Latest Videos

ಮಗ ಹೈದರಾಬಾದ್‌ನಲ್ಲಿ, ತಾಯಿ ಅಮೆರಿಕಾದಲ್ಲಿ; ನಾಗ ಚೈತನ್ಯ ತಾಯಿ ಇಲ್ಲದ ತಬ್ಬಲಿ!

By Shriram BhatFirst Published May 26, 2024, 5:58 PM IST
Highlights

ಹೈದ್ರಾಬಾದ್‌ನಲ್ಲಿ ಅಪ್ಪ ನಾಗಾರ್ಜುನ ಜೊತೆಯಲ್ಲಿ ನೆಲೆಸಿರುವ ನಾಗ ಚೈತನ್ಯ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿಯಂತೆ ಆಗಿದ್ದಾರೆ. ನಟಿ ಸಮಂತಾರನ್ನು ಮದುವೆಯಾಗಿ ಡಿವೋರ್ಸ್ ತೆಗೆದುಕೊಂಡ ಬಳಿಕ ನಾಗ ಚೈತನ್ಯ ಅವರು ಒಬ್ಬಂಟಿ ಎನ್ನಬಹುದು.

ತೆಲುಗು ನಟ ನಾಗಚೈತನ್ಯ ಜೀವನ ನಿಜವಾಗಿಯೂ ಒಂದು ದುರಂತ ಕಥೆ ಎನ್ನಬಹುದು. ಹೆತ್ತಮ್ಮ ಅಮೆರಿಕಾದಲ್ಲಿ, ಮಗ ಇಲ್ಲಿ ಎಂಬ ಪರಿಸ್ಥಿತಿಯಲ್ಲಿ ನಾಗಚೈತನ್ಯ ಜೀವನ ನಿಜವಾಗಿಯೂ ಅಗ್ನಿ ಪರೀಕ್ಷೆ ಎನ್ನಬಹುದು. ಸ್ಟಾರ್ ನಟ ನಾಗಾರ್ಜುನರ ಮೊದಲ ಹೆಂಡತಿ ಲಕ್ಷ್ಮಿ ಅವರಿಂದ ಡಿವೋರ್ಸ್ ಪಡೆದ ಬಳಿಕ ಸುಂದರಂ ಮೋಟಾರ್ಸ್‌ನ ಕಾರ್ಪೋರೇಟ್ ಎಕ್ಸಿಕ್ಯೂಟಿವ್ ಶರತ್ ವಿಜಯರಾಘವನ್ ದಗ್ಗುಬಾಟಿ ಅವರನ್ನು 2ನೇ ಮದುವೆಯಾಗಿದ್ದಾರೆ. 

ಮದುವೆ ಬಳಿಕ ಲಕ್ಷ್ಮೀ ದಗ್ಗುಬಾಟಿ ಅವರು ಅಮೆರಿಕಾದಲ್ಲಿ ನೆಲೆಸಿದ್ದರಿಂದ ನಾಗ ಚೈತನ್ಯ ತಾಯಿಯಿಂದ ದೂರವಾಗಬೇಕಾಯ್ತು. ಹೈದ್ರಾಬಾದ್‌ನಲ್ಲಿ ಅಪ್ಪ ನಾಗಾರ್ಜುನ ಜೊತೆಯಲ್ಲಿ ನೆಲೆಸಿರುವ ನಾಗ ಚೈತನ್ಯ ತಾಯಿಯನ್ನು ಕಳೆದುಕೊಂಡಿರುವ ತಬ್ಬಲಿಯಂತೆ ಆಗಿದ್ದಾರೆ. ನಟಿ ಸಮಂತಾರನ್ನು ಮದುವೆಯಾಗಿ ಡಿವೋರ್ಸ್ ತೆಗೆದುಕೊಂಡ ಬಳಿಕ ನಾಗ ಚೈತನ್ಯ ಅವರು ಒಬ್ಬಂಟಿ ಎನ್ನಬಹುದು.

ಓಂ ಬಿಡುಗಡೆಗೆ ಪೊಲೀಸ್‌ ಇಲಾಖೆಯೇ ಅಡ್ಡಗಾಲು, ಡಾ ರಾಜ್‌ಕುಮಾರ್ ಮಾಡಿದ್ದೇನು?

