ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಲಕ್ಷ್ಮಿ ಪೂಜೆ ಜೊತೆ ಬಂಗಾರ, ಬೆಳ್ಳಿ ಖರೀದಿ ಮಾಡುವವರು ಸಾಕಷ್ಟು ಮಂದಿ. ಆದ್ರೆ ಇದ್ರಲ್ಲಿ ಯಾವುದು ಅತ್ಯುತ್ತಮ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ವೈಶಾಖ ಶುಕ್ಲ ತೃತೀಯ ತಿಥಿಯಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ. 10 ರಂದು ಅಕ್ಷಯ ತೃತೀಯ ಆಚರಣೆ ಮಾಡಲಾಗ್ತಿದೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ಬಹಳ ಮಹತ್ವವಿದೆ. ಈ ದಿನವನ್ನು ದೇವಿ ಲಕ್ಷ್ಮಿಗೆ ಅರ್ಪಿಸಲಾಗಿದೆ. ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವ ಜನರು ಆ ದಿನ ತಾಯಿ ನೀಡಿದ ಸಂಪತ್ತು ಎಂದೂ ನಮ್ಮಿಂದ ದೂರವಾಗುವುದಿಲ್ಲ ಎಂದು ನಂಬುತ್ತಾರೆ. ಅದೇ ಕಾರಣಕ್ಕೆ ಈ ದಿನ ಮಂಗಳ ಕಾರ್ಯಗಳನ್ನು ಜನರು ಮಾಡ್ತಾರೆ. ಮಂಗಳ ವಸ್ತುಗಳನ್ನು ಖರೀದಿ ಮಾಡ್ತಾರೆ. ಅಕ್ಷಯ ತೃತೀಯದಂದು ಬೆಳ್ಳಿ, ಬಂಗಾರ, ವಜ್ರ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡುವ ಪದ್ಧತಿ ನಮ್ಮಲ್ಲಿದೆ. ಮನೆ, ವಾಹನ ಖರೀದಿಗೂ ಈ ದಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಬಹುತೇಕರು ಚಿನ್ನ ಅಥವಾ ಬೆಳ್ಳಿಯಲ್ಲಿ ಒಂದು ಧಾತುವನ್ನು ಖರೀದಿ ಮಾಡ್ತಾರೆ. ನೀವೂ ಈ ದಿನ ಆಭರಣ ಖರೀದಿ ಮಾಡುವ ಪ್ಲಾನ್ ನಲ್ಲಿದ್ದರೆ ಬೆಳ್ಳಿ ಅಥವಾ ಬಂಗಾರದಲ್ಲಿ ಯಾವುದನ್ನು ಖರೀದಿ ಮಾಡಬೇಕು ಎಂಬ ಪ್ರಶ್ನೆ ಕಾಡ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.
ಚಿನ್ನ (Gold) ಮತ್ತು ಬೆಳ್ಳಿ (Silver) ಎರಡಕ್ಕೂ ತನ್ನದೇ ಮಹತ್ವ ಇದೆ. ಚಿನ್ನವನ್ನು ಲಕ್ಷ್ಮಿ (Lakshmi) ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿಯು ಶುಕ್ರ ಮತ್ತು ಚಂದ್ರನಿಗೆ ಸಂಬಂಧಿಸಿದೆ.
undefined
ಮೇ 1, 2024 ಮಧ್ಯರಾತ್ರಿಯ ನಂತರ ಈ 5 ರಾಶಿಯವರಿಗೆ ಅನಿರೀಕ್ಷಿತ ಫಲಿತಾಂಶ,ಹಿಂದೆಂದೂ ನೋಡಿಲ್ಲ
ಅಕ್ಷಯ ತೃತೀಯ (Akshaya Tritiya ) ದಂದು ಚಿನ್ನ ಖರೀದಿಯಿಂದಾಗುವ ಲಾಭ : ಪುರಾಣ ಕಥೆ ಪ್ರಕಾರ, ಸಮುದ್ರ ಮಂಥನದ ವೇಳೆ ಚಿನ್ನ ಕೂಡ ಬಂದಿತ್ತು. ಅದನ್ನು ಮಹಾಲಕ್ಷ್ಮಿ ರೂಪವೆಂದು ಪರಿಗಣಿಸಲಾಯಿತು. ಅದನ್ನು ವಿಷ್ಣು ಧರಿಸಿದ್ದನು. ಹಾಗಾಗಿಯೇ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿ ಮಾಡುವುದು ಶುಭವೆಂದು ನಂಬಲಾಗುತ್ತದೆ. ಅಂದು ಚಿನ್ನ ಖರೀದಿ ಮಾಡಿದ್ರೆ ಮನೆಗೆ ಲಕ್ಷ್ಮಿ ಬರ್ತಾಳೆ. ಬರೀ ಚಿನ್ನ ಮಾತ್ರವಲ್ಲ ಅಕ್ಷಯ ತೃತೀಯದಂದು ಮನೆ, ವಾಹನ ಖರೀದಿ ಮಾಡಿದ್ರೂ ಅದನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಅದು ಸದಾ ನಿಮ್ಮೊಂದಿಗೆ ಇರುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಈ ದಿನ ಬಂಗಾರ ಖರೀದಿ ಮಾಡಿದಲ್ಲಿ ಸಂತೋಷ, ಸುಖ ಪ್ರಾಪ್ತಿಯಾಗುತ್ತದೆ. ವರ್ಷಪೂರ್ತಿ ನಿಮಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಈ ದಿನ ನೀವು ಚಿನ್ನವನ್ನು ಮನೆಗೆ ತಂದ್ರೆ ಐಶ್ವರ್ಯ, ಕೀರ್ತಿ ಲಭ್ಯವಾಗುತ್ತದೆ.
