
ರೆಬಲ್ ಸ್ಟಾರ್ ನಟ ಅಂಬರೀಷ್ (Rebel Star Ambareesh) ಅವರನ್ನು ಬಳಸಿಕೊಂಡು ಹೇಗಾದ್ರೂ ಮಾಡಿ ನಟ ವಿಷ್ಣುವರ್ಧನ್ (Actor Vishnuvardhan)ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಬಲ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ನಟ ವಿಷ್ಣುವರ್ಧನ್ ಅವರು ಯಾವತ್ತೂ ರಾಜಕೀಯಕ್ಕೆ ಬರಲಿಲ್ಲ. ಅಂದರೆ, ಆ ಪ್ರಯತ್ನವೇ ನಡೆದಿರಲಿಲ್ಲ ಎಂದಲ್ಲ. ಅಂತಹ ಪ್ರಯತ್ನ ದೊಡ್ಡ ಮಟ್ಟದಲ್ಲೇ ನಡೆದಿತ್ತು. ಆದರೆ, ಯಾಕೆ ವಿಷ್ಣು ರಾಜಕೀಯದ ಕಡೆ ಮುಖ ಮಾಡಲಿಲ್ಲ. ಅದಕ್ಕೆ ಕಾರಣವೇನು? ಅಂಬರೀಷ್ ಮಾತಿಗೆ ನಟ ವಿಷ್ಣುವರ್ಧನ್ ಯಾಕೆ ಒಪ್ಪಲಿಲ್ಲ?
ಹೌದು, ನಟ ವಿಷ್ಣುವರ್ಧನ್ ಅವರು ಬದುಕಿದ್ದಾಗ ಇಂಥದ್ದೊಂದು ಪ್ರಯತ್ನ ನಡೆದಿತ್ತು. ರಾಜಕೀಯವಾಗಿ ಪ್ರಬಲರಾಗಿದ್ದ, ಪದೇ ಪದೇ ಗೆದ್ದು ಸಂಸದರಾಗುತ್ತಿದ್ದ ವ್ಯಕ್ತಿಯೊಬ್ಬರನ್ನು ಸೋಲಿಸಲು ಸಂಚು ರೂಪಿಸಲಾಗಿತ್ತು. ಸತತ ಗೆಲುಪು ಪಡೆದು ಅಧಿಕಾರದಲ್ಲಿದ್ದ ಆ ವ್ಯಕ್ತಿಯನ್ನು ಸೋಲಿಸುವ ಸಾಮರ್ಥ್ಯನಟ ವಿಷ್ಣುವರ್ಧನ್ ಅವರಿಗೆ ಎಂದು ಭಾವಿಸಿ ಒಂದು ತಂಡ ಕಾರ್ಯಪ್ರವೃತ್ತವಾಗಿತ್ತು. ವಿಷ್ಣು ಅವರಿಗೆ ಅತ್ಯಂತ ಆಪ್ತರಾಗಿದ್ದ ನಟ ಅಂಬರೀಷ್ ಅವರನ್ನು ಈ ಕೆಲಸಕ್ಕೆ ನೇಮಿಸಿ ಹೇಗಾದರೂ ಮಾಡಿ ವಿಷ್ಣುವರ್ಧನ್ ಅವರನ್ನು ಮನವೊಲಿಸಿ ಚುನಾವಣೆಗೆ ನಿಲ್ಲುವಂತೆ ಮಾಡಿ ಎನ್ನಲಾಗಿತ್ತು.
ನಟಿ ಗೀತಾ ನೆನಪಿದ್ಯಲ್ಲ ನಿಮಗೆ? ಅಮೆರಿಕಾದಿಂದ ಬಂದು ಈಗ ಮತ್ತೆ ಸಿನಿಮಾದಲ್ಲಿ ನಟಿಸ್ತಿರೋದ್ಯಾಕೆ..?
ಆದರೆ, ನಟ ಅಂಬರೀಷ್ ಅವರು ವಿಷ್ಣುವರ್ಧನ್ ಅವರಿಗೆ ಅತ್ಯಾಪ್ತರು. ಅವರು ಗೆಳೆಯನಿಗೆ ಒತ್ತಡ ಹೇರಲು ಸಾಧ್ಯವಾಗುವುದಿಲ್ಲ. ಆಫರ್ ಬಗ್ಗೆ ಹೇಳಿ ಅಭಿಪ್ರಾಯ ಕೇಳಿದ್ದರು ಅಂಬರೀಷ್. ಆ ಬಗ್ಗೆ ವಿಷ್ಣು ಅವರು ತಮಗೆ ಆಫರ್ ತಂದಿದ್ದ ಅಂಬಿ ಜೊತೆಯಲ್ಲೇ ಕುಳಿತು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದರು. ಬಳಿಕ, 'ನನಗೆ ಈ ರಾಜಕೀಯ ಆಗಿ ಬರಲ್ಲ' ಎಂದು ಹೇಳಿದ ನಟ ವಿಷ್ಣುವರ್ಧನ್ 'ನಾನು ರಾಜಕೀಯಕ್ಕೆ ಬರುವುದಿಲ್ಲ' ಎಂದು ಹೇಳಲು ನಟ ಅಂಬರೀಷ್ ಅವರಿಗೆ ಸೂಚಿಸಿದ್ದರು. ಬಳಿಕ, ಅಂಬರೀಷ್ ತಮ್ಮದೇ ಸ್ಟೈಲಿನಲ್ಲಿ 'ಅಂವ ಬರಲ್ವಂತೆ ಬಿಡಿ..' ಎಂದಿದ್ದರಂತೆ.
'ಆ ಕರಾಳ ರಾತ್ರಿ'ಯ ಬಗ್ಗೆ ಮಾತನಾಡಿದ ಅನುಪಮಾ ಗೌಡ; ಅಲ್ಲಿಂದ ಮುಂದಕ್ಕೆ ಜೀವನ ಹೇಗೆ ನಡೀತಿದೆ?
ಹಾಗಿದ್ದರೆ ನಟ ವಿಷ್ಣುವರ್ಧನ್ ಅವರನ್ನು ಯಾರ ವಿರುದ್ಧ ನಿಲ್ಲಿಸಲು ಪ್ಲಾನ್ ಮಾಡಲಾಗಿತ್ತು ಗೊತ್ತಾ? ಹಿರಿಯ ರಾಜಕಾರಣಿ, ದಿವಂಗತ ಅನಂತ್ ಕುಮಾರ್ (Ananth Kumar).ಹೌದು, ಸತತವಾಗಿ ಗೆಲ್ಲುತ್ತಿದ್ದ ಅನಂತ್ ಕುಮಾರ್ ಅವರನ್ನು ಸೋಲಿಸಲು ಪಣ ತೊಟ್ಟಿದ್ದ ಅವರ ವಿರುಧ್ದವಿದ್ದ ಬಣ, ನಟ ವಿಷ್ಣುವರ್ಧನ್ ಅವರನ್ನು ಮನವೊಲಿಸಿ ಅನಂತ್ ಕುಮಾರ್ ವಿರುದ್ಧ ನಿಲ್ಲಿಸಿ ಅವರನ್ನು ಸೋಲಿಸಲು ಪ್ಲಾನ್ ಮಾಡಿತ್ತು. ಆದರೆ ಅವರ ಪ್ಲಾನ್ ವರ್ಕೌಟ್ ಆಗಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.