ಗಣಪತಿಗೆ ವ್ಯಾಲಬದ್ಧ ಎಂದು ಹೆಸರು ಬಂದಿದ್ದೇಕೆ?

Oct 8, 2020, 10:05 AM IST

ಒಮ್ಮೆ ಶೇಷನು, ಗಣಪತಿಯ ಬಳಿ ಹೀಗೆ ಕೇಳುತ್ತಾನೆ. ಮೂರು ಲೋಕದಲ್ಲಿಯೂ ಶ್ರೇಷ್ಠತ್ವವನ್ನು ಪಡೆಯುವ, ಶಿವನ ಸನ್ನಿಧಿಯಲ್ಲಿರುವ ಅದೃಷ್ಟವನ್ನು, ನಿನ್ನ ಮೇಲೆ ಸ್ಥಿರ ಭಕ್ತಿಯನ್ನು ನನ್ನ ಮೇಲೆ ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾನೆ. ಆಗ ಮಹಾಗಣಪತಿ, ಶೇಷ, ನೀನು ಸಹಸ್ರ ವದನನಾಗಿ ಪ್ರಖ್ಯಾತನಾಗುತ್ತೀಯ. ಶಿವನ ಶಿರಸ್ಸು ಧರಿಸುತ್ತಿದ್ದೀಯಾ, ನನ್ನ ಸಾನಿಧ್ಯದಲ್ಲಿರುತ್ತೀಯ ಎಂದು ವರಗಳ ಸುರಿಮಳೆ ಸುರಿಸಿ, ಶೇಷನನ್ನು ತನ್ನ ಉದರಕ್ಕೆ ಕಟ್ಟಿಕೊಳ್ಳುತ್ತಾನೆ. ಹಾಗಾಗಿ ಗಣಪತಿಗೆ ವ್ಯಾಲಬದ್ಧ ಎಂಬ ಹೆಸರು ಬಂತು. 

ಕಾರ್ತಿಕೇಯನಿಗೆ ಶತ್ರುಗಳನ್ನು ಜಯಿಸಲು ಸಹಾಯ ಮಾಡಿದ್ದು ವರದ ಗಣಪತಿ ವ್ರತ