ಅವರಿವರ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಇದ್ದರೂ ಲೈಫ್ ಪಾರ್ಟನರ್‌ ಅಂತ ಸದ್ಯಕ್ಕೆ ಯಾರೂ ಇಲ್ಲ. ಆದ್ದರಿಂದ ಸದ್ಯ ನಾಗ ಚೈತನ್ಯ ಅವರನ್ನು ಸದ್ದಯ ತಾಯಿಯಿಲ್ಲದ ತಬ್ಬಲಿ, ಪತ್ನಿಯಿಲ್ಲದ ಪತಿ ಎನ್ನಬಹುದು. ನಟ ನಾಗ ಚೈತನ್ಯ ಕೆರಿಯರ್ ಕೂಡ ಸದ್ಯ ಆಹಾ, ಓಹೋ ಎನ್ನುವಷ್ಟು ಚೆನ್ನಾಗಿ ಇಲ್ಲ. ಅಪರೂಪಕ್ಕೆ ಎನ್ನುವಂತೆ ಆಗಾಗ ಸಿಗುವ ಸಕ್ಸಸ್ ನಾಗ ಚೈತನ್ಯ ಪಾಲಿಗೆ ಉಸಿರಾಟಕ್ಕೆ ಮಾತ್ರ ಅವಕಾಶ ನೀಡಿದೆ ಎನ್ನಬಹುದು.

ಮುದ್ದಿಸಿದೆ, ಚುಂಬಿಸಿದೆ, ಅದರಲ್ಲೇನು ತಪ್ಪು? ಅದೊಂದು ಕೆಟ್ಟ ಅನುಭವ ತಲೆ ಕೆಡಿಸುತ್ತಿದೆ!

ಆದರೆ, ತೆಲುಗುನ ಬೇರೆ ಸ್ಟಾರ್ ನಟರಿಗೆ ಹೋಲಿಸಿದರೆ ನಾಗ ಚೈತನ್ಯ ಗ್ರಾಫ್ ಅಷ್ಟಕ್ಕಷ್ಟೇ. ಅಪ್ಪ ನಾಗಾರ್ಜುನ್ ಮೊದಲ ಹೆಂಡತಿಯಿಂದ ಡಿವೋರ್ಸ್‌ ತೆಗೆದುಕೊಳ್ಳುವ ಮೊದಲೇ ಅಮಲಾ ಅವರನ್ನು ಲವ್ ಮಾಡತೊಗಿದ್ದರು. ಈ ಮೂಲಕ ಮೊದಲ ಹೆಂಡತಿ ದೂರವಾಗುವ ಮೊದಲೇ ನಾಗಾರ್ಜುನ ಎರಡನೇ ಹೆಂಡತಿಯ ಆಸರೆ ಪಡೆದುಕೊಂಡಿದ್ದರು. ಆದರೆ ನಾಗ ಚೈತನ್ಯ ಜೀವನ ಹಾಗಿಲ್ಲ. 

'ಕಾಮಕ್ಕೆ ಕಮಿಟ್‌ಮೆಂಟ್ ಯಾಕೆ ಬೇಕು' ಅಂದ್ಬಿಟ್ರಾ ಕೆಲಸ ಮುಗಿಸ್ಕೊಂಡ ಪವನ್ ಕಲ್ಯಾಣ್!

ಅಕ್ಕಿನೇನಿ ಕುಟುಂಬದ ಬಗ್ಗೆ ಜನರು ವಿಭಿನ್ನ ರೀತಿಯಲ್ಲಿ ಮಾತನಾಡುತ್ತಾರೆ. ಮದುವೆಯಾಗಿ ಮಕ್ಕಳಾದ ಮೇಲೆ ನಟ ನಾಗಾರ್ಜುನ ಸಹನಟಿ ಅಮಲಾ ಪೌಲ್ ಅವರನ್ನು ಲವ್ ಮಾಡಿ ಮದುವೆಯಾಗಿದ್ದಾರೆ. ಅದೂ ಸಾಲದು ಎಂಬಂತೆ, ಅಮಲಾ ಲವ್ ಮಾಡಿ ಮದುವೆ ಮಾಡಿಕೊಂಡ ಬಳಿಕ ಕೂಡ ಅವರಿಗೆ ಸುಖ ಸಂಸಾರ ಮಾಡಲು ಸಾಧ್ಯವಾಗಲಿಲ್ಲ. ಆ ನಂತರ ಕೂಡ ನಟಿ ಟಬು ಅವರ ಜತೆ ನಟ ನಾಗಾರ್ಜುನ ಬರೋಬ್ಬರಿ ಹತ್ತು ವರ್ಷಗಳ ಕಾಲ ಲಿವಿಂಗ್ ಟುಗೇದರ್ ಇದ್ದರು. ಈಗ ನೋಡಿದರೆ ನಾಗಾರ್ಜುನ ಮಗ ನಾಗ ಚೈತನ್ಯ ಕೂಡ ಅಪ್ಪನಂತೆ ಪತ್ನಿಗೆ ಡಿವೋರ್ಸ್ ನೀಡಿದ್ದಾನೆ. ಏನಾಗಿದೆ ಈ ಅಕ್ಕಿನೇನಿ ಫ್ಯಾಮಿಲಿಗೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

 

 

click me!