Latest Videos

ಮಾಲಾ ಟಮ್​ ಟಮ್​ ಎಂದ ಸೀತಾರಾಮ ಪ್ರಿಯಾ: ನಿಮ್​ ನೋಡಿ ಎದೆ ಡಬ್​ ಡಬ್​ ಆಯ್ತು ಎಂದ ಫ್ಯಾನ್ಸ್​

By Suchethana DFirst Published May 26, 2024, 6:06 PM IST
Highlights

ಮಾಲಾ ಟಮ್​ ಟಮ್​ ಹಾಡಿಗೆ ರೀಲ್ಸ್​ ಮಾಡಿದ  ಸೀತಾರಾಮ ಪ್ರಿಯಾ ಅಲಿಯಾಸ್​ ಮೇಘನಾ ಶಂಕಪ್ಪ. ನಿಮ್​ ನೋಡಿ ಎದೆ ಡಬ್​ ಡಬ್​ ಆಯ್ತು ಎಂದ ಫ್ಯಾನ್ಸ್​
 

2021ರಲ್ಲಿ ಬಿಡುಗಡೆಯಾದ ತಮಿಳಿನ ಎನಿಮಿ ಚಿತ್ರದ ಮಾಲಾ ಟಮ್​ ಟಮ್​ ಹಾಡು ಸಕತ್​ ಫೇಮಸ್​ ಆಗಿದೆ. ಇದಕ್ಕೆ ಹಲವಾರು ಮಂದಿ ಇದಾಗಲೇ ರೀಲ್ಸ್​ ಮಾಡಿದ್ದಾರೆ. ಇದೀಗ ಸೀತಾರಾಮ ಸೀರಿಯಲ್​ ಪ್ರಿಯಾ ಕೂಡ ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಹಾರ್ಟ್​ ಇಮೋಜಿಗಳು ತುಂಬಿ ಹೋಗಿದ್ದು, ಸೂಪರ್​ ಸೂಪರ್​ ಎನ್ನುತ್ತಿದ್ದಾರೆ. ನಿಮ್ಮ ಈ ರೀಲ್ಸ್​ ನೋಡಿ ಎದೆ ಡಬ್​ ಡಬ್ ಆಯ್ತು ಅಂತಿದ್ದಾರೆ ಯುವ ನೆಟ್ಟಿಗ​ರು. 

ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  ಮೇಘನಾ ಭರತನಾಟ್ಯ ಕಲಾವಿದೆ, ನಟಿ, ನಿರೂಪಕಿ ಕೂಡ ಹೌದು.

Birthday Girl Sanjana Burli: ನಟಿಯಾಗೋದು ಹೇಗೆಂದು ಗೂಗಲ್​ನಲ್ಲಿ ಸರ್ಚ್​ ಮಾಡ್ತಿದ್ರಂತೆ ಪುಟ್ಟಕ್ಕನ ಮಗಳು!

ಅಷ್ಟಕ್ಕೂ ಪ್ರಿಯಾ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ‘ಸೀತಾ ರಾಮ’ ಧಾರಾವಾಹಿಯಲ್ಲಿ ಚಿನಕುರಳಿ, ಪಟ ಪಟ ಅಂತ ಮಾತಾಡುವ ಪ್ರಿಯಾ ಪಾತ್ರದಲ್ಲಿ ನಟಿ ಮೇಘನಾ ಶಂಕರಪ್ಪ ಅವರು ಗಮನ ಸೆಳೆಯುತ್ತಿದ್ದಾರೆ. ಮೇಘನಾ, ಪ್ರಿಯಾ ಪಾತ್ರಕ್ಕೂ ಅಷ್ಟು ವ್ಯತ್ಯಾಸ ಏನಿಲ್ಲ. ಕನ್ನಡ ಕಿರುತೆರೆಯಲ್ಲಿ ‘ಸೀತಾರಾಮ’ ಧಾರಾವಾಹಿ ಸದ್ಯ ಟಾಪ್ 5 ಸ್ಥಾನ ಪಡೆದಿದೆ. ಈ ಧಾರಾವಾಹಿಯಲ್ಲಿ ಸೀತಾ-ಪ್ರಿಯಾ ಸ್ನೇಹಿತರಾಗಿರುತ್ತಾರೆ. ತೆರೆ ಹಿಂದೆ ಕೂಡ ಮೇಘನಾ, ವೈಷ್ಣವಿ ಗೌಡ ಅವರು ಸ್ನೇಹಿತರು. ಇವರಿಬ್ಬರು ಯುಟ್ಯೂಬ್ ಚಾನೆಲ್ ಹೊಂದಿದ್ದು, ವಿಡಿಯೋಗೋಸ್ಕರ ಒಟ್ಟಿಗೆ ಸುತ್ತಾಟ ಮಾಡುತ್ತಾರೆ, ಶಾಪಿಂಗ್ ಮಾಡುತ್ತಾರೆ.

ಪ್ರಿಯಾ ಪಾತ್ರಕ್ಕೆ ಮೇಘನಾ ಶಂಕರಪ್ಪ ಅವರು ಜೀವ ತುಂಬುತ್ತಿದ್ದಾರೆ. ಈ ಹಿಂದೆಯೂ ಅವರು 'ಕಿನ್ನರಿ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ಮೇಘನಾ ಶಂಕರಪ್ಪ ಅವರು ಎಲ್ಲಿಯೇ ಹೋದರೂ ಕೇಳಲಾಗುವ ಪ್ರಶ್ನೆ, ಅಶೋಕ್​ ಮತ್ತು ಅವರ ಸ್ನೇಹದ ಕುರಿತು.  ಧಾರಾವಾಹಿಯಲ್ಲಿ ಪ್ರಿಯಾ ಮತ್ತು ಅಶೋಕ್ ಮದುವೆಯಾಗಿದ್ದಾರೆ. ಆದರೆ ಅಸಲಿಗೆ ಅಶೋಕ್​ ಅವರು ಪ್ರಿಯಾಗಿಂತ ತುಂಬಾ ದೊಡ್ಡವರು ಹಾಗೂ ಅವರಿಗೆ ಈಗಾಗಲೇ ಮದುವೆಯಾಗಿದೆ. 

ಅಶೋಕಂಗೆ ಕರಿಮಣಿ ಮಾಲೀಕ ನೀನಲ್ಲ ಎನ್ನೋದಾ ಪ್ರಿಯಾ: ಹೀಗೆಲ್ಲಾ ಹೇಳ್ಬೇಡಿ ಪ್ಲೀಸ್​ ಅಂತಿದ್ದಾರೆ ಫ್ಯಾನ್ಸ್​


click me!