
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ವಾರ ಹಂಸ ಅವರು ಮನೆಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಬಾಲ್ ಟಾಸ್ಕ್ ಗೆದ್ದ ಬಳಿಕ ಸ್ವರ್ಗ ನಿವಾಸಿಗಳಲ್ಲಿ 10 ಮಂದಿಯಲ್ಲಿ 6 ಜನರನ್ನು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಮಾಡಬೇಕಿತ್ತು. ನಾಮಿನೇಟ್ ಆದವರಿಗೆ ಕ್ಯಾಪ್ಟನ್ಸಿ ಟಾಸ್ಕ್ ಕೊಡಬೇಕೆಂಬುದು ಜಗದೀಶ್ ವಾದವಾಗಿತ್ತು. ಆದರೆ ಯಮುನಾ ಅವರು ಇದಕ್ಕೆ ಒಪ್ಪಲಿಲ್ಲ. ಯಾರು ನಿಯಮ ಪಾಲನೆ ಮಾಡಿಲ್ಲ, ಮೈಕ್ ಸರಿಯಾಗಿ ಧರಿಸಿಲ್ಲ ಅವರು ಹೋಗಬಾದೆಂಬುದು ಉಗ್ರಂ ಮಂಜು ಅಭಿಪ್ರಾಯವಾಗಿತ್ತು. ಕೊನೆಗೆ ವೋಟಿಂಗ್ ಮಾಡಿ ಎಲ್ಲರ ಒಪ್ಪಿಗೆ ಪಡೆಯೋಣ ಅಂದುಕೊಂಡರು.
ರಂಜಿತ್ ಟಾಸ್ಕ್ ಗೆದ್ದು ಬಿಗ್‌ಬಾಸ್ ಮನೆಯ ಮೊದಲ ಮಹಿಳಾ ಕ್ಯಾಪ್ಟನ್ ಆದ ಹಂಸ!
ಆದರೆ ಇದಕ್ಕೆ ಜಗದೀಶ್ ಒಪ್ಪಲಿಲ್ಲ. ನಾನು ವೋಟಿಂಗ್ ನಲ್ಲಿ ಇಲ್ಲ ಅವರಿಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೊರಬಂದರು ಕೊನೆಗೆ ಸ್ವರ್ಗ ನಿವಾಸಿಗಳಲ್ಲಿ ಭವ್ಯ, ಹಂಸ ತ್ರಿವಿಕ್ರಮ್ ಉಗ್ರಂ ಮಂಜು , ಯುಮುನಾ ಹಾಗೂ ಐಶ್ವರ್ಯ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಲಾಯ್ತು.
ಬಿಗ್‌ಬಾಸ್ ಗೆ ಅನೌನ್ಸ್ ಮಾಡುವ ಹೊತ್ತಿನಲ್ಲಿ ಜಗದೀಶ್ ಬಂದು ಸೋಫಾದಲ್ಲಿ ಕುಳಿತುಕೊಳ್ಳದೆ ನಿಂತುಕೊಂಡರು. ಇತರರು ಕರೆದಿದ್ದಕ್ಕೆ ಟೀಂ ನಲ್ಲಿ ನಾನು ಲೆಕ್ಕಕ್ಕೇ ಇಲ್ಲ ಅಂದ ಮೇಲೆ ನಾನು ನಿಮ್ಮ ಬಳಿ ಜೊತೆಯಲ್ಲಿ ಕುಳಿತುಕೊಳ್ಳಲ್ಲ ಎಂದು ಜಗದೀಶ್ ದೂರ ಕುಳಿತರು.
