ಇಲ್ಲಿ ಬ್ರಿಟಿಷ್ ಅಧಿಕಾರಿಗಳು ಬಂದು ವಾಸ್ತವ್ಯ ಹೂಡ್ತಿದ್ರು ಅನ್ನೋ ಮಾತಿದೆ. ಬೇಟೆಗಾಗಿಯೋ ಅಥವ ವಿಶ್ರಾಂತಿಗೋ ಅನ್ನೋದು ಗೊತ್ತಿಲ್ಲ. ಆದರೆ, ಬ್ರಿಟಿಷರು ಹೋದ ನಂತರ ಕೆಲವರು ಓಡಾಡುವ ಮಾರ್ಗದಲ್ಲಿ ನೋಡ್ತಿದ್ರು. ಈಗ ಆ ಊರುಗಳು ಇಲ್ಲ. ಉಳಿದಿರೋದು ಬರೀ ಕಾಡಷ್ಟೆ. ಕಾಡಿನ ನಡುವೆ ಇರೋ ಬ್ರಿಟಷರ ಬಂಗಲೆ ತೋರಿಸಿ ಅಂತ ಸಫಾರಿಗೆ ಹೋದಾಗ ಕೇಳಿದ್ರೆ ಅಧಿಕಾರಿಗಳು ಕರ್ಕೊಂಡು ಹೋಗಿ ತೋರಿಸ್ತಾರೆ ಅಷ್ಟೆ.