ಅನ್‌ಲಾಕ್‌ 4.0, ಶಾಲಾ-ಕಾಲೇಜು ಆರಂಭವಿಲ್ಲ, ವಿದ್ಯಾರ್ಥಿಗಳಿಗೆ ಇದೊಂದು ಅವಕಾಶ ಇದೆ!

Aug 30, 2020, 10:46 AM IST

ಬೆಂಗಳೂರು (ಆ. 30): ಕೊರೊನಾ ನಿಗ್ರಹಕ್ಕಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನನ್ನು ಕೇಂದ್ರ ಸರ್ಕಾರ ಹಂತ ಹಂತವಾಗಿ ತೆರವುಗೊಳಿಸುತ್ತಿದೆ. ಅನ್‌ಲಾಕ್ 4.0 ಮಾರ್ಗಸೂಚಿ ಬಿಡುಗಡೆಯಾಗಿದೆ. 

ಶಾಲಾ - ಕಾಲೇಜುಗಳ ಆರಂಭಕ್ಕೆ ಅನ್‌ಲಾಕ್‌ 4.0 ನಲ್ಲಿ ಅವಕಾಶ ನೀಡಿಲ್ಲ. ಆದರೆ ಒಂದಷ್ಟು ರಿಲಾಕ್ಸೇಷನ್ ನೀಡಿದೆ. 9 ರಿಂf 12 ನೇ ತರಗತಿ ವಿದ್ಯಾರ್ಥಿಗಳು ಕಂಟೈನ್ಮೆಂಟ್ ಪ್ರದೇಶದ ಹೊರಗಿನ ಪ್ರದೇಶಗಳಲ್ಲಿ ಆನ್‌ಲೈನ್ ತರಗತಿ ವೇಳೆ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಅನುಮತಿ ನೀಡಿದೆ. ಶೇ. 50 ರಷ್ಟು ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಆನ್‌ಲೈನ್ ತರಗತಿಗಾಗಿ ಶಾಲೆಗೆ ಬಂದು ಪಾಠ ಮಾಡಲು ಅವಕಾಶ ನೀಡಲಾಗಿದೆ. 

ಶಾಲೆ- ಕಾಲೇಜು ಪ್ರಾರಂಭದ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸರ್ಕಾರ