ಬಿಗ್‌ಬಾಸ್ ಸ್ವರ್ಗ ನಿವಾಸಿಗಳ ಪರ ನರಕದಲ್ಲಿರುವವರು ಆಡಬೇಕು ಎಂದು ಅದಲು -ಬದಲು ಅವಕಾಶ ಜೊತೆಗೆ ಟಾಸ್ಕ್ ಗೆದ್ದು ನಾಯನಾದವರು ನರಕದಲ್ಲಿರುವವರು ಸ್ವರ್ಗಕ್ಕೆ , ಸ್ವರ್ಗದಲ್ಲಿರುವವರ ನರಕಕ್ಕೆ ಕಳಿಸುವ ಆಯ್ಕೆ ಇದೆ ಎಂದಾಗ ಜಗದೀಶ್ ಮತ್ತೆ ಮಧ್ಯೆ ಬಂದು ಇವರ ಆಯ್ಕೆನಲ್ಲಿ ಮೋಸವಾಗಿದೆ. ಅವರೆಲ್ಲ ಒಂದಾಗಿ ಪ್ಲಾನ್ ಮಾಡುತ್ತಾರೆ. ಈ 6 ಜನ ನೆಟ್ಟಗೆ ನರಕ ನಿವಾಸಿಗಳ ಬಳಿ ಮಾತನಾಡುವುದೇ ಇಲ್ಲ ಅಂದ ಮೇಲೆ ಅವರು ಹೇಗೆ ಅದಲು ಬದಲು ಮಾಡುತ್ತಾರೆ ಎಂದು ದನಿ ಎತ್ತಿದರು.
ರಶ್ಮಿಕಾ ಸೇರಿದಂತೆ ಬಾಲಿವುಡ್ ದಂಡೇ ಕೇರಳದಲ್ಲಿರುವ ಕಲ್ಯಾಣರಾಮನ್ ಮನೆಯಲ್ಲಿ ಸೇರಲು ಕಾರಣವೇನು?
ಈ ಮಧ್ಯೆ ಕ್ಯಾಪ್ಟನ್ಸಿ ಆಡುವುದು ಯಾರೆಂದು ಆಯ್ಕೆ ನಿಮ್ಮದೇ ಆಗಿತ್ತು ಎಂದು ಬಿಗ್‌ಬಾಸ್ ಹೇಳಿದ್ದೇ ತಡ, ಇದನ್ನು ಕೇಳಿಸಿಕೊಂಡ ಜಗದೀಶ್ ನಾನು ಹೊರ ಹೋಗುತ್ತೇನೆ ಅಂತ ಮತ್ತೆ ಮನೆ ಬಿಡುವ ನಿರ್ಧಾರ ಮಾಡಿ ಮೈಕ್ ತೆಗೆದಿಟ್ಟು ಬ್ಯಾಗ್ ಪ್ಯಾಕ್ ಮಾಡಿ ಕುಳಿತರು. ಜಗದೀಶ್ ರನ್ನು ಕನ್ಫೆಷನ್ ರೂಂ ಗೆ ಕರೆದ ಬಿಗ್ಬಾಸ್ ಬುದ್ದಿ ಹೇಳಿದರು. ಇದಕ್ಕೆ ನರಕ ನಿವಾಸಿಗಳಿಗೆ ಸ್ವರ್ಗ ನಿವಾಸಿಗಳು ಹಿಂಸೆ ನೀಡಿದ್ದಾರೆ. ಅಂತೆಲ್ಲ ದೂರು ಕೊಟ್ಟರು. ಇದಕ್ಕೆ ಬಿಗ್‌ಬಾಸ್ ಇದು ವ್ಯಕ್ತಿತ್ವದ ಆಟ ಎಂದು ಬುದ್ದಿ ಹೇಳಿ ಕಳುಹಿಸಿದರು.
ಹೊರಗೆ ಬಂದಿದ್ದೇ ತಡ ಉಗ್ರಂ ಮಂಜು ಮೇಲೆ ಬಾಯಿಗೆ ಬಂದಂತೆ ಹರಿಹಾಯ್ದ ಜಗದೀಶ್, ಇಷ್ಟು ದೊಡ್ಡ ಆಟ ಆಡುತ್ತಿರುವುದು ಇಲ್ಲಿ ನಾನು ಕೂಡ ಆಟಗಾರನೇ , ನೀನು ಗ್ಯಾಂಗ್ ಕಟ್ಟಿದ್ಯಾ? ನೀನು ಚೆಲ್ಲಾಟ ಆಡಬೇಡ , ಅರ್ಥ ಆಯ್ತಾ ನಿನ್ನ ಪ್ರಾಂಕ್ ಅವರ ಹತ್ತಿರ ಇಟ್ಟುಕೋ ನನ್ನ ಹತ್ರ ಬೇಡ,
ಚಿಲ್ಲರೆ ಪಲ್ಲರೆ ಗೇಮ್ ನನ್ನತ್ರ ಬೇಡ, ನಾನು ನಿಗೆ ಚೆಕ್ ಮೇಟ್ ಕೊಡದಿದ್ದರೆ ನಾನು ನನ್ನ ಅಪ್ಪನ ಮಗನೇ... ಅಲ್ಲ, ಲಾಯರ್ ಜಗದೀಶ್ ಶೇ... ಅಲ್ಲ .
ನಾನು ಸ್ಟಾರ್ ಹೋಟೆಲಲ್ಲೂ ಟೀ ಕುಡಿದಿದ್ದೇನೆ. ಫುಟ್‌ಪಾತ್ ನಲ್ಲೂ ಟೀ ಕುಡಿದ್ದೇನೆ. ನಿಂಗೆ ನಾನು ಉಗ್ರಂ ಮಾಂಜ ನಿನ್ನ ಭಾಷೆಯಲ್ಲೇ ಕೊಡುತ್ತೇನೆ. ನೀನು ಫಿಲಂ ನಲ್ಲಿ ಹೇಳಬಹುದು. ನಿಜವಾಗಿ ತೋರಿಸುತ್ತೇನೆ ಮಾಂಜಾ. ನಿಮ್ಮ ಅಪ್ಪನಂಗೆ ಮಾಡ್ತೇನೆ ನಾನು ಬಾರೋ ಕ್ಯಾಪ್ಟನ್ ಆಗೋ ಮಂಜಾ ಬಾರೋ ಎಂದು ಜಗದೀಶ್ ಬಾಯಿ ಬಡಿದುಕೊಂಡರೂ ಉಗ್ರಂ ಮಂಜು ಮಾತ್ರ ಸೈಲೆಂಟ್ ಆಗಿಯೇ ಇದ್ದರು. ಇಡೀ ಮನೆಯೇ ಸುಮ್ಮನಿತ್ತು.
ಇಷ್ಟೆಲ್ಲ ಆದ ಮೇಲೆ ಕೊನೆಗೆ ಇಡೀ ಮನೆ ಮಂದಿ ವಿರುದ್ಧ ಮಾತನಾಡಿದ್ದು, ಅನ್ಯಾಯ ಅತಿರೇಕ ಆದಾಗ ಮಾತನಾಡುವ ಪರಿಸ್ಥಿತಿ ನಿರ್ಮಾಣ ಆಯ್ತು. ನಾನು ಎಲ್ಲರಲ್ಲೂ ಕ್ಷಮೆ ಕೇಳ್ತೇನೆ. ಎಂದರು ಇದಕ್ಕೆ ಭವ್ಯಾ ಗೌಡ ಮತ್ತು ಹಂಸ ವೀಕೆಂಡ್ ಸುದೀಪ್ ಇವರನ್ನೇ ರುಬ್ಬೋದು ಅಂತ ಮಾತನಾಡಿಕೊಂಡರು. ಇನ್ನೊಂದೆಡೆ ಮಂಜು ಅವರು ಬಿಗ್‌ಬಾಸ್ ಅನ್ನ ತಿಂದು ಜಗದೀಶ್ ಗೆ ನಿಯತ್ತಿಲ್ಲ ಎಂದು ಐಶ್ವರ್ಯ ಮತ್ತು ಧರ್ಮ ಅವರ ಬಳಿ ಮಾತನಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.