ಶಿವಮೊಗ್ಗ ನಗರದಲ್ಲಿ ನಾಳೆಯಿಂದ ಗಜಪಡೆ ತಾಲೀಮು ನಡೆಸಲಿದೆ. ಈ ಬಾರಿಯೂ ಸಾಗರ್ ಆನೆ ಅಂಬಾರಿ ಹೊರಲಿದ್ದಾನೆ. ಸಾಗರ್‌ಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಲಿವೆ. ದಸರಾದ ಕೊನೆ ದಿನದಂದು ಅದ್ಧೂರಿ ಜಂಬೂಸವಾರಿ ನಡೆಯಲಿದೆ.
ಶಿವಮೊಗ್ಗ(ಅ.04): ದಸರಾ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಕ್ಕೆ ಇಂದು(ಶುಕ್ರವಾರ) ಗಜಪಡೆ ಆಗಮಿಸಿದೆ. ಶಿವಮೊಗ್ಗದ ಸಕ್ರೆಬೈಲಿನ ಮೂರು ಆನೆಗಳು ಆಗಮಿಸಿವೆ. ಜಂಬೂಸವಾರಿಯಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ಗಜಪಡೆ ಆಗಮಿಸಿದೆ.
ಇಂದು ಸಂಜೆ ನಗರಕ್ಕೆ ಆನೆಗಳು ಆಗಮಿಸಿವೆ. ಶಾಸಕ ಎಸ್. ಎನ್. ಚನ್ನಬಸಪ್ಪ ಹಾಗೂ ಪಾಲಿಕೆ ಆಯುಕ್ತೆ ಕವಿತ ಯೋಗಪ್ಪನವರ್ ಅವರು ಆನೆಗಳಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿದ್ದಾರೆ. ನಗರದ ವಾಸವಿ ಶಾಲೆ ಆವರಣದಲ್ಲಿ ಆನೆಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ.
undefined
ಸಿನಿಮಾ ತಾರೆಯರಿಂದ ಕಳೆಗಟ್ಟಿದ ಶಿವಮೊಗ್ಗ ದಸರಾ: ನಟಿ ಉಮಾಶ್ರೀ, ಭೀಮಾ ಖ್ಯಾತಿಯ ಪ್ರಿಯಾ ಕಣ್ತುಂಬಿಕೊಂಡ ಜನ!
ಶಿವಮೊಗ್ಗ ನಗರದಲ್ಲಿ ನಾಳೆಯಿಂದ ಗಜಪಡೆ ತಾಲೀಮು ನಡೆಸಲಿದೆ. ಈ ಬಾರಿಯೂ ಸಾಗರ್ ಆನೆ ಅಂಬಾರಿ ಹೊರಲಿದ್ದಾನೆ. ಸಾಗರ್‌ಗೆ ಬಾಲಣ್ಣ ಮತ್ತು ಬಹದ್ದೂರ್ ಆನೆಗಳು ಸಾಥ್ ನೀಡಲಿವೆ. ದಸರಾದ ಕೊನೆ ದಿನದಂದು ಅದ್ಧೂರಿ ಜಂಬೂಸವಾರಿ ನಡೆಯಲಿದೆ.
ಸಾಗರ್ ಆನೆ ಸುಮಾರು 650 ಕೆ.ಜಿ ಬೆಳ್ಳಿಯ ಅಂಬಾರಿ ಹೊರಲಿದ್ದಾನೆ. ರಾಜ್ಯದಲ್ಲೇ ಶಿವಮೊಗ್ಗ ದಸರಾ ಎರಡನೇ ಅತಿದೊಡ್ಡ ದಸರಾ ಎಂದು ಖ್ಯಾತಿ ಹೊಂದಿದೆ. ಈ ಬಾರಿ ಶಿವಮೊಗ್ಗ ಮಹಾನಗರಪಾಲಿಕೆ ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿದೆ.