Sep 23, 2020, 1:00 PM IST
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ಗ್ರಹವೂ ಸ್ಥಾನಪಲ್ಲಟ ಮಾಡುವಾಗ ಅದು ಜಾತಕದ ಮೇಲೆ ಪ್ರಭಾವ ಬೀರುತ್ತದೆ. ಲಾಭ ನಷ್ಟಗಳು ನಿರ್ಧರಿತವಾಗುತ್ತವೆ. ಅದರಲ್ಲೂ ರಾಹು-ಕೇತು ಗ್ರಹಗಳ ಸ್ಥಾನಪಲ್ಲಟದಿಂದ ಅಶುಭವೇ ಹೆಚ್ಚು ಎಂಬ ನಂಬಿಕೆ ಅನೇಕರದ್ದು. ಈಗ ರಾಹು- ಕೇತು ಗ್ರಹಗಳು ಸ್ಥಾನಪಲ್ಲಟ ಮಾಡುತ್ತಿವೆ. 18 ತಿಂಗಳಿಗೊಮ್ಮೆ ಸ್ಥಾನ ಪಲ್ಲಟ ನಡೆಯುತ್ತದೆ. ಇದು ಕೆಲವು ರಾಶಿಯವರಿಗೆ ಶುಭ ತಂದರೆ ಇನ್ನು ಕೆಲವರಿಗೆ ಅಶುಭ ತರುತ್ತದೆ. ಬರೀ ಅಶುಭವೇ ಆಗುತ್ತದೆ ಎಂದು ಭಾವಿಸಬೇಕಿಲ್ಲ. ಒಳಿತು ಕೂಡಾ ಆಗಬಹುದು.
ಕೇತು ದೋಷದಿಂದ ಮುಕ್ತಿ ಪಡೆಯಲು ಹೀಗ್ ಮಾಡಿ ನೋಡಿ..
ಈ ಸ್ಥಾನಪಲ್ಲಟ ವೃಶ್ಚಿಕ ರಾಶಿಯವರ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ರಾಜಕೀಯ ನಾಯಕರಾದ ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿಯವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಯಾರಿಗೆ ಶುಭ? ಯಾರಿಗೆ ಅಶುಭ? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..!