜನರಿಗೆ ಶುದ್ದ ಕುಡಿಯುವ ನೀರುವ ಪೂರೈಕೆ ಮಾಡುವಲ್ಲಿ ಸೋತಿದ್ದಾರೆ. ಇದರಿಂದಾಗಿ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲಮಾವು ಗ್ರಾಮದಲ್ಲಿ ಮನೆಮನೆಗೂ ಸೂತಕದ ವಾತಾವರಣ ನಿರ್ಮಾಣವಾಗುವ ಪರಿಸ್ಥಿತಿ ತಲುಪಿದೆ. 

ಸೋರಲಮಾವು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ ಭೇದಿ ಶಂಕೆ ವ್ಯಕ್ತವಾಗಿದ್ದು, ಹತ್ತಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ತುಮಕೂರುನ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲಮಾವು ಗ್ರಾಮದಲ್ಲಿ ಘಟನೆ ನಡೆದಿದೆ. ವಾಂತಿ ಭೇದಿಗೆ 60 ವರ್ಷದ ವೃದ್ಧೆ ಗುಂಡಮ್ಮ ಈಗಾಗಲೇ ಸಾವು ಕಂಡಿದ್ದರೆ, ಮಂಗಳವಾರ 15 ವರ್ಷದ ಬಾಲಕಿ ಭುವನೇಶ್ವರಿ ಸಾವು ಕಂಡಿದ್ದಾಳೆ. ಮತ್ತಷ್ಟು ಸಾವು ಹೆಚ್ಚಾಗುವ ಸಾಧ್ಯತೆಯೂ ಇದೆ. ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಸ್ವಸ್ಥರಾದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೂ ಪಿಡಿಓ ಮಾತ್ರ ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಇನ್ನು ಸಚಿವ ಕೆಎನ್‌ ರಾಜಣ್ಣ, ಶ್ರೀಕೃಷ್ಣನ ಜಾತಿ ಹುಡುಕುವ ಮಾತಿನಲ್ಲಿ ಬ್ಯುಸಿಯಾಗಿದ್ದಾರೆ.

ಇಂದು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಮೂವರನ್ನು ದಾಖಲು ಮಾಡಲಾಗಿದೆ. ಗ್ರಾಮದ ಹನುಮಂತಯ್ಯ, ನರಸಿಂಹಯ್ಯ, ಶಿವು ತೀರಾ ಅಸ್ವಸ್ಥರಾಗಿದ್ದಾರೆ. ಸ್ಥಳದಲ್ಲಿಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಸ್ಥಳಕ್ಕೆ  ಭೇಟಿ ನೀಡಿದ ಶಾಸಕ ಸಿ.ಬಿ.ಸುರೇಶ್ ಬಾಬು ಮೃತರ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ.

Latest Videos

'ನನ್ನ ಹೆಂಡ್ತಿನ ಕಳಿಸಿಕೊಡಿ..' ತಂಜೀಮ್‌ ಭಾನುಗಾಗಿ ಪೊಲೀಸ್‌ ಸ್ಟೇಷನ್‌ನಲ್ಲಿ ಧರಣಿ ಕುಳಿತ ಪತಿ ಪ್ರದೀಪ್‌!

ಇಂದು ಬಾಲಕಿ ಸಾವು: ಕಲುಷಿತ ನೀರು ಸೇವನೆ ಮಾಡಿದ್ದ 15 ವರ್ಷದ ಬಾಲಕಿ ಭುವನೇಶ್ವರಿ ಇಂದು ಸಾವು ಕಂಡಿದ್ದಾರೆ.ಈ ನಡುವೆ ಸಾವಿನ ಸಂಖ್ಯೆಯನ್ನ ಮುಚ್ಚಿಡುತ್ತಿರುವ ಜಿಲ್ಲಾಡಳಿತ ಮುಚ್ಚಿಡುತ್ತಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಹನುಮಂತಯ್ಯ, ನರಸಿಂಹಯ್ಯ, ಶಿವು ಅವರ ಆರೋಗ್ಯ ಸ್ಥಿತಿ ಗಂಭಿರವಾಗಿದೆ ಎಂದು ಹೇಳಲಾಗಿದೆ. ಗ್ರಾಮದಲ್ಲಿರುವ ಮಿನಿ ನೀರಿನ ಟ್ಯಾಂಕ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಇದೇ ನೀರು ಕುಡಿದು ಇವರು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ತುಮಕೂರಿನಲ್ಲಿ ಈ ರೀತಿಯ ಘಟನೆ ಆಗುತ್ತಿರುವುದು ಇದು ಮೊದಲೇನಲ್ಲ. ಕಳೆದ ಜೂನ್‌ನಲ್ಲಿ ಏಳು ಮಂದಿ ಹೀಗೆ ಸಾವು ಕಂಡಿದ್ದರು. ಆದರೂ ಸ್ಥಳೀಯ ಜಿಲ್ಲಾಡಳಿತವಾಗಲಿ, ರಾಜಕಾರಣಿಗಳಾಗಲಿ ಈ ಬಗ್ಗೆ ಗಮನ ನೀಡುತ್ತಿಲ್ಲ.

Markonahalli Dam: ಭರ್ತಿಯಾದ ಇತಿಹಾಸ ಪ್ರಸಿದ್ದ ಮಾರ್ಕೋನಹಳ್ಳಿ ಡ್ಯಾಮ್‌, 2 ಸ್ವಯಂಚಾಲಿತ ಸೈಫನ್‌ ಓಪನ್‌

click me!