ಬಿಗ್‌ಬಾಸ್ ಮನೆಯ ಮೊದಲ ವಾರದ ಕ್ಯಾಪ್ಟನ್‌ಗೆ ಇಮ್ಯುನಿಟಿ ಜೊತೆಯಲ್ಲಿಯೇ ಅತಿದೊಡ್ಡ ಅಧಿಕಾರ

By Mahmad Rafik  |  First Published Oct 4, 2024, 11:06 PM IST

ಬಿಗ್‌ಬಾಸ್ ಮೊದಲ ವಾರದ ಕ್ಯಾಪ್ಟನ್‌ಗೆ ಇಮ್ಯುನಿಟಿ ಜೊತೆಗೆ ವಿಶೇಷ ಅಧಿಕಾರ ನೀಡಲಾಗುತ್ತಿದೆ. ಸ್ವರ್ಗ ಮತ್ತು ನರಕ ನಿವಾಸಿಗಳ ನಡುವೆ ನಡೆಯುವ ಈ ಸ್ಪರ್ಧೆಯಲ್ಲಿ ಗೆದ್ದವರು ಯಾರನ್ನು ಅದಲು-ಬದಲು ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.


ಕನ್ನಡ ಬಿಗ್‌ಬಾಸ್ ಸೀಸನ್ ಮೊದಲ ವಾರದ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದೆ. ಮೊದಲ ವಾರ ಮನೆಯ ಕ್ಯಾಪ್ಟನ್ ಆಗೋ ಸ್ಪರ್ಧಿಗೆ ಅತಿದೊಡ್ಡ ಅಧಿಕಾರ ನೀಡಿದೆ. ಬಿಗ್‌ಬಾಸ್ 11ನೇ ಸೀಸನ್ ಆರಂಭವಾಗಿ ಮೊದಲ ವಾರ ಕಳೆಯುತ್ತಿದ್ದು, ಫಸ್ಟ್‌ ಡೇಯಿಂದಲೇ ಜಗಳ ಶುರುವಾಗಿದೆ. ಸ್ವರ್ಗ ಮತ್ತು ನರಕ ಎಂದು ಮನೆ ಎರಡು ಭಾಗವಾಗಿದೆ. ಗೋಲ್ಡ್ ಸುರೇಶ್, ಮಾನಸಾ, ಅನುಷ್ಕಾ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಶಿಶಿರ್ ಮತ್ತು ರಂಜಿತ್ ನರಕದಲ್ಲಿದ್ದಾರೆ. ಸ್ವರ್ಗದಲ್ಲಿರುವ ನಿವಾಸಿಗಳಿಗೆ ಹೆಚ್ಚು ಸೌಲಭ್ಯಗಳು ಸಿಗುತ್ತವೆ. ನರಕ ನಿವಾಸಿಗಳಿಗೆ ಕಡಿಮೆ ಸೌಲಭ್ಯಗಳು ಸಿಗುತ್ತವೆ.

ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗೋ ಸ್ಪರ್ಧಿಗೆ ವಿಶೇಷ ರೂಮ್ ಸಿಗುತ್ತದೆ. ಹಾಗೆಯೇ ಮನೆಯ ಎಲ್ಲಾ ಚಟುವಟಿಕೆಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಇಡೀ ಒಂದು ವಾರ ಯಾರಿಗೆ ಯಾವ ಕೆಲಸಗಳನ್ನು ನೀಡಬೇಕು? ಎಷ್ಟು ಅಡುಗೆ ಮಾಡಬೇಕು ಸೇರಿದಂತೆ ಎಲ್ಲಾ ಜವಾಬ್ದಾರಿಗಳು ಕ್ಯಾಪ್ಟನ್ ಮೇಲಿರುತ್ತವೆ. ಹಾಗೆಯೇ ಕ್ಯಾಪ್ಟನ್ ಮುಂದಿನ ವಾರದ ನಾಮಿನೇಷನ್ ನಿಂದ ಪಾರಾಗುತ್ತಾರೆ. ಆದ್ರೆ 11ನೇ ಸೀಸನ್‌ನ ಮೊದಲ ಕ್ಯಾಪ್ಟನ್‌ಗೆ ಬಿಗ್‌ಬಾಸ್ ಅತಿದೊಡ್ಡ ಹಾಗೂ ವಿಶೇಷ ಅಧಿಕಾರವನ್ನು ನೀಡಲಾಗಿದೆ. ಕ್ಯಾಪ್ಟನ್ ಆಗೋರು ಮೊದಲು ಬಿಗ್‌ಬಾಸ್ ನೀಡುವ ಟಾಸ್ಕ್ ಗೆಲ್ಲಬೇಕು. 

