ರಂಜಿತ್‌ ಟಾಸ್ಕ್ ಗೆದ್ದು ಬಿಗ್‌ಬಾಸ್‌ ಮನೆಯ ಮೊದಲ ಮಹಿಳಾ ಕ್ಯಾಪ್ಟನ್ ಆದ ಹಂಸ!

By Gowthami K  |  First Published Oct 4, 2024, 11:56 PM IST

ಬಿಗ್‌ಬಾಸ್‌ ಕನ್ನಡ ಸೀಸನ್ 11 ರಲ್ಲಿ ಸ್ವರ್ಗ ಮತ್ತು ನರಕ ನಿವಾಸಿಗಳ ನಡುವೆ ಟಾಸ್ಕ್‌ಗಾಗಿ ಪೈಪೋಟಿ ಏರ್ಪಟ್ಟಿದೆ. ಈ ವಾರದ ಕ್ಯಾಪ್ಟನ್ಸಿಗಾಗಿ ನಡೆದ ಟಾಸ್ಕ್‌ನಲ್ಲಿ ಸ್ವರ್ಗ ವಾಸಿಗಳು ಗೆಲುವು ಸಾಧಿಸಿದ್ದಾರೆ. ಮೊದಲ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದು ಯಾರು ಎಂಬುದು ಕುತೂಹಲ ಮೂಡಿಸಿದೆ.


ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ದಿನದಂದಲೇ ಗಲಾಟೆ ಹೆಚ್ಚಾಗಿದೆ. ಬಾಲ್‌ ಆಟದಲ್ಲಿ ಗಾಯಗೊಂಡ ತ್ರಿವಿಕ್ರಮ್ ಮತ್ತು ಸುರೇಶ್ ಇಬ್ಬರೂ ಆರೋಗ್ಯವಿದ್ದಾರೆಂದು ಮನೆಯವರಿಗೆ ಬಿಗ್ಬಾಸ್‌ ತಿಳಿಸಿದರು.  ಮಧ್ಯರಾತ್ರಿ ಮತ್ತೆ ಮನೆ ಪ್ರವೇಶಿಸಿದರು. ಇದೆಲ್ಲದರ ನಡುವೆ ಬಿಗ್‌ಬಾಸ್‌ ಮನೆಯ ಮೊದಲ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದರು.

ತ್ರಿವಿಕ್ರಮ್ ಆಡಿದ್ದು ನಾಟಕ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆಲ್ಲ ಇದು ನಾಟಕ ಎಂದು ನರಕ ನಿವಾಸಿ ಸುರೇಶ್ ಗೆ ಜಗದೀಶ್ ಹೇಳಿದರು, ಇದಕ್ಕೆ ಸುರೇಶ್ ಪಿಸುದನಿಯಲ್ಲಿ ಬಿಗ್‌ಬಾಸ್‌ ಜೊತೆಗೆ ಮಾತನಾಡಿ ಆಗ್ತಿಲ್ಲ ಬಿಗ್‌ಬಾಸ್‌ ಇವರ ಕ್ವಾಟ್ಲೆ ಎಂದರು.

Tap to resize

Latest Videos

undefined

ಬಿಗ್‌ಬಾಸ್‌ ಖ್ಯಾತಿಯ ಮಂಜು ಪಾವಗಡ ಸದ್ದಿಲ್ಲದೆ ನಿಶ್ಚಿತಾರ್ಥ, ಹುಡುಗಿ ಇವರೇ ನೋಡಿ

ಬಿಗ್‌ಬಾಸ್‌  ನವರಾತ್ರಿ ಹಬ್ಬದ ಹಿನ್ನೆಲೆ ನರಕ ನಿವಾಸಿಗಳಿಗೆ ಅವಲಕ್ಕಿ ಕೊಟ್ಟು ಕಳಿಸಿದ್ದು, ಭಯಂಕರ ಖುಷಿಯಿಂದ ತಿಂದರು. ನವರಾತ್ರಿ ಆರಂಭವಾಯ್ತು ಜಪ ಮಾಲೆ ಸಿಕ್ಕಿಲ್ಲ ಎಂದು ಜೈಲಿನಲ್ಲಿದ್ದದ್ದನ್ನು ನೆನೆಸಿ ಇಷ್ಟು ದೊಡ್ಡ ವೇದಿಕೆ ಸಿಕ್ಕಿದ್ದು ತಾಯಿ ಆಶೀರ್ವಾದ ಎಂದು ಬೇಸರ ಮಾಡಿಕೊಂಡರು. 

