ಮಹಾಲಯ ಅಮಾವಾಸ್ಯೆಯಂದು ಯಾರಿಗಾಗಿ ಶ್ರಾದ್ಧ ಮಾಡಬೇಕು? ಬ್ರಹ್ಮಾಂಡ ಗುರೂಜಿ ವಿವರಿಸುತ್ತಾರೆ..

Sep 14, 2022, 2:43 PM IST

ಅಪಮೃತ್ಯು, ಅಪಘಾತ, ಕಾಣೆಯಾಗಿ ಹಲವಾರು ವರ್ಷವಾದವರಿಗೆ ಸರಿಯಾಗಿ ಶ್ರಾದ್ಧವಾಗದೆ ಉಳಿದಿರಬಹುದು. ಅಂಥ ಸಂದರ್ಭದಲ್ಲಿ ಆ ಆತ್ಮ ಸದ್ಗತಿ ಸಿಗದೆ ಒದ್ದಾಡುತ್ತಿರುತ್ತದೆ. ಅಂಥವರಿಗೆ ಮಹಾಲಯ ಅಮಾವಾಸ್ಯೆಯಲ್ಲಿ ಶ್ರಾದ್ಧ ಮಾಡಬಹುದು. ತರ್ಪಣ ಬಿಟ್ಟು ಪಿಂಡ ಪ್ರದಾನ ಮಾಡಬಹುದು. ಇದರಿಂದ ಅವರಿಗೆ ಮೋಕ್ಷ ಸಿಗುವುದು. ಪಿತೃಪಕ್ಷದಲ್ಲಿ ಭೂಲೋಕಕ್ಕೆ ಬಂದ ಪೂರ್ವಜರು ಮಹಾಲಯ ಅಮಾವಾಸ್ಯೆಯಂದು ಹಿಂದಿರುಗುತ್ತಾರೆ ಎನ್ನುವ ನಂಬಿಕೆಯಿದೆ. ನಮ್ಮನ್ನು ಹಿರಿಯರು ಹೇಗೇ ನಡೆಸಿಕೊಂಡಿದ್ದರೂ ಕರ್ತವ್ಯವಾಗಿ ಈ ಸಮಯದಲ್ಲಿ ಶ್ರಾದ್ಧ ಮಾಡಲೇಬೇಕು ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ. 

Astrology Remedies: ಪ್ರಾಣಿ ಪಕ್ಷಿಗಳು ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲವು! ಇಷ್ಟ್ ಮಾಡಿ ಸಾಕು..