ಈ ದೇವಾಲಯದಲ್ಲಿ  ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತಿನಿತ್ಯ ಅರ್ಚನೆ

Nov 26, 2019, 8:24 PM IST

ಹಾಸನ(ನ. 26)  ಹಾಸನದ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತೀ ಸೋಮವಾರ ಈ ದೇವಾಲಯದಲ್ಲಿ ಅರ್ಚನೆ ಮಾಡಲಾಗುತ್ತದೆ.  ಹಾಸನದ ವಿರೂಪಾಕ್ಷ ದೇವಾಯದಲ್ಲಿ ಹಳೇ ಜಿಲ್ಲಾಧಿಕಾರಿ ಹೆಸರಿನಲ್ಲಿ ಅರ್ಚನೆ ಮಾಡಲಾಗುತ್ತದೆ.

ಅಲ್ಲದೇ ರೋಹಿಣಿ ಸಿಂಧೂರಿ ಹೆಸರಿನಲ್ಲಿ  ಬಾದಾಮಿ ಗಿಡ ಕೂಡಾ ಬೆಳಸಲಾಗುತ್ತಿದೆ. ಆ ಗಿಡಕ್ಕೆ ಪ್ರತಿನಿತ್ಯ ಜಲಾಭಿಷೇಕ ನಡೆಯುತ್ತಿದೆ. ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯ ಶಿಥಿಲಾವಸ್ಥೆಗೆ ತೆರೆಳಿದ್ದಾಗ ಯಾರೂ ಕೂಡಾ ಗಮನಹರಿಸಿರಲಿಲ್ಲ.  2017ರಲ್ಲಿ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ 30 ಲಕ್ಷ ಹಣ ಬಿಡುಗಡೆ ಮಾಡಿಸಿದ್ದರು . ಇದರಿಂದ ಮೇಲ್ಛಾವಣಿ, ನೆಲಹಾಸು ಮತ್ತು ವಿದ್ಯುತ್ ಸೌಕರ್ಯ ಸೇರಿ ಎಲ್ಲಾ ವ್ಯವಸ್ಥೆ ಬಂದಿತ್ತು.  ಹಾಸನದ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಪ್ರತೀ ಸೋಮವಾರ ಅರ್ಚನೆ ಮಾಡಲಾಗುತ್ತಿದೆ.

ದಕ್ಷ, ಖಡಕ್ ಅಧಿಕಾರಿ ರೋಹಿಣಿ ಸಿಂಧೂರಿ ಯಾರು?

ಗಿಡಗಂಟೆಗಳು ಬೆಳೆದು ಕಾಡಂತಿದ್ದ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದ್ದರು.  ಅಲ್ಲಿ ವಿಶೇಷ ಮರಗಳಿದ್ದವು, ಅವುಗಳ ನಡುವೆ ಒಂದು ಬಾದಾಮಿ ಗಿಡವನ್ನು ನೆಟ್ಟು ಅವರ ಹೆಸರನ್ನು ಇಟ್ಟು ಪೋಷಿಸಲಾಗುತ್ತಿದೆ. ಅದಕ್ಕೂ ಕೂಡಾ ಪ್ರತಿನಿತ್ಯ ಜಲಾಭಿಷೇಕ ಮಾಡಲಾಗುತ್ತದೆ.