ಅಕ್ಷಯ ತೃತೀಯದಂದು ಬೆಳ್ಳಿ ಖರೀದಿಸಿದ್ರೆ ಲಾಭವೇನು? : ಬೆಳ್ಳಿಯನ್ನು ಚಂದ್ರ ಮತ್ತು ಶುಕ್ರ ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಶುಕ್ರ, ಭೌತಿಕ ಸಂತೋಷವನ್ನು ನೀಡ್ತಾನೆ. ಆತನನ್ನು ಪ್ರೀತಿ, ಮಕ್ಕಳು, ಸೌಲಭ್ಯಕ್ಕೆ ಹೋಲಿಕೆ ಮಾಡಲಾಗುತ್ತದೆ. ಚಂದ್ರ ಮಾನಸಿಕ ಬಲ ಹೆಚ್ಚಿಸುತ್ತಾನೆ. ಬೆಳ್ಳಿಯನ್ನು ಖರೀದಿ ಮಾಡಿದ್ರೆ ಶುಕ್ರ ಹಾಗೂ ಚಂದ್ರ ಎರಡೂ ಗ್ರಹದ ಬಲ ನಿಮಗೆ ಸಿಗುತ್ತದೆ. ಚಂದ್ರ ನಿಮ್ಮ ಮಾನಸಿಕ ಶಕ್ತಿ ಹೆಚ್ಚಿಸುತ್ತಾನೆ. ಶುಕ್ರ ಭೌತಿಕ ಸುಖ ನೀಡ್ತಾನೆ. ನೀವು ಅಕ್ಷಯ ತೃತೀಯದಂದು ಬೆಳ್ಳಿ ಖರೀದಿ ಮಾಡುವುದಾದ್ರೆ ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿರುವ ಅಂಗಡಿಯಲ್ಲಿ ಬೆಳ್ಳಿ ಖರೀದಿ ಮಾಡಿ. ಬೆಳ್ಳಿ ಆಭರಣ ಮಾತ್ರವಲ್ಲದೆ ಮನೆ ಅಲಂಕಾರಕ್ಕೆ ಅಗತ್ಯವಿರುವ ವಸ್ತು, ಮೂರ್ತಿ, ಶೋಕೇಸ್ ನಲ್ಲಿಡುವ ವಸ್ತುಗಳನ್ನು ನೀವು ಖರೀದಿ ಮಾಡಿ.
ಗಂಡ ಹೆಂಡತಿ ವೈಮನಸ್ಯ ತೊಲಗಿಸಿ, ಅದೃಷ್ಟದ ಬಾಗಿಲೂ ತೆರೆಸುತ್ತೆ ದಾಸವಾಳ!
ಈ ವಸ್ತುಗಳನ್ನೂ ಖರೀದಿಸಿ : ಅಕ್ಷಯ ತೃತೀಯದಂದು ನೀವು ಬೆಳ್ಳಿ (Silver), ಚಿನ್ನ (Gold) ಮಾತ್ರವಲ್ಲ ಮಣ್ಣಿನ ಹೂಜಿ (Earthern Pot), ಹಿತ್ತಾಳೆ (Bronze) ಅಥವಾ ತಾಮ್ರದ (Copper Vessels) ಪಾತ್ರೆಗಳು, ಲೋಹದ ಪಾತ್ರೆಗಳನ್ನು (Metal Vessels) ಮಾತ್ರ ಖರೀದಿ ಮಾಡ್ಬಹುದು. ಈ ಬಾರಿ ಅಕ್ಷಯ ತೃತೀಯದಂದು ಇಡೀ ದಿನ ಖರೀದಿಗೆ ಅವಕಾಶವಿದೆ.