ಇನ್ನು ಬಾಲ್ ಟಾಸ್ಕ್ ಅನ್ನು ಮುಂದುವರೆಸುವ ಸಲುವಾಗಿ ಚೆಂಡನ್ನು ಸಂಗ್ರಹಿಸಿ ಅವನ್ನು ರಕ್ಷಿಸಿಕೊಳ್ಳಬೇಕು ಮೃಗೀಯ ವರ್ತನೆ ಬೇಡ ಎಂದು ಬಿಗ್‌ಬಾಸ್‌ ಹೇಳಿದರು. ಆದರೂ ಟಾಸ್ಕ್‌ ನಲ್ಲಿ ಆಟಗಾರರ ವರ್ತನೆ ಬದಲಾಗಲಿಲ್ಲ. ಗೆದ್ದ ಸ್ವರ್ಗ ನಿವಾಸಿಗಳು ಕ್ಯಾಪ್ಟನ್ಸಿ ಆಡಲು ಅರ್ಹತೆ ಪಡೆದರು.

ವಿವಾದಾತ್ಮಕ ಬಿಗ್ ಬಾಸ್ 18 ಆರಂಭಕ್ಕೂ ಮುನ್ನ ಮನೆಯ ಒಳಾಂಗಣದ ಫೋಟೋಗಳು ಲೀಕ್!

ಕ್ಯಾಪ್ಟನ್ಸಿ ಆಡಲು ಬಾಲ್ ಟಾಸ್ಕ್‌ ಗೆದ್ದ ಸ್ವರ್ಗ ನಿವಾಸಿಗಳಲ್ಲಿ 6 ಮಂದಿಯನ್ನು ಆಯ್ಕೆ ಮಾಡಲು ಅವಕಾಶ ನೀಡಲಾಯ್ತು, ಆದ್ರೆ ಇವರ ಪರವಾಗಿ ನರಕವಾಸಿಗಳು ಆಡಬೇಕಿತ್ತು. ಆ ಪ್ರಕಾರವಾಗಿ ಬಿಡ್‌ ಮಾಡಿ, ಮಂಜು-ಮೋಕ್ಷಿತಾ, ಯಮುನಾ-ಅನುಷಾ, ಹಂಸ-ರಂಜಿತ್, ಭವ್ಯಾ-ಶಿಶಿರ್ ಶಾಸ್ತ್ರಿ, ಐಶ್ವರ್ಯಾ-ಚೈತ್ರಾ, ತ್ರಿವಿಕ್ರಮ್-ಗೋಲ್ಡ್ ಸುರೇಶ್ ಅವರನ್ನು ಪಡೆದುಕೊಂಡರು.

ಬ್ಯಾಲೆನ್ಸ್ ಮಾಡುವ ಆಟದಲ್ಲಿ ಹಂಸ ಪರ ಆಡಿದ ರಂಜಿತ್ ಗೆದ್ದರು. ಈ ಹಿನ್ನೆಲೆಯಲ್ಲಿ ಹಂಸ ಅವರು ಬಿಗ್‌ಬಾಸ್‌ 11 ರ ಮೊದಲ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದರು. ಮತ್ತು ಮುಂದಿನ ವಾರಕ್ಕೆ ಇಮ್ಯೂನಿಟಿ ಪಡೆದರು.  ಮೊದಲ ವಾರ ಸ್ವರ್ಗದಲ್ಲಿರುವ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್,  ಗೌತಮಿ ಜಾಧವ್, ಭವ್ಯಾ ಗೌಡ ಮತ್ತು ಹಂಸ ನಾಮಿನೇಷನ್‌ನಲ್ಲಿದ್ದರೆ, ನರಕದಲ್ಲಿರುವ ಚೈತ್ರಾ ಕುಂದಾಪುರ, ಶಿಶಿರ್‌ ಶಾಸ್ತ್ರಿ, ಮೋಕ್ಷಿತಾ ಪೈ ಹಾಗೂ ಮಾನಸಾ ಸಂತೋಷ್‌ ನಾಮಿನೇಟ್‌ ಆಗಿದ್ದಾರೆ.

click me!