Latest Videos

ಪುಟ್ಟಕ್ಕನ ಮಕ್ಕಳು ನಟಿ ಸೀರೆ ಲುಕ್ ವೈರಲ್… ಸೀರಿಯಲ್ಲಲ್ಲೂ ಹೀಗ್ ಕಾಣಿಸ್ಕೋಬಾರ್ದಾ ಅಂತಿದ್ದಾರೆ ಫ್ಯಾನ್ಸ್

First Published May 26, 2024, 5:58 PM IST

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಟಿ ಸಂಜನಾ ಬುರ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 
 

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಟಿ ಸಂಜನಾ ಬುರ್ಲಿ ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಮ್ಮ ಸ್ಪೆಷಪ್ ಡೇಯಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 
 

ಇಂಡಿಗೋ ಬಣ್ಣದ ಕಾಟನ್ ಸೀರೆಯುಟ್ಟು, ಬಿಳಿ ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿರುವ ಸಂಜನಾ (Sanjana Burli) ತುಂಬಾ ಸುಂದರವಾಗಿ ಕಾಣಿಸ್ತಿದ್ದಾರೆ. ಅಭಿಮಾನಿಗಳು ಸಹ ಇವರ ಲುಕ್‌ಗೆ ಫಿದಾ ಆಗಿದ್ದಾರೆ. 
 

ಸೀರಿಯಲ್‌ನಲ್ಲಿ ಯಾವಾಗಲೂ ಮೈತುಂಬಾ ಸೀರೆಯುಟ್ಟು, ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸುತ್ತಾರೆ. ಆದರೆ ನಿಜ ಜೀವನದಲ್ಲಿ ಇವರು ಸಖತ್ ಸ್ಟೈಲಿಶ್ ಆಗಿದ್ದಾರೆ. ಇದೇ ಸೀರೆ ಲುಕ್ ಸ್ನೇಹಾ ಕೂಡ ಧರಿಸಿದ್ರೆ ತುಂಬಾ ಚೆನ್ನಾಗಿ ಕಾಣಿಸ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 
 

ತುಂಬಾ ಸುಂದರವಾಗಿ ಕಾಣಿಸ್ತೀರಾ, ಗಾರ್ಜಿಯಸ್, ಬ್ಯೂಟಿಫುಲ್ ಎಂದೆಲ್ಲಾ ಕಾಮೆಂಟ್ ಮಾಡಿದ್ದು, ಮತ್ತೊಬ್ಬರು ನಿಮ್ಮಂಥ ಅಂದಗಾರ್ತಿಯನ್ನು ಈ ಭೂಮಿ ಮೇಲೆ ಸೃಷ್ಟಿಸಿದ ಆ ದೇವರಿಗೆ ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ. 
 

ಪುಟ್ಟಕ್ಕನ ಮಕ್ಕಳು ಸೀರಿಲ್ಲಲ್ಲಿ ಸ್ನೇಹಾ ಆಗಿ ನಟಿಸಿ ಸೈ ಎನಿಸಿಕೊಂಡಿರುವ ಸಂಜನಾ, ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಮಿಸ್ಸು ಪಾತ್ರದ ಮೂಲಕ ಅವರು ಜನರಿಗೆ ತುಂಬಾನೆ ಹತ್ತಿರವಾಗಿದ್ದಾರೆ. 

ಸಂಜನಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಹೆಚ್ಚಾಗಿ ತಮ್ಮ ಮಾಡರ್ನ್ ಮತ್ತು ಟ್ರೆಡಿಶನಲ್ ಲುಕ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಟ್ರಾವೆಲ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 

ಇದೀಗ ಸಂಜನಾ ಸಿನಿಮಾಗಳಲ್ಲೂ ನಟಿಸುತ್ತಿದ್ದು, ಪುಟ್ಟಕ್ಕನ ಮಕಳು ಸೀರಿಯಲ್ ನಲ್ಲಿ ಸಹನಾ ಗಂಡ ಮುರಳಿ ಖ್ಯಾತಿಯ ಪವನ್ ಜೊತೆಗೆ ಒಂದು ರೊಮ್ಯಾಂಟಿಕ್ ಸಿನಿಮಾದಲ್ಲಿ ನಾಯಕಿಯಾಗಿ ಸಂಜನಾ ನಟಿಸುತ್ತಿದ್ದಾರೆ. 

click me!