ಇಲ್ಲಿ ಗ್ರಾಮಕ್ಕೆ ಗ್ರಾಮವೇ ಮಂಗಳವಾರ, ಶುಕ್ರವಾರ ಏರಿಯಾ ಬಿಟ್ಟು ಕದಲೋಂಗಿಲ್ಲ!

Jul 19, 2022, 4:36 PM IST

ಅದೊಂದು ವಿಚಿತ್ರ ಮತ್ತು ನಿಗೂಢ ಗ್ರಾಮ. ಇಲ್ಲಿ ಸಾವಿನ ಭಯಕ್ಕೆ ಜನರು ಆಚರಿಸೋ ಪದ್ಧತಿಗಳೂ ವಿಚಿತ್ರ ಮತ್ತು ಅಚ್ಚರಿ ತರುವಂಥವು. ಎಲ್ಲಿ ಸಾವು ಬಂದು ಎರಗಿ ಬಿಡುತ್ತೆ ಅಂತ ಇಡೀ ಊರಿಗೆ ದಿಗ್ಬಂಧನ ಹಾಕಿ ಬಿಟ್ಟಿರ್ತಾರೆ. ಅಷ್ಟೆ ಅಲ್ಲ, ಹಸಿವಾದ್ರೂ ಅಲ್ಲಿ ರೊಟ್ಟಿ ತಟ್ಟೋ ಹಾಗಿಲ್ಲ.. ಸುಡುವ ಬಿಸಿಲಿದ್ರೂ ಚಪ್ಪಲಿ ಹಾಕೋ ಹಾಗಿಲ್ಲ..ಅಷ್ಟಕ್ಕೂ ಹೀಗೆ ಭಯ ಹುಟ್ಟಿಸೋ ಊರು ಇರೋದಾದ್ರೂ ಎಲ್ಲಿ..? ಆ ದೈವವಾದ್ರು ಯಾವುದು..? ಇಲ್ಲಿದೆ ನೋಡಿ ಆ ಊರಿನ ಭಯಾನಕ ಸತ್ಯ..

ಹೋಮದ ಆಹುತಿ ವೇಳೆ ಸ್ವಾಹಾ ಎಂದು ಹೇಳೋದ್ಯಾಕೆ?

ವಿಜಯಪುರದ ಕಾಲೇಬಾಗದ ದೈವ ಲೀಲೆ ನಿಜಕ್ಕೂ ಅದ್ಭುತ. ನೂರಾರು ವರ್ಷಗಳಿಂದ ನೆಲೆ ನಿಂತಿರುವ ಜಟ್ಟಿಂಗರಾಯ ಹಾಗೂ ದುರ್ಗಾದೇವಿ ದೈವಗಳು ಗ್ರಾಮಕ್ಕೆ ರಕ್ಷಾಚವಕವಾಗಿವೆ. ಇಲ್ಲಿನ ಜನರಿಗೆ ಎಂಥಹದ್ದೇ ಕಂಟಕ ಬಂದರೂ, ಇದೇ ದೈವ ಶ್ರೀರಕ್ಷೆಯಾಗಿ ನಿಂತಿರುತ್ತೆ.  ಇದೇ ದೇವರು ಕೋವಿಡ್‌ ಸಮಯದಲ್ಲೂ ಗ್ರಾಮಸ್ಥರನ್ನ ಸಾವಿನಿಂದ ಕಾಪಾಡಿತ್ತು. ಆದರೆ ಕಳೆದ 3-4 ತಿಂಗಳಲ್ಲಿ ಜನರು ಚಿತ್ರ-ವಿಚಿತ್ರವಾಗಿ ಸಾವೀಗಿಡಾಗುತ್ತಿದ್ದಾರೆ. ಈ ಸಾವಿನ ಜಾಡು ಹಿಡಿದು ಹೋದಾಗ ಏನೆಲ್ಲ ಸತ್ಯ ಬಿಚ್ಚಿಕೊಳ್ತು ಎಂಬುದನ್ನು ವಿಡಿಯೋ ನೋಡಿ ಕಂಡುಕೊಳ್ಳಿ..