Tap to resize

Latest Videos

undefined

ಕನ್ನಡ ಬಿಗ್ ಬಾಸ್ ಒಂದೇ ವಾರಕ್ಕೆ ಸ್ಥಗಿತ? ಮಾನವ ಹಕ್ಕು ಉಲ್ಲಂಘನೆಗಾಗಿ ಶೋ ನಿಲ್ಲಿಸುವಂತೆ ದೂರು!

ಮೊದಲ ಕ್ಯಾಪ್ಟನ್ ಟಾಸ್ಕ್‌ನ್ನು ಸ್ವರ್ಗ ನಿವಾಸಿಗಳಾದ ಯಮುನಾ, ಉಗ್ರಂ ಮಂಜು, ಭವ್ಯ, ಹಂಸ, ತ್ರಿವಿಕ್ರಮ ಮತ್ತು ಐಶ್ವರ್ಯಾ ಆಡಲಿದ್ದಾರೆ. ಆಟದಲ್ಲಿ ಇನ್ನುಳಿದ ಸ್ಪರ್ಧಿಗಳ ಸಹಾಯ ಪಡೆದುಕೊಳ್ಳಬಹುದು. ಆದರೆ ಸಹಾಯ ಮಾಡಿದ್ರೆ ನಮಗೇನು ಲಾಭ ಎಂದು ನರಕದಲ್ಲಿರೋ ಸ್ಪರ್ಧಿಗಳು ಕೇಳಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿರೋ ಸ್ಪರ್ಧಿಗಳು ನರಕವಾಸಿಯ ಒಬ್ಬರನ್ನು ಸೇರಿಸಿಕೊಂಡು ಆಡಬೇಕಿದೆ. ಆಯ್ಕೆಯಾಗುವ ಕ್ಯಾಪ್ಟನ್‌ಗೆ ಮೊದಲ ಅಡ್ವಾಂಟೇಜ್ ಸಿಗಲಿದೆ. ಬಿಗ್‌ಬಾಸ್ ನೀಡಿರುವ ಆ ವಿಶೇಷ ಅಧಿಕಾರ ಏನು ಅಂತ ನೋಡೋಣ ಬನ್ನಿ.

ಈ ವಾರ ಆಯ್ಕೆಯಾಗುವ ಕ್ಯಾಪ್ಟನ್‌ಗೆ ಸ್ವರ್ಗ ಮತ್ತು ನರಕವಾಸಿಗಳನ್ನು ಅದಲು-ಬದಲು ಮಾಡುವ ಅಧಿಕಾರ ನೀಡಲಾಗಿದೆ. ತನ್ನ ಗೆಲುವಿಗೆ ಸಹಾಯ ಮಾಡಿರುವ ನರಕವಾಸಿಯನ್ನು ಕರೆದುಕೊಂಡು ಬರುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದರೆ ಯಾರನ್ನೂ ಸ್ವರ್ಗದಿಂದ ನರಕಕ್ಕೆ ಕಳುಹಿಸುತ್ತಾರೆ ಎಂಬುದರ ಬಗ್ಗೆ ಕುತೂಹಲ ಮೂಡಿಸಿದೆ.

ವಿವಾದಾತ್ಮಕ ಬಿಗ್ ಬಾಸ್ 18 ಆರಂಭಕ್ಕೂ ಮುನ್ನ ಮನೆಯ ಒಳಾಂಗಣದ ಫೋಟೋಗಳು ಲೀಕ್